Current AffairsLatest Updates

Chandrayaan 5 : ಚಂದ್ರಯಾನ-5ಕ್ಕೆ ಇಸ್ರೋ ತಯಾರಿ, ಕೇಂದ್ರ ಸರ್ಕಾರ ಅನುಮತಿ

Share With Friends

Chandrayaan 5 : Centre has approved Chandrayaan 5 mission: ISRO chief

ಚಂದ್ರಯಾನ 5 ಮಿಷನ್ ತಯಾರಿ ಆರಂಭಗೊಂಡಿದೆ. ಈ ಮಿಷನ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 250 ಕೆಜಿ ತೂಕದ ರೋವರ್‌ನ್ನು ಚಂದ್ರನ ಮೇಲೆ ಇಳಿಸಿ ಅಧ್ಯಯನ ನಡೆಸಲು ಇಸ್ರೋ ಮುಂದಾಗಿದೆ. ಈ ಕುರಿತ ಚಂದ್ರಯಾನ 5 ಮಿಷನ್‌ಗೆ ಇದೀಗ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು ಅಧ್ಯಯನ ನಡೆಸಿದ ಪ್ರಗ್ಯಾನ್ ರೋವರ್ ತೂಕ 25 ಕೆಜಿ. ಆದರೆ ಚಂದ್ರಯಾನ 5 ಮಿಷನ್ ತೂಕ ಬರೋಬ್ಬರಿ 250 ಕೆಜಿಯಾಗಿದೆ. ಹೀಗಾಗಿ ಈ ಬಾರಿ ಇಸ್ರೋ ಮತ್ತಷ್ಟು ತಯಾರಿಯೊಂದಿಗೆ ಚಂದ್ರನ ಕುತೂಹಲ ಅಧ್ಯಯನಕ್ಕೆ ಮುಂದಾಗಿದೆ.

ಚಂದ್ರಯಾನ 5 ಮಿಷನ್‌ನಲ್ಲಿ ಹಲವು ಹೊಸತನಗಳಿವೆ. ಕಾರಣ ಇದು ಜಪಾನ್ ಜೊತೆ ಜಂಟಿಯಾಗಿ ಕೈಗೊಂಡಿರುವ ಚಂದ್ರನ ಅಧ್ಯಯನವಾಗಿದೆ. ಅನೇಕ ಯೋಜನೆಗಳಿವೆ. ಚಂದ್ರಯಾನ 4 ತಯಾರಿಗಳು ನಡೆಯುತ್ತಿದೆ. ಚಂದ್ರನ ಮೇಲೆ ಮತ್ತೆ ರೋವರ್ ಇಳಿಸಿ ಅಧ್ಯಯನದ ಅಂತಿಮ ಹಂತದ ಪರೀಕ್ಷೆಗಳು ಹಾಗೂ ಪ್ರಯೋಗ ನಡೆಯುತ್ತಿದೆ. ಇದರ ನಡುವೆ ಚಂದ್ರಯಾನ 5 ಅನುಮೋದನೆ ಪಡೆದಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ವಿ ನಾರಾಯನ್ ಹೇಳಿದ್ದಾರೆ.

ಇಸ್ರೋ ಯಶಸ್ವಿಯಾಗಿ ಮೂರು ಚಂದ್ರಯಾನ ಮಿಷನ್‌ಗಳನ್ನು ಕೈಗೊಂಡಿದೆ. ಈ ಪೈಕಿ ಚಂದ್ರಯಾನ-3 ಚಂದ್ರನ ಮೇಲೆ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದೆ. ಚಂದ್ರಯಾನ-5 ಲೂಪೆಕ್ಸ್ ಮಿಷನ್ ಹೆಚ್ಚಿನ ಸಾಮರ್ಥ್ಯದ ಲ್ಯಾಂಡರ್ ಅನ್ನು ಪ್ರದರ್ಶಿಸಲು ಯೋಜಿಸಲಾಗುತ್ತಿದೆ, ಇದು ಭವಿಷ್ಯದ ಲ್ಯಾಂಡಿಂಗ್ ಮಿಷನ್‌ಗಳಿಗೆ ನಿರ್ಣಾಯಕ ಅಂಶವಾಗಿದೆ, ಇದರಲ್ಲಿ ಚಂದ್ರನ ಮೇಲ್ಮೈಯಲ್ಲಿ ಮಾನವ ಲ್ಯಾಂಡಿಂಗ್ ಕೂಡ ಸೇರಿದೆ.ಇದರ ಜೊತೆಗೆ, ಭಾರತವು 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರುತ್ತದೆ ಎಂದು ವಿ. ನಾರಾಯಣನ್ ಘೋಷಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಭಾರಿ ಪ್ರಗತಿಯಾಗಿದೆ. ನಮ್ಮ ಭಾರತೀಯ ನೆಲದಿಂದ ನಾವು ಯಶಸ್ವಿಯಾಗಿ 433 ಉಪಗ್ರಹಗಳನ್ನು ಕಳುಹಿಸಿದ್ದೇವೆ, ಇದು 90 ಪ್ರತಿಶತದಷ್ಟು ಯಶಸ್ಸಿನ ಪ್ರಮಾಣವನ್ನು ಸಾಧಿಸುತ್ತಿದೆ ಎಂದಿದ್ದಾರೆ.

error: Content Copyright protected !!