Multiple Choice Questions SeriesGKLatest Updates

Multiple Choice Questions: ಬಹುಆಯ್ಕೆಯ ಪ್ರಶ್ನೆಗಳ ಸರಣಿ – 1

Share With Friends

Multiple Choice Questions :

1. ಭಾರತದ ಬಹುಭಾಗದಲ್ಲಿ ಕಂಡುಬರುವ ವಾಯುಗುಣ ಯಾವುದು?
ಎ. ಸಮಶೀತೋಷ್ಣವಲಯದ ತಣ್ಣಗಿನ ವಾಯುಗುಣ
ಬಿ. ಸಮಭಾಜಕ ವೃತ್ತದ ವಾಯುಗುಣ
ಸಿ. ಉಪ ಉಷ್ಣವಲಯದ ವಾಯುಗುಣ
ಡಿ. ಉಷ್ಣವಲಯದ ಮಾನ್ಸೂನ್ ವಾಯುಗುಣ

2. ಭಾರತದ ವಾಯುಗುಣವನ್ನು ನಿರ್ದರಿಸುವ ಮುಖ್ಯ ಅಂಶ ಯಾವುದು?
ಎ. ಸ್ಥಾನ
ಬಿ. ಗಾತ್ರ
ಸಿ. ಮಾನ್ಸೂನ್ ಮಾರುತಗಳು
ಡಿ. ಮೇಲ್ಮೈ ಲಕ್ಷಣಗಳು

3. ಚಳಿಗಾಲದಲ್ಲಿ ಸೂರ್ಯಕಿರಣಗಳು ಲಂಬವಾಗಿ…. ಗೋಳಾರ್ಧದ ಮೇಲೆ ಬೀಳುತ್ತದೆ?
ಎ. ಪಶ್ಚಿಮ
ಬಿ. ಉತ್ತರ
ಸಿ. ಪೂರ್ವ
ಡಿ. ದಕ್ಷಿಣ


4. ಕೋರಮಂಡಲ್ ತೀರಕ್ಕೆ ಮಳೆಯನ್ನು ಸುರಿಸುವ ಮಾರುತಗಳು ಯಾವುವು?
ಎ. ವಾಯುವ್ಯ ಮಾರುತಗಳು
ಬಿ. ಈಶಾನ್ಯ ಮಾರುತಗಳು
ಸಿ. ಆಗ್ನೇಯ ಮಾರುತಗಳು
ಡಿ. ನೈರುತ್ಯ ಮಾರುತಗಳು

5. ಪಶ್ಚಿಮ ಬೆಟ್ಟಗಳ —– ಭಾಗ ಮಳೆ ನೆರಳಿನ ಭಾಗವಾಗಿದೆ?
ಎ. ಪೂರ್ವ
ಬಿ. ಪಶ್ಚಿಮ
ಸಿ. ದಕ್ಷಿಣ
ಡಿ. ವಾಯುವ್ಯ

6. ನೈಋತ್ಯ ಮಾನ್ಸೂನ್ ಮಾರುತಗಳು ದೇಶದೆಲ್ಲೇಡೆ ಮಳೆ ಸುರಿಸಿದರೂ ಇಲ್ಲಿ ಮಾತ್ರ ಮಳೆಯಾಗುವುದಿಲ್ಲ?
ಎ. ಕರ್ನಾಟಕ
ಬಿ. ಮಹಾರಾಷ್ಟ್ರ
ಸಿ. ತಮಿಳುನಾಡು
ಡಿ. ಆಂಧ್ರಪ್ರದೇಶ

7. ಮಳೆಗಾಲ ಮತ್ತು ಚಳಿಗಾಲದ ಮಧ್ಯದ ಕಾಲ ಯಾವುದು?
ಎ. ಚಳಿಗಾಲ
ಬಿ. ವಸಂತಕಾಲ
ಸಿ. ನಿರ್ಗಮನ ಮಾನ್ಸೂನ್ ಕಾಲ
ಡಿ. ನೈಋತ್ಯ ಮಾನ್ಸೂನ್ ಕಾಲ

8. ಭಾರತದಲ್ಲಿ ಮಳೆಯ ಪ್ರಮಾಣ—-
ಎ. ಅನಿಶ್ಚಿತತೆಯಿಂದ ಕೂಡಿದೆ
ಬಿ. ಸರಿಯಾಗಿ ಹಂಚಿಕೆಯಾಗಿದೆ.
ಸಿ. ಹೆಚ್ಚಾಗಿದೆ
ಡಿ. ಬಹಳ ಕಡಿಮೆ

9. ಭಾರತದಲ್ಲಿ ಮಳೆಯ ಐದು ವಿಭಾಗಗಳಾಗಿ ವಿಂಗಡಿಸಿರುವುದರ ಆಧಾರವೇನು?
ಎ. ಮಳೆಯ ಪ್ರಮಾಣ
ಬಿ. ಮೇಲ್ಮೈ ಲಕ್ಷಣಗಳು
ಸಿ. ಗಾಳಿಯ ದಿಕ್ಕುಗಳು
ಡಿ. ಸಸ್ಯಸಂಪತ್ತು

10. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು?
ಎ. ರೋಯಲಿ
ಬಿ. ಮೌಸಿನ್‍ರಾಮ್
ಸಿ. ಭುಜ್
ಡಿ. ಗಂಗಾನಗರ

11. ವಾರ್ಷಿಕ 40 ಸೆಂ.ಮೀ ನಿಂದ 60 ಸೆಂ.ಮಿ ಮಳೆ ಬೀಳುವ ಪ್ರದೇಶಗಳನ್ನು—– ಎಂದು ವರ್ಗೀಕರಿಸಲಾಗಿದೆ?
ಎ. ಕಡಿಮೆ ಮಳೆ ಬೀಳುವ ಪ್ರದೇಶ
ಬಿ. ಹೆಚ್ಚು ಮಳೆ ಬೀಳುವ ಪ್ರದೇಶ
ಸಿ. ಅತ್ಯಂತ ಕಡಿಮೆ ಮಳೆ ಬಿಳುವ ಪ್ರದೇಶ
ಡಿ. ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ

12. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಯಾವುದು?
ಎ. ಕೊಡಗು
ಬಿ. ಆಗುಂಬೆ
ಸಿ. ಚಿಕ್ಕಮಗಳೂರು
ಡಿ. ಮಡಿಕೇರಿ

13. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಯಾವುದು?
ಎ. ಮೇಘಾಲಯ
ಬಿ. ಆಗುಂಬೆ
ಸಿ. ಮೌಸಿನ್‍ರಾಮ್
ಡಿ. ಚಿರಾಪುಂಜಿ

14. ಭಾರತದಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಸ್ಥಳ “ಮೌಸಿನ್‍ರಾಮ್” ಇರುವುದು ಯಾವ ರಾಜ್ಯದಲ್ಲಿ?
ಎ. ನಾಗಾಲ್ಯಾಂಡ್
ಬಿ ಅಸ್ಸಾಂ
ಸಿ. ಮೇಘಾಲಯ
ಡಿ. ಮಹಾರಾಷ್ಟ್ರ

15. ಭಾರತದ ಕೃಷಿಯು ಹೆಚ್ಚಾಗಿ ಅವಲಂಬಿಸಿರುವುದು—-
ಎ. ಆಗ್ನೇಯ ಮಾನ್ಸೂನ್‍ಗಳನ್ನು
ಬಿ. ನೈಋತ್ಯ ಮಾನ್ಸೂನ್‍ಗಳನ್ನು
ಸಿ. ಈಶಾನ್ಯ ಮಾನ್ಸೂನ್‍ಗಳನ್ನು
ಡಿ. ವಾಯುವ್ಯ ಮಾನ್ಸೂನ್‍ಗಳನ್ನು

16. ಮಾನ್ಸೂನ್ ಎಂಬ ಪದವು ಅರೆಬಿಕ್ ಭಾಷೆಯ ಯಾವ ಪದದಿಂದ ಬಂದಿದೆ?
ಎ. ಮಾಸಿನ್
ಬಿ. ಮೌಸಿಮ್
ಸಿ. ಮಾಸನ್
ಡಿ. ಮೌಸಮ್

17. ಪ್ರಾಕೃತಿಕ ಪರಿಸರ ಎಂದರೆ———
ಎ. ಸಸ್ಯವರ್ಗ
ಬಿ. ಪ್ರಾಣಿವರ್ಗ
ಸಿ. ಸಸ್ಯ ಮತ್ತು ಪ್ರಾಣಿವರ್ಗ
ಡಿ. ವಾತಾವರಣ

18.ಭಾರತದ ಬಹು ಭಾಗದಲ್ಲಿರುವ ಕಾಡುಗಳು——-
ಎ. ನಿತ್ಯಹರಿದ್ವರ್ಣ ಕಾಡುಗಳು
ಬಿ. ಮುಳ್ಳು ಮತ್ತು ಪೊದೆಗಳ ಕಾಡುಗಳು
ಸಿ. ಮಾನ್‍ಸೂನ್ ಕಾಡುಗಳು
ಡಿ. ಮ್ಯಾಂಗ್ರೋವ್ ಕಾಡುಗಳು

19. ಮರುಭೂಮಿಯ ಸಸ್ಯವರ್ಗ ಕಂಡುಬರುವ ಪ್ರದೇಶಗಳಲ್ಲಿ ವಾರ್ಷಿಕ ಮಳೆಯು —- ಗಿಂತ ಕಡಿಮೆ ಇರುತ್ತದೆ.
ಎ. 50 ಸೆಂ. ಮಿ
ಬಿ. 51 ಸೆಂ.ಮೀ
ಸಿ. 52 ಸೆಂ.ಮೀ
ಡಿ. 53 ಸೆಂ.ಮೀ

20. ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ಯಾವುದು?
ಎ. ಕರ್ನಾಟಕದ ಬೀದರ್
ಬಿ ರಾಜಸ್ಥಾನದ ಗಂಗಾನಗರ
ಸಿ. ಮಧ್ಯಪ್ರದೇಶದ ಭೋಪಾಲ್
ಡಿ. ಬಿಹಾರದ ಪಾಟ್ನಾ

21. ಮಾವಿನ ಹೊಯ್ಲು” ಎಲ್ಲಿ ಸಂಭವಿಸುತ್ತದೆ?
ಎ. ಕರ್ನಾಟಕ
ಬಿ. ಕೇರಳ
ಸಿ. ತಮಿಳುನಾಡು
ಡಿ. ಆಂಧ್ರಪ್ರದೇಶ

22. ಕೇರಳದಲ್ಲಿ ಪೂರ್ವ ಮಾನ್‍ಸೂನ್ ಮಳೆಯನ್ನು ಏನೆಂದು ಕರೆಯುತ್ತಾರೆ?
ಎ. ಮಾವಿನ ಕೊಯ್ಲು
ಬಿ ಮಾವಿನ ಹೊಯ್ಲು
ಸಿ. ಮಾವಿನ ಋತು
ಡಿ. ಮಾವಿನ ಕಳೆ

23. ಭಾರತದಲ್ಲಿ ನಿರ್ಗಮನ ಮಾನ್ಸೂನ್‍ಗಳು ಪ್ರಾರಂಭವಾಗುವ ತಿಂಗಳು….—-
ಎ. ಅಕ್ಟೋಬರ್
ಬಿ. ನವೆಂಬರ್
ಸಿ. ಜುಲೈ
ಡಿ. ಆಗಸ್ಟ್

24. ಭಾರತ ಸರ್ಕಾರವು ಕಾಡುಗಳ ಬೆಳವಣಿಗೆ ಮತ್ತು ಸಂರಕ್ಷಣೆಗಾಗಿ ರಾಷ್ಟ್ರೀಯ ಅರಣ್ಯ ನೀತಿಯನ್ನು ರೂಪಿಸಿದ ವರ್ಷ ಯಾವುದು?
ಎ 1951
ಬಿ. 1953
ಸಿ. 1952
ಡಿ. 1954

25. ಭಾರತದಲ್ಲಿ ನೈಋತ್ಯ ಮಾನ್‍ಸೂನ್ ಎಂದರೆ——-
ಎ. ಚಳಿಗಾಲವೆಂದರ್ಥ
ಬಿ. ಮಳೆಗಾಲವೆಂದರ್ಥ
ಸಿ. ಬೇಸಿಗೆಕಾಲವೆಂದರ್ಥ
ಡಿ. ವಸಂತಕಾಲವೆಂದರ್ಥ

ಉತ್ತರಗಳು-
1. ಡಿ. ಉಷ್ಣವಲಯದ ಮಾನ್ಸೂನ್ ವಾಯುಗುಣ
2. ಸಿ. ಮಾನ್ಸೂನ್ ಮಾರುತಗಳು
3. ಸಿ. ಮಾನ್ಸೂನ್ ಮಾರುತಗಳು
4. ಬಿ. ಈಶಾನ್ಯ ಮಾರುತಗಳು
5. ಎ. ಪೂರ್ವ
6. ಸಿ. ತಮಿಳುನಾಡು
7. ಸಿ. ನಿರ್ಗಮನ ಮಾನ್ಸೂನ್ ಕಾಲ
8. ಎ. ಅನಿಶ್ಚಿತತೆಯಿಂದ ಕೂಡಿದೆ
9. ಎ. ಮಳೆಯ ಪ್ರಮಾಣ
10. ಎ. ರೋಯಲಿ
11. ಎ. ಕಡಿಮೆ ಮಳೆ ಬೀಳುವ ಪ್ರದೇಶ
12. ಬಿ. ಆಗುಂಬೆ
13. ಸಿ. ಮೌಸಿನ್‍ರಾಮ್
14. ಸಿ. ಮೇಘಾಲಯ
15. ಬಿ. ನೈಋತ್ಯ ಮಾನ್ಸೂನ್‍ಗಳನ್ನು
16. ಬಿ. ಮೌಸಿಮ್
17. ಸಿ. ಸಸ್ಯ ಮತ್ತು ಪ್ರಾಣಿವರ್ಗ
18. ಸಿ. ಮಾನ್‍ಸೂನ್ ಕಾಡುಗಳು
19. ಎ. 50 ಸೆಂ. ಮಿ
20. ಬಿ ರಾಜಸ್ಥಾನದ ಗಂಗಾನಗರ
21. ಬಿ. ಕೇರಳ
22. ಬಿ. ಮಾವಿನ ಹೊಯ್ಲು
23. ಎ. ಅಕ್ಟೋಬರ್
24. ಸಿ. 1952
25. ಬಿ. ಮಳೆಗಾಲವೆಂದರ್ಥ

Leave a Reply

Your email address will not be published. Required fields are marked *

error: Content Copyright protected !!