Current AffairsLatest Updates

Sonali Mishra : ಆರ್‌ಪಿಎಫ್ ನೇತೃತ್ವ ವಹಿಸಿದ ಮೊದಲ ಮಹಿಳೆ ಸೋನಾಲಿ ಮಿಶ್ರಾ

Share With Friends

Sonali Mishra Becomes First Woman to Lead RPF : ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್) ಮಹಾನಿರ್ದೇಶಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸೋನಾಲಿ ಅವರು ಈ ಹುದ್ದೆಗೆ ಏರುತ್ತಿರುವ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾರೆ.

1993 ರ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅವರನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನ ಮಹಾನಿರ್ದೇಶಕ (ಡಿಜಿ) ಆಗಿ ನೇಮಿಸಲಾಗಿದೆ. ರೈಲ್ವೆ ಪ್ರಯಾಣಿಕರು ಮತ್ತು ಆಸ್ತಿಯ ಸುರಕ್ಷತೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಆರ್‌ಪಿಎಫ್‌ನ ಮುಖ್ಯಸ್ಥರಾಗಲಿರುವ ಮೊದಲ ಮಹಿಳೆ ಇವರು. ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಅವರ ನೇಮಕಾತಿಯನ್ನು ಅನುಮೋದಿಸಿದೆ ಮತ್ತು ಅವರು ಅಕ್ಟೋಬರ್ 31, 2026 ರವರೆಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಸದ್ಯ ಸೋನಾಲಿ ಅವರು ಮಧ್ಯಪ್ರದೇಶ ಪೊಲೀಸ್‌ನಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ (ಆಯ್ಕೆ) ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮಧ್ಯಪ್ರದೇಶ ಕೇಡರ್‌ನ 1993ರ ಬ್ಯಾಚ್‌ನವರಾಗಿದ್ದಾರೆ. ತಮ್ಮ ನಿವೃತ್ತಿಯವರೆಗೆ (ಅಕ್ಟೋಬರ್ 31, 2026) ಇವರು ರೈಲ್ವೆ ಭದ್ರತಾ ಪಡೆಯ ಮಹಾನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಈ ಹುದ್ದೆಯಲ್ಲಿ ಸದ್ಯ ಮನೋಜ್ ಯಾದವ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಇದೇ ಜುಲೈ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ.

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಅತ್ಯುನ್ನತ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅವರನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ಮೊದಲ ಮಹಿಳಾ ಮಹಾನಿರ್ದೇಶಕಿ (ಡಿಜಿ) ಆಗಿ ನೇಮಿಸಲಾಗಿದೆ.

ಮಧ್ಯಪ್ರದೇಶ ಕೇಡರ್‌ನ 1993 ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಸೋನಾಲಿ ಮಿಶ್ರಾ ಅವರು ಅಕ್ಟೋಬರ್ 31, 2026 ರಂದು ನಿವೃತ್ತರಾಗುವವರೆಗೆ ಆರ್‌ಪಿಎಫ್‌ನ ಮಹಾನಿರ್ದೇಶಕರ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಸಂಪುಟದ ನೇಮಕಾತಿ ಸಮಿತಿಯು ಸೋನಾಲಿ ಮಿಶ್ರಾ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ಅನುಮೋದನೆ ನೀಡಿದೆ.

ಜುಲೈ 31 ರಂದು ನಿವೃತ್ತರಾಗಲಿರುವ ಮಹಾನಿರ್ದೇಶಕ ಮನೋಜ್ ಯಾದವ್ ಅವರ ಸ್ಥಾನವನ್ನು ಅವರು ವಹಿಸಿಕೊಳ್ಳಲಿದ್ದಾರೆ. ಸೋನಾಲಿ ಮಿಶ್ರಾ ಆರ್‌ಪಿಎಫ್‌ನ ಮುಖ್ಯಸ್ಥರಾಗಲಿರುವ ಮೊದಲ ಮಹಿಳಾ ಅಧಿಕಾರಿಯಾಗಲಿದ್ದಾರೆ. ರೈಲ್ವೆ ಅಸ್ತಿ ಮತ್ತು ಪ್ರಯಾಣಿಕರ ಭದ್ರತೆ ಸೇರಿದಂತೆ ಕರ್ತವ್ಯಗಳನ್ನು ಆರ್‌ಪಿಎಫ್ ನಿರ್ವಹಿಸುತ್ತದೆ. ಪ್ರಸ್ತುತ, ಸೋನಾಲಿ ಮಿಶ್ರಾ ಅವರನ್ನು ಮಧ್ಯಪ್ರದೇಶ ಪೊಲೀಸರಲ್ಲಿ ಹೆಚ್ಚುವರಿ ಮಹಾನಿರ್ದೇಶಕ (ಆಯ್ಕೆ) ಆಗಿ ನೇಮಿಸಲಾಗಿದೆ.

ರೈಲ್ವೆ ಅಸ್ತಿಗೆ ಭದ್ರತೆ ಒದಗಿಸಲು 1957 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ RPF ಅನ್ನು ರಚಿಸಲಾಯಿತು. ನಂತರ, 1966 ರಲ್ಲಿ, ರೈಲ್ವೆ ಅಸ್ತಿಯನ್ನು ಅಕ್ರಮವಾಗಿ ಅಕ್ರಮಿಸಿಕೊಂಡಿರುವ ಅಪರಾಧಿಗಳನ್ನು ತನಿಖೆ ಮಾಡಲು, ಬಂಧಿಸಲು ಮತ್ತು ವಿಚಾರಣೆಗೆ ಒಳಪಡಿಸಲು ಈ ಪಡೆಗೆ ಅಧಿಕಾರ ನೀಡಲಾಯಿತು. ಸೆಪ್ಟೆಂಬರ್ 20, 1985 ರಂದು, ಇದಕ್ಕೆ “ಯೂನಿಯನ್‌ನ ಸಶಸ್ತ್ರ ಪಡೆ” ಎಂಬ ಸ್ಥಾನಮಾನವನ್ನು ನೀಡಲಾಯಿತು.

ಸೋನಾಲಿ ಮಿಶ್ರಾ ಅವರು ತಮ್ಮ ವಿಶಿಷ್ಟ ವೃತ್ತಿಜೀವನದಲ್ಲಿ ಹಲವಾರು ಪ್ರಮುಖ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜುಲೈ 2021 ರಲ್ಲಿ, ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ರಚನೆಯನ್ನು ಮುನ್ನಡೆಸಲು ಮೊದಲ ಮಹಿಳಾ ಕಮಾಂಡ‌ರ್ ಆಗಿ ಅವರನ್ನು ನೇಮಿಸಲಾಯಿತು. ಸೋನಾಲ್ ಅವರು ಕಾಶ್ಮೀರ ಕಣಿವೆಯಲ್ಲಿ ಇನ್ಸ್‌ ಪೆಕ್ಟರ್ ಜನರಲ್ (ಐಜಿ) ಆಗಿ ಪಡೆಯ ರಚನೆಯನ್ನು ಮುನ್ನಡೆಸಿದರು. ಅವರು ಬಿಎಸ್‌ಎಫ್‌ನ ಗುಪ್ತಚರ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಅವರು ಬಿಎಸ್‌ಎಫ್‌ ನಲ್ಲಿ ಎಡಿಜಿ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಸೋನಾಲಿ ಪಿಪಿಎಂಡಿಎಸ್ (ಅಧ್ಯಕ್ಷರ ವಿಶಿಷ್ಟ ಸೇವೆಗಾಗಿ ಪೊಲೀಸ್ ಪದಕ) ಮತ್ತು ಪಿಎಂಎಂಎಸ್ (ಶ್ರೇಷ್ಠ ಸೇವೆಗಾಗಿ ಪೊಲೀಸ್ ಪದಕ) ಪಡೆದಿದ್ದಾರೆ.

ಆರ್‌ಪಿಎಫ್ ಬಗ್ಗೆ
ರೈಲ್ವೆ ರಕ್ಷಣಾ ಪಡೆ (RPF) ಅನ್ನು 1957 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಸ್ಥಾಪಿಸಲಾಯಿತು. 1966 ರಲ್ಲಿ, ರೈಲ್ವೆ ಆಸ್ತಿಗೆ ಸಂಬಂಧಿಸಿದ ಅಪರಾಧಗಳಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ಮತ್ತು ವಿಚಾರಣೆಗೆ ಒಳಪಡಿಸಲು ಇದಕ್ಕೆ ಅಧಿಕಾರ ನೀಡಲಾಯಿತು. ನಂತರ, 1985 ರಲ್ಲಿ, ಇದನ್ನು ಒಕ್ಕೂಟದ ಸಶಸ್ತ್ರ ಪಡೆ ಎಂದು ಘೋಷಿಸಲಾಯಿತು. ದೇಶಾದ್ಯಂತ ರೈಲ್ವೆ ನಿಲ್ದಾಣಗಳು, ರೈಲುಗಳು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಲು RPF ಕಾರ್ಯನಿರ್ವಹಿಸುತ್ತದೆ.

error: Content Copyright protected !!