BPCL ನೇಮಕಾತಿ 2026: 250 ತಾಂತ್ರಿಕ ಮತ್ತು ಆಡಳಿತ ಹುದ್ದೆಗಳ ಭರ್ತಿ – ಆನ್ಲೈನ್ ಅರ್ಜಿ ಪ್ರಾರಂಭ
Bharat Petroleum Corporation Limited (BPCL) ಸಂಸ್ಥೆಯು 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಒಟ್ಟು 250 ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಜೂನಿಯರ್ ಎಕ್ಸಿಕ್ಯೂಟಿವ್, ಅಸೋಸಿಯೇಟ್ ಎಕ್ಸಿಕ್ಯೂಟಿವ್ ಹಾಗೂ ಸೆಕ್ರಟರಿ ಸೇರಿದಂತೆ ತಾಂತ್ರಿಕ ಮತ್ತು ಆಡಳಿತ ವಿಭಾಗಗಳಲ್ಲಿ ಅವಕಾಶಗಳು ಲಭ್ಯವಿವೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 18, 2026ರಿಂದ ಆರಂಭಗೊಂಡಿದ್ದು, ಮೇ 17, 2026ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವೇತನ ಪ್ಯಾಕೇಜ್ ವರ್ಷಕ್ಕೆ ₹12.28 ಲಕ್ಷದಿಂದ ₹17.11 ಲಕ್ಷದವರೆಗೆ ಇರುತ್ತದೆ.
ಹುದ್ದೆಗಳ ವಿವರ : ಒಟ್ಟು 250 ಹುದ್ದೆ :
ಜೂನಿಯರ್ ಎಕ್ಸಿಕ್ಯುಟಿವ್ (ಎಂಜಿನಿಯರಿಂಗ್): 175
ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಅಶ್ಯೂರೆನ್ಸ್): 30
ಜೂನಿಯರ್ ಎಕ್ಸಿಕ್ಯುಟಿವ್ (ಅಕೌಂಟ್ಸ್): 25
ಜೂನಿಯರ್ ಎಕ್ಸಿಕ್ಯೂಟಿವ್ (ವೇಸೈಡ್ ಸೌಕರ್ಯಗಳು): 10
ಕಾರ್ಯದರ್ಶಿ (Secretary): 08
ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಅಧಿಕೃತ ಭಾಷೆ): 02
ವಿದ್ಯಾರ್ಹತೆ ಮತ್ತು ಅನುಭವ :
ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:
ಡಿಪ್ಲೊಮಾ, ಬಿ.ಇ/ಬಿ.ಟೆಕ್ (ಎಂಜಿನಿಯರಿಂಗ್ ವಿಭಾಗಗಳಿಗೆ)
ಸಿಎ (CA) / ಸಿಎಂಎ (CMA) (ಅಕೌಂಟ್ಸ್ ವಿಭಾಗಕ್ಕೆ)
ಎಂ.ಎ / ಎಂ.ಎಸ್ಸಿ (ಇತರ ವಿಭಾಗಗಳಿಗೆ)
ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಆಯಾ ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಹೊಂದಿರಬೇಕು
ವಯೋಮಿತಿ :
ವಯೋಮಿತಿ: ಏಪ್ರಿಲ್ 1, 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 30 ರಿಂದ 35 ವರ್ಷಗಳ ಒಳಗಿರಬೇಕು (ಮೀಸಲಾತಿ ಅನ್ವಯ ಸಡಿಲಿಕೆ ಇರಲಿದೆ).
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಆಧಾರದ ಮೇಲೆ ತಿಂಗಳಿಗೆ 30,000 ರಿಂದ 1,40,000ರೂ. ವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ/OBC/EWS ಅಭ್ಯರ್ಥಿಗಳು: 1180ರೂ.
SC/ST/PwBD ಅಭ್ಯರ್ಥಿಗಳು: ಯಾವುದೇ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:
ಲಿಖಿತ ಪರೀಕ್ಷೆ (Written Test)
ಗುಂಪು ಚರ್ಚೆ (Group Discussion)
ವೈಯಕ್ತಿಕ ಸಂದರ್ಶನ (Personal Interview)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 17, 2026
ಅಧಿಸೂಚನೆಗಾಗಿ : ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ನೇಮಕಾತಿಗಳ ಮಾಹಿತಿ : Current Recruitments : ಪ್ರಸ್ತುತ ನೇಮಕಾತಿಗಳು
- ಇಂದಿನ ಪ್ರಚಲಿತ ವಿದ್ಯಮಾನಗಳು / 30-10-2025 (Today’s Current Affairs)
- Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
- ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಕುರಿತ ಕ್ವಿಜ್
- ‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
- ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October


