Job NewsLatest Updates

Anganwadi Recruitment 2025 : ಬೆಂಗಳೂರಲ್ಲಿ 222 ಅಂಗನವಾಡಿ ಕಾರ್ಯಕರ್ತೆ- ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

Share With Friends

Anganwadi Recruitment : workers-helpers recruitment in Bengaluru

Anganwadi Recruitment 2025 : ಬೆಂಗಳೂರಲ್ಲಿ ಅಂಗನವಾಡಿ ಕಾರ್ಯಕರ್ತೆ- ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) 222 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಏಪ್ರಿಲ್ 30, 2025 ಕೊನೆಯ ದಿನವಾಗಿದೆ.

ಹುದ್ದೆಯ ವಿವರ :
ದೇವನಹಳ್ಳಿ : ಕಾರ್ಯಕರ್ತೆ 7 ಹಾಗೂ ಸಹಾಯಕಿ 33 ಹುದ್ದೆ
ದೊಡ್ಡಬಳ್ಳಾಪುರ : ಕಾರ್ಯಕರ್ತೆ 10 ಮತ್ತು ಸಹಾಯಕಿ 47
ಹೊಸಕೋಟೆ : ಕಾರ್ಯಕರ್ತೆ 10 ಮತ್ತು ಸಹಾಯಕಿ 52
ನೆಲಮಂಗಲ : ಕಾರ್ಯಕರ್ತೆ 11 ಹಾಗೂ ಸಹಾಯಕಿ 52

ವಿದ್ಯಾರ್ಹತೆ:
ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಗ್ರಾಮ/ತಾಲೂಕು, ನಗರದ ಖಾಯಂ/3 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಅಲ್ಲಿಯ ನಿವಾಸಿಯಾಗಿರಬೇಕು.

ವಯೋಮಿತಿ: ಕನಿಷ್ಠ 19ರಿಂದ 35 ವರ್ಷ. ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು https://karnemakaone.kar.nic.in/abcd/ ಇಲ್ಲಿಗೆ ಭೇಟಿ ನೀಡಿ.

ಆನ್‌ಲೈನ್‌ ಅರ್ಜಿ ಹಾಕುವ ವಿಧಾನ :
ವೆಬ್‌ಸೈಟ್‌ ವಿಳಾಸ “karnemakaone.kar.nic.in/abcd/ApplicationForm_JA_org.aspx” ಕ್ಕೆ ಭೇಟಿ ನೀಡಿ.
ಜಿಲ್ಲೆ ಆಯ್ಕೆ ಮಾಡಿ.
ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ನೀಡಿ.
ನೀವು ತಾಲ್ಲೂಕಿನಲ್ಲಿ ನಿಮ್ಮ ವರ್ಗಕ್ಕೆ ಹುದ್ದೆ ಖಾಲಿ ಇದ್ದಲ್ಲಿ, ಅರ್ಜಿ ಮುಂದುವರೆಸಬಹುದು.
ನಂತರ ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿ.
ಆನ್‌ಲೈನ್‌ ಅರ್ಜಿ ವೆಬ್‌ಪೇಜ್‌ ತೆರೆಯುತ್ತದೆ.
ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

* Current Recruitments : ಪ್ರಸ್ತುತ ನೇಮಕಾತಿಗಳು : ಪ್ರಸ್ತುತ ನೇಮಕಾತಿಗಳು

author avatar
spardhatimes
error: Content Copyright protected !!