ಮಾರ್ಚ್ 7 : ಔಷಧಿ ದಿವಸ್ (Aushadhi Diwas)
ಔಷಧಿ ದಿವಸ್ (Aushadhi Diwas) ಅನ್ನು ಪ್ರತಿ ವರ್ಷ ಮಾರ್ಚ್ 7 ರಂದು ಭಾರತದಲ್ಲಿ ಆಚರಿಸಲಾಗುತ್ತದೆ. ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಈ ದಿನದ ಹಿನ್ನೆಲೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆ (Pradhan Mantri Bhartiya Janaushadhi Pariyojana – PMBJP)ಗೆ ಸಂಬಂಧಿಸಿದೆ. ಈ ಯೋಜನೆಯನ್ನು ಮೊದಲ ಬಾರಿ 2008ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿತು. ನಂತರ 2015ರಲ್ಲಿ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ, ದೇಶದಾದ್ಯಂತ ಜನೌಷಧಿ ಕೇಂದ್ರಗಳನ್ನು ಹೆಚ್ಚಿಸುವ ಕಾರ್ಯ ಆರಂಭಿಸಲಾಯಿತು.
ಸಾಮಾನ್ಯ ಜನರಿಗೆ ಬ್ರ್ಯಾಂಡ್ ಔಷಧಿಗಳಿಗಿಂತ ಕಡಿಮೆ ದರದಲ್ಲಿ ಜನರಿಕ್ ಔಷಧಿಗಳು ದೊರಕಬೇಕು ಮತ್ತು ಆರೋಗ್ಯ ಸೇವೆಗಳು ಎಲ್ಲರಿಗೂ ಕೈಗೆಟುಕುವಂತಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಯಾಯಿತು.
ಈ ಯೋಜನೆಯ ಪ್ರಚಾರ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು 2019ರಿಂದ ಮಾರ್ಚ್ 7 ಅನ್ನು “ಔಷಧಿ ದಿವಸ್” ಎಂದು ಆಚರಿಸಲಾಗುತ್ತಿದೆ.
ಪ್ರಸ್ತುತ ಭಾರತದೆಲ್ಲೆಡೆ ಸಾವಿರಾರು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಜನರು ಕಡಿಮೆ ದರದಲ್ಲಿ ಔಷಧಿಗಳನ್ನು ಪಡೆದು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
- ನೇಪಾಳ ಚುನಾವಣೆ : RSP ಪಕ್ಷಕ್ಕೆ ಭಾರಿ ಮುನ್ನಡೆ, ಬಲೇನ್ ಶಾ ಮುಂದಿನ ಪ್ರಧಾನಿ..?
- ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March
- ಮಾರ್ಚ್ 7 : ಔಷಧಿ ದಿವಸ್ (Aushadhi Diwas)
- ಟಿ20 ವಿಶ್ವಕಪ್ ಫೈನಲ್ : ಅಹಮದಾಬಾದ್ನ ಭಾರತ-ನ್ಯೂಜಿಲೆಂಡ್ ಫೈನಲ್ ಫೈಟ್
- Hurun’s global rich list 2026 : ಭಾರತದ ಶ್ರೀಮಂತರ ಪಟ್ಟಿಯ ಆಗ್ರಾ ಸ್ಥಾನದಲ್ಲಿ ಮುಖೇಶ್ ಅಂಬಾನಿ


