ಎಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ (Ethiopia’s Highest Civilian Award) ಪಡೆದ ಮೊದಲ ವಿಶ್ವ ನಾಯಕ ಪ್ರಧಾನಿ ಮೋದಿ
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಎಥಿಯೋಪಿಯಾದ ಅತ್ಯುನ್ನತ ನಾಗರಿಕ ಗೌರವ(Highest Civilian Award)ವನ್ನು ಪಡೆದ ಮೊದಲ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಥಿಯೋಪಿಯಾದ ಅತ್ಯುನ್ನತ ನಾಗರಿಕ ಗೌರವವಾದ ‘ದಿ ಗ್ರೇಟ್ ಹಾನರ್ ನಿಶಾನ್ ಆಫ್ ಎಥಿಯೋಪಿಯಾ’ ಪ್ರಶಸ್ತಿ ಲಭಿಸಿದೆ. ಈ ಗೌರವವನ್ನು ಪಡೆಯುವ ಪ್ರಪಂಚದ ಮೊದಲ ರಾಷ್ಟ್ರಾಧ್ಯಕ್ಷ/ಸರ್ಕಾರದ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾದರು. ಭಾರತ–ಎಥಿಯೋಪಿಯಾ ನಡುವಿನ ದೀರ್ಘಕಾಲದ ಸ್ನೇಹ, ದ್ವೈಪಕ್ಷಿಕ ಸಹಕಾರ ಮತ್ತು ಜಾಗತಿಕ ಮಟ್ಟದಲ್ಲಿ ಶಾಂತಿ ಹಾಗೂ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಗೌರವವನ್ನು ಪ್ರದಾನಿಸಲಾಗಿದೆ.
ಎಥಿಯೋಪಿಯಾ ಸರ್ಕಾರವು ಪ್ರಧಾನಿ ಮೋದಿಯ ನೇತೃತ್ವವನ್ನು ಪ್ರಶಂಸಿಸಿ, ಆಫ್ರಿಕಾ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದೆಂದು ತಿಳಿಸಿದೆ. ಈ ಪ್ರಶಸ್ತಿ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಆಯಾಮ ನೀಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಈ ಗೌರವವನ್ನು 140 ಕೋಟಿ ಭಾರತೀಯರಿಗೆ ಸಮರ್ಪಿಸುತ್ತೇನೆ ಎಂದು ಹೇಳಿದರು. ಭಾರತ ಮತ್ತು ಎಥಿಯೋಪಿಯಾ ನಡುವಿನ ಸ್ನೇಹ ಮುಂದಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕತ್ವ, ರಾಜತಾಂತ್ರಿಕ ಬಾಂಧವ್ಯ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ವಿಶ್ವದ ಹಲವು ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಗೌರವಗಳನ್ನು ಪ್ರದಾನಿಸಿವೆ. 2016ರಿಂದ 2025ರವರೆಗೆ ಮೋದಿ ಅವರಿಗೆ ಒಟ್ಟು 28 ವಿದೇಶಿ ಉನ್ನತ ಪ್ರಶಸ್ತಿಗಳು ಲಭಿಸಿವೆ.
ಪ್ರಮುಖ ಪ್ರಶಸ್ತಿಗಳ ವಿವರಗಳು ಹೀಗಿವೆ:
ಸೌದಿ ಅರೇಬಿಯಾ – ಆರ್ಡರ್ ಆಫ್ ಕಿಂಗ್ ಅಬ್ದುಲ್ ಅಜೀಜ್ (2016, ರಿಯಾದ್)
ಅಫ್ಘಾನಿಸ್ತಾನ – ಆರ್ಡರ್ ಆಫ್ ಅಮಾನುಲ್ಲಾ ಖಾನ್ (2016, ಹೆರಾತ್)
ಪ್ಯಾಲೆಸ್ಟೈನ್ – ಆರ್ಡರ್ ಆಫ್ ದ ಸ್ಟೇಟ್ ಆಫ್ ಪ್ಯಾಲೆಸ್ಟೈನ್ (2018, ರಾಮಲ್ಲಾ)
ಮಾಲ್ಡೀವ್ಸ್ – ಆರ್ಡರ್ ಆಫ್ ಇಜ್ಜುದ್ದೀನ್ (2019, ಮಾಲೆ)
ಯುಎಇ – ಆರ್ಡರ್ ಆಫ್ ಝಾಯೆಡ್ (2019, ಅಬುಧಾಬಿ)
ಬಹ್ರೇನ್ – ಆರ್ಡರ್ ಆಫ್ ದ ರಿನೈಸನ್ಸ್ (2019, ಮನಾಮಾ)
ಅಮೆರಿಕಾ – ಲೀಜಿಯನ್ ಆಫ್ ಮೆರಿಟ್ (2020, ವಾಷಿಂಗ್ಟನ್ ಡಿಸಿ)
ಫಿಜಿ – ಆರ್ಡರ್ ಆಫ್ ಫಿಜಿ (2023, ಪೋರ್ಟ್ ಮೋರ್ಸ್‌ಬಿ)
ಪಪುವಾ ನ್ಯೂ ಗಿನಿಯಾ – ಆರ್ಡರ್ ಆಫ್ ಲೊಗೋಹು (2023)
ಈಜಿಪ್ಟ್ – ಆರ್ಡರ್ ಆಫ್ ದ ನೈಲ್ (2023, ಕೈರೋ)
ಫ್ರಾನ್ಸ್ – ಲೀಜಿಯನ್ ಆಫ್ ಆನರ್ (2023, ಪ್ಯಾರಿಸ್)
ಗ್ರೀಸ್ – ಆರ್ಡರ್ ಆಫ್ ಆನರ್ (2023, ಅಥೆನ್ಸ್)
ಭೂಟಾನ್ – ಆರ್ಡರ್ ಆಫ್ ದ ಡ್ರ್ಯಾಗನ್ ಕಿಂಗ್ (2024)
ರಷ್ಯಾ – ಆರ್ಡರ್ ಆಫ್ ಸೈಂಟ್ ಆಂಡ್ರೂ (2024, ಮಾಸ್ಕೋ)
ನೈಜೀರಿಯಾ – ಆರ್ಡರ್ ಆಫ್ ದ ನೈಜರ್ (2024)
ಡೊಮಿನಿಕಾ – ಡೊಮಿನಿಕಾ ಅವಾರ್ಡ್ ಆಫ್ ಆನರ್ (2024)
ಗಯಾನಾ – ಆರ್ಡರ್ ಆಫ್ ಎಕ್ಸಲೆನ್ಸ್ (2024)
ಕುವೈತ್ – ಆರ್ಡರ್ ಆಫ್ ಮುಬಾರಕ್ ದ ಗ್ರೇಟ್ (2024)
ಬಾರ್ಬಡೋಸ್ – ಆರ್ಡರ್ ಆಫ್ ಫ್ರೀಡಮ್ (2025)
ಮಾರಿಶಸ್ – ಸ್ಟಾರ್ ಅಂಡ್ ಕೀ ಆಫ್ ಇಂಡಿಯನ್ ಓಶನ್ (2025)
ಶ್ರೀಲಂಕಾ – ಮಿತ್ರ ವಿಭೂಷಣ (2025, ಕೊಲಂಬೊ)
ಸೈಪ್ರಸ್ – ಆರ್ಡರ್ ಆಫ್ ಮಕರಿಯೊಸ್ III (2025)
ಘಾನಾ – ಆರ್ಡರ್ ಆಫ್ ದ ಸ್ಟಾರ್ ಆಫ್ ಘಾನಾ (2025)
ಟ್ರಿನಿಡಾಡ್ & ಟೊಬಾಗೋ – ಆರ್ಡರ್ ಆಫ್ ದ ರಿಪಬ್ಲಿಕ್ (2025)
ಬ್ರೆಜಿಲ್ – ಆರ್ಡರ್ ಆಫ್ ದ ಸೌದರ್ನ್ ಕ್ರಾಸ್ (2025)
ನಮೀಬಿಯಾ – ಆರ್ಡರ್ ಆಫ್ ದ ವೆಲ್ವಿಟ್ಷಿಯಾ (2025)
ಇಥಿಯೋಪಿಯಾ – ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ (2025, ಅಡಿಸ್ ಅಬಾಬಾ)
ಪರೀಕ್ಷೆಗಳಲ್ಲಿ ಕೇಳಬಹುದಾದ ಪ್ರಶ್ನೆ :
ಪ್ರಧಾನಿ ನರೇಂದ್ರ ಮೋದಿ ಅವರ ಇಥಿಯೋಪಿಯಾ ಭೇಟಿಯ ಸಮಯದಲ್ಲಿ ಅವರಿಗೆ ಯಾವ ಪ್ರಶಸ್ತಿಯನ್ನು ನೀಡಲಾಯಿತು?
(ಎ) ಆರ್ಡರ್ ಆಫ್ ದಿ ಸ್ಟಾರ್ ಆಫ್ ಇಥಿಯೋಪಿಯಾ
(ಬಿ) ಇಥಿಯೋಪಿಯಾದ ಗ್ರೇಟ್ ಆನರ್ ನಿಶಾನ್
(ಸಿ) ಇಥಿಯೋಪಿಯನ್ ಸಿವಿಲಿಯನ್ ಮೆಡಲ್ ಆಫ್ ಮೆರಿಟ್
(ಡಿ) ಆಫ್ರಿಕಾ ಫ್ರೆಂಡ್‌ಶಿಪ್ ಪ್ರಶಸ್ತಿ
- ಸಂವಿಧಾನ ಕುರಿತು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಾಮಾನ್ಯ ಅಂಶಗಳು (Constitution of India)
- ಭಾರತದ ಪ್ರಧಾನ ಮಂತ್ರಿ(Prime Minister of India)ಯನ್ನು ಯಾರು ನೇಮಿಸುತ್ತಾರೆ..? ಪ್ರಕ್ರಿಯೆ ಏನು..?
- ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ 2ನೇ ಅತಿ ವೇಗದ ಅರ್ಧಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ (Hardik Pandya)
- ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ
- ಬಾಹ್ಯಾಕಾಶಕ್ಕೆ ತೆರಳಲಿರುವ ಮೊದಲ ವೀಲ್ಚೇರ್ ಗಗನಯಾತ್ರಿಯಾಗಿ ಮೈಕೆಲಾ ಬೆಂಥೌಸ್ (Michaela Benthaus)

