Anganwadi Recruitment 2025 : ದಾವಣಗೆರೆಯಲ್ಲಿ 243 ಅಂಗನವಾಡಿ ಕಾರ್ಯಕರ್ತರು-ಸಹಾಯಕರ ನೇಮಕಾತಿ
Anganwadi Recruitment : 243 workers-helpers in Davangere
Anganwadi Recruitment 2025 : ದಾವಣಗೆರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿನ ವಿವಿಧ ತಾಲೂಕುಗಳಲ್ಲಿ ಅಂಗನವಾಡಿ 243 ಕಾರ್ಯಕರ್ತರು ಮತ್ತು ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೆರಿಟ್, ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನವಾಗಿರುತ್ತದೆ.
ಹುದ್ದೆಗಳ ವಿವರ
ಅಂಗನವಾಡಿ ಕಾರ್ಯಕರ್ತೆ 30 ಹುದ್ದೆ
ಅಂಗನವಾಡಿ ಸಹಾಯಕಿ 213 ಹುದ್ದೆ
ದಾವಣಗೆರೆ : ಕಾರ್ಯಕರ್ತೆ- 5 , ಸಹಾಯಕಿ- 98.
ಹರಿಹರ : ಕಾರ್ಯಕರ್ತೆ- 5 , ಸಹಾಯಕಿ- 44.
ಹೊನ್ನಾಳಿ: ಕಾರ್ಯಕರ್ತೆ- 5 , ಸಹಾಯಕಿ- 34.
ಜಗಲೂರು: ಕಾರ್ಯಕರ್ತೆ- 15 , ಸಹಾಯಕಿ- 37.
ವಿದ್ಯಾರ್ಹತೆ:
ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಗ್ರಾಮ/ತಾಲೂಕು, ನಗರದ ಖಾಯಂ/3 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಅಲ್ಲಿಯ ನಿವಾಸಿಯಾಗಿರಬೇಕು.
ವಯೋಮಿತಿ: ಕನಿಷ್ಠ 19ರಿಂದ 35 ವರ್ಷ. ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು https://karnemakaone.kar.nic.in/abcd/ ಇಲ್ಲಿಗೆ ಭೇಟಿ ನೀಡಿ.
ಆನ್‌ಲೈನ್ ಅರ್ಜಿ ಹಾಕುವ ವಿಧಾನ :
ವೆಬ್‌ಸೈಟ್ ವಿಳಾಸ “karnemakaone.kar.nic.in/abcd/ApplicationForm_JA_org.aspx” ಕ್ಕೆ ಭೇಟಿ ನೀಡಿ.
ಜಿಲ್ಲೆ ಆಯ್ಕೆ ಮಾಡಿ.
ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ನೀಡಿ.
ನೀವು ತಾಲ್ಲೂಕಿನಲ್ಲಿ ನಿಮ್ಮ ವರ್ಗಕ್ಕೆ ಹುದ್ದೆ ಖಾಲಿ ಇದ್ದಲ್ಲಿ, ಅರ್ಜಿ ಮುಂದುವರೆಸಬಹುದು.
ನಂತರ ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿ.
ಆನ್‌ಲೈನ್ ಅರ್ಜಿ ವೆಬ್‌ಪೇಜ್ ತೆರೆಯುತ್ತದೆ.
ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
* Current Recruitments : ಪ್ರಸ್ತುತ ನೇಮಕಾತಿಗಳು : ಪ್ರಸ್ತುತ ನೇಮಕಾತಿಗಳು