ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ
ಖ್ಯಾತ ಮಲಯಾಳಂ ನಟ, ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಿರ್ಮಾಪಕ (Veteran Malayalam actor) ಶ್ರೀನಿವಾಸನ್(Sreenivasan) ಅವರು ಇಂದು (ಡಿಸೆಂಬರ್ 20) ನಿಧನ ಹೊಂದಿದ್ದಾರೆ. 69 ವರ್ಷದ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕೇರಳದ ಉದಯಂಪೆರೂರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲ ನೀಡದೇ ಅವರು ಕೊನೆಯುಸಿರೆಳೆದಿದ್ದಾರೆ.
ಬಹುಮುಖ ಪ್ರತಿಭೆ – ನಟ, ಬರಹಗಾರ, ನಿರ್ದೇಶಕ
ನಟನಾಗಿ ಮಾತ್ರವಲ್ಲದೆ, ಚಿತ್ರಕಥೆ ಬರಹಗಾರ ಹಾಗೂ ನಿರ್ದೇಶಕರಾಗಿಯೂ ಶ್ರೀನಿವಾಸನ್ ತಮ್ಮದೇ ಆದ ಗುರುತು ಮೂಡಿಸಿದ್ದರು. ಚಿತ್ರಕಥೆ ಬರಹಗಾರನಾಗಿಯೂ ಶ್ರೀನಿವಾಸನ್ ಕೆಲಸ ಮಾಡಿದ್ದಾರೆ. ಅವರು ಮಮ್ಮೂಟ್ಟಿ ಹಾಗೂ ನಿವೀನ್ ಪೌಳಿಗೆ ತಲಾ ಒಂದೊಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಎರಡು ಸಿನಿಮಾ ನಿರ್ಮಿಸಿದ್ದಾರೆ.
ಜೀವನ ಪರಿಚಯ :
ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ 1956ರ ಏಪ್ರಿಲ್ 6ರಂದು ಶ್ರೀನಿವಾಸನ್ ಜನಿಸಿದರು. ಅವರು ಅರ್ಥ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಆ ಬಳಿಕ ಚೆನ್ನೈನಲ್ಲಿ ಅವರು ಫಿಲ್ಮ್ ಆ್ಯಂಡ್ ಟೆಲಿವಿಷನ್ ಸಂಸ್ಥೆಯಲ್ಲಿ ಸಿನಿಮಾ ಸಂಬಂಧಿತ ತರಬೇತಿ ಪಡೆದರು.
1976ರ ‘ಮನಿಮುಳಕ್ಕಮ್’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. ವೃತ್ತಿ ಜೀವನದುದ್ದಕ್ಕೂ 2-3 ತಮಿಳು ಸಿನಿಮಾ ಮಾಡಿದ್ದು ಹೊರತುಪಡಿಸಿ ಉಳಿದ ಎಲ್ಲಾ ಚಿತ್ರಗಳನ್ನು ಅವರು ಮಾಡಿದ್ದು ಮಲಯಾಳಂನಲ್ಲಿಯೇ. ಸುಮಾರು 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಶ್ರಮಿಸಿದ ಅವರು, 200ಕ್ಕೂ ಅಧಿಕ ಸಿನಿಮಾ ಮಾಡಿದ್ದಾರೆ. ಅವರು ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದು 2018ರಲ್ಲಿ.
ನಾಲ್ಕು ದಶಕಗಳ ಸಿನಿ ಪಯಣ :
1976ರಲ್ಲಿ ಬಿಡುಗಡೆಯಾದ ‘ಮನಿಮುಳಕ್ಕಮ್’ ಚಿತ್ರದ ಮೂಲಕ ನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು, ನಂತರ ಅನೇಕ ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿದರು. ವೃತ್ತಿ ಜೀವನದಲ್ಲಿ 2–3 ತಮಿಳು ಸಿನಿಮಾಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಚಿತ್ರಗಳನ್ನು ಮಲಯಾಳಂನಲ್ಲಿ ಮಾಡಿದ್ದಾರೆ. ಸುಮಾರು 40 ವರ್ಷಗಳ ಸಿನಿ ಜೀವನದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಅವರು, ಕೊನೆಯದಾಗಿ 2018ರಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.
ಪ್ರಶಸ್ತಿಗಳು :
ಶ್ರೀನಿವಾಸನ್ ಅವರು, ರಾಷ್ಟ್ರ ಪ್ರಶಸ್ತಿ, ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್ ಫೆರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟನಾಗಿ, ಬರಹಗಾರನಾಗಿ ಈ ಗೌರವ ಸ್ವೀಕರಿಸಿದ್ದಾರೆ.
- ಸಂವಿಧಾನ ಕುರಿತು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಾಮಾನ್ಯ ಅಂಶಗಳು (Constitution of India)
- ಭಾರತದ ಪ್ರಧಾನ ಮಂತ್ರಿ(Prime Minister of India)ಯನ್ನು ಯಾರು ನೇಮಿಸುತ್ತಾರೆ..? ಪ್ರಕ್ರಿಯೆ ಏನು..?
- ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ 2ನೇ ಅತಿ ವೇಗದ ಅರ್ಧಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ (Hardik Pandya)
- ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ
- ಬಾಹ್ಯಾಕಾಶಕ್ಕೆ ತೆರಳಲಿರುವ ಮೊದಲ ವೀಲ್ಚೇರ್ ಗಗನಯಾತ್ರಿಯಾಗಿ ಮೈಕೆಲಾ ಬೆಂಥೌಸ್ (Michaela Benthaus)

