Latest UpdatesCurrent Affairs

ಬಾಬರಿ ಮಸೀದಿ ದ್ವಂಸ ಪ್ರಕರಣ : ಇಲ್ಲಿದೆ 28 ವರ್ಷಗಳ ಇತಿಹಾಸ

Share With Friends

ಅಯೋಧ್ಯೆಯಲ್ಲಿ ರಾಮದೇವರ ಜನ್ಮಸ್ಥಳವನ್ನು ಗುರುತಿಸಿದ ಪ್ರಾಚೀನ ದೇವಾಲಯದ ಅವಶೇಷದ ಮೇಲೆ 16ನೇ ಶತಮಾನದ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ನಂಬಿದ್ದ ಸಾವಿರಾರು ‘ಕರಸೇವಕರು’ ಮಸೀದಿಯನ್ನು ಧ್ವಂಸ ಮಾಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆದ ವ್ಯಾಪಕ ಹಿಂಸಾಚಾರದಲ್ಲಿ 3,000 ಜನರು ಬಲಿಯಾಗಿದ್ದರು ಮತ್ತು ಈ ಘಟನೆ ಭಾರತದ ರಾಜಕೀಯ ಚಿತ್ರಣವನ್ನು ಶಾಶ್ವತವಾಗಿ ಬದಲಾಯಿಸಿತ್ತು.

ಅಡ್ವಾಣಿಯ ರಥಯಾತ್ರೆಯ ಬಳಿಕ ಮಸೀದಿಯನ್ನು ಧ್ವಂಸ ಮಾಡಲಾಗಿತ್ತು ಮತ್ತು ಈ ಸಂದರ್ಭ ಈಗ ಬದುಕುಳಿದಿರುವ ಆರೋಪಿಗಳಲ್ಲಿ ಅಡ್ವಾಣಿ, ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಸಹಿತ 32 ಮಂದಿ ಸಮೀಪವೇ ಇದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಲ್ಲಿ ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರು, ಮಂದಿರ ನಿರ್ಮಾಣದ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದವರು ಭಾಷಣ ಮಾಡುತ್ತಿದ್ದರು. ಈ ಉದ್ರೇಕಕಾರಿ ಭಾಷಣ ಅಲ್ಲಿ ನೆರೆದಿದ್ದ ಗುಂಪನ್ನು ಪ್ರಚೋದಿಸಿದೆ ಎಂದು ತನಿಖಾ ತಂಡಗಳು ಆರೋಪಿಸಿದ್ದವು.
✦ಕಲ್ಯಾಣ್ ಸಿಂಗ್ ಆಗ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಮಸೀದಿ ನೆಲಸಮವಾದ ಬಳಿಕ ದೇಶದಾದ್ಯಂತ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಅವರ ಸರಕಾರವನ್ನು ವಜಾಗೊಳಿಸಲಾಗಿತ್ತು.
✦2020ರ ಜುಲೈ 24ರಂದು ಅಡ್ವಾಣಿಯ ವಿಚಾರಣೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದಿತ್ತು ಮತ್ತು ಅವರು ಆರೋಪವನ್ನು ನಿರಾಕರಿಸಿದ್ದರು.
✦ಕಳೆದ 28 ವರ್ಷಗಳಲ್ಲಿ ಈ ಪ್ರಕರಣ ಹಲವು ತಿರುವುಗಳನ್ನು ಪಡೆದಿತ್ತು. 1992ರಲ್ಲಿ ಎರಡು ಪ್ರಕರಣ ದಾಖಲಿಸಿದ್ದು ಬಳಿಕ ದಾಖಲಾದ ಪ್ರಕರಣಗಳ ಸಂಖ್ಯೆ 49ಕ್ಕೇರಿತ್ತು.
✦ಎರಡನೇ ಪ್ರಕರಣ ಎಫ್‌ಐಆರ್ ನಂಬರ್ 198ರಲ್ಲಿ ಅಡ್ವಾಣಿ, ಜೋಷಿ ಮತ್ತು ಉಮಾ ಭಾರತಿ ವಿರುದ್ಧ ಧಾರ್ಮಿಕ ದ್ವೇಷತ್ವಕ್ಕೆ ಉತ್ತೇಜನ ನೀಡಿದ್ದು ಮತ್ತು ದಂಗೆಗೆ ಪ್ರೋತ್ಸಾಹ ನೀಡಿದ ಆರೋಪ ಹೊರಿಸಲಾಗಿತ್ತು.
✦ಬಳಿಕ ಸುಪ್ರೀಂಕೋರ್ಟ್‌ನ ಸೂಚನೆಯಂತೆ ಕ್ರಿಮಿನಲ್ ಒಳಸಂಚು ಆರೋಪವನ್ನು ಸೇರಿಸಲಾಗಿತ್ತು. 1993ರಲ್ಲಿ ಸಿಬಿಐ ಎಲ್ಲಾ ಎಫ್‌ಐಆರ್‌ಗಳನ್ನೂ ಕ್ರೋಢೀಕರಿಸಿ ಒಂದೇ ಎಫ್‌ಐಆರ್ ದಾಖಲಿಸಿದ್ದು ಇದರಲ್ಲಿ ಶಿವಸೇನೆಯ ಸ್ಥಾಪಕ ಬಾಳಾ ಠಾಕ್ರೆಯ ಹೆಸರನ್ನೂ ಸೇರಿಸಲಾಗಿತ್ತು.
✦ಪ್ರಕರಣದ ಕುರಿತಂತೆ ಸಿಬಿಐ ಈವರೆಗೆ ಸುಮಾರು 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಟ್ಟು 49 ಜನರು ಆರೋಪಿಗಳಿದ್ದರು. ಆದರೆ, ಅವರಲ್ಲಿ 17 ಜನ ಈಗಾಗಲೇ ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಉಮಾಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್ ಮತ್ತು ಸಾಕ್ಷಿ ಮಹಾರಾಜ್ ಸೇರಿದಂತೆ 32 ಜನ ಆರೋಪಿಗಳಾಗಿದ್ದರು.

✦ ಏನಿದು ಪ್ರಕರಣ?:
ಮೊಘಲರ ಕಾಲದಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕಟ್ಟಲಾಗಿತ್ತು. ರಾಮ ಮಂದಿರ ಕೆಡವಿ ಬಾಬರಿ ಮಸೀದಿ ಕಟ್ಟಲಾಗಿದೆ ಎಂದು ಹಿಂದೂಗಳು ಆರೋಪಿಸಿದ್ದರು.೧೯೮೪ರಲ್ಲಿ ವಿಶ್ವ ಹಿಂದು ಪರಿಷತ್ ಈ ವಿಚಾರದಲ್ಲಿ ಸಾರ್ವಜನಿಕರ ಬೆಂಬಲ ತೆಗೆದುಕೊಳ್ಳಲು ಆಂದೋಲನ ಆರಂಭಿಸಿತ್ತು. ನಂತರ ಈ ವಿಚಾರ ಕೋರ್ಟ್ ಮೆಟ್ಟಿಲೇರಿತು. 1992ರಲ್ಲಿ ಅನೇಕ ಹಿಂದು ಕಾರ್ಯಕರ್ತರು ಬಾಬರಿ ಮಸೀದಿಯನ್ನು ಕೆಡವಿದರು. ಇದರಿಂದ ದೇಶಾದ್ಯಂತ ಸಾಕಷ್ಟು ಹಿಂಸಾಚಾರಗಳು ನಡೆದವು.

ಇನ್ನು, ಪ್ರತೀ ವರ್ಷವೂ ಅಯೋಧ್ಯೆ ಬಾಬರಿ ಮಸೀದಿ ಧ್ವಂಸ ಮಾಡಿದ ದಿನವನ್ನು ವಿಶ್ವ ಹಿಂದು ಪರಿಷತ್, ಭಜರಂಗದಳ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಶೌರ್ಯದ ದಿನ ಎಂದು ಆಚರಣೆ ಮಾಡುತ್ತವೆ.ಅಂತೆಯೇ ಇನ್ನೊಂದೆಡೆ ಈ ದಿನವನ್ನು ಕಪ್ಪು ದಿನ ಎಂದು ಮುಸ್ಲಿಂ ಸಂಘಟನೆಗಳು ಬೀದಿಗಿಳಿಯುತ್ತವೆ.ಆದ್ದರಿಂದ ಯಾವುದೇ ಅನಾಹುತ ಸಂಭವಿಸಿದಂತೆ ತಡೆಯಲು ದೇಶಾದ್ಯಂತ ಬಿಗಿ ಪೆÇಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅಯೋಧ್ಯೆ ಸೇರಿದಂತೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುತ್ತದೆ.

✦32 ಆರೋಪಿಗಳ ಗಳಿಗೆ ಕ್ಲೀನ್ ಚಿಟ್  :
ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ 28 ವರ್ಷಗಳಷ್ಟು ಹಳೆಯ ವಿವಾದವಾದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ಐತಿಹಾಸಿಕ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದ್ದು, ಈ ಪ್ರಕರಣದಲ್ಲಿ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಎಲ್ಲ 32 ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿದೆ. ಇದರಿಂದಾಗಿ ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರುಗಳಿಗೆ ಬಾಬರಿ ಮಸೀದಿ ಧ್ವಂಸ ಆರೋಪದಿಂದ ಕ್ಲೀನ್ ಚಿಟ್ ದೊರೆತಂತಾಗಿದೆ. ಒಟ್ಟು 2,000 ಪುಟಗಳನ್ನು ಒಳಗೊಂಡ ಚಾರಿತ್ರಿಕ ತೀರ್ಪುನಲ್ಲಿ ಬಾಬರಿ ಮಸೀದಿ ಧ್ವಂಸ ಪೂರ್ವನಿಯೋಜಿತವಲ್ಲ. ಇದೊಂದು ಆಕಸ್ಮಿಕ ಘಟನೆ ಮತ್ತು ಆರೋಪಿಗಳ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲ ಎಂದು ಸಿಬಿಐ ವಿಶೇಷ ನ್ಯಾಯಾೀಶರಾದ ನ್ಯಾಯಮೂರ್ತಿ ಎಸ್.ಕೆ.ಯಾದವ್ ತಿಳಿಸಿದರು.

✦ತೀರ್ಪಿನ ವೇಳೆ ಆರೋಪಿಗಳು ಹಾಜರು :
ಅಡ್ವಾಣಿ, ಜೋಷಿ ಮತ್ತು ಉಮಾ ಅವರು ವಿಡಿಯೋ ಲಿಂಕ್ ಮೂಲಕ ಕೋರ್ಟ್‍ನಲ್ಲಿ ಹಾಜರಾತಿ ಪ್ರತಿನಿಸಿದ್ದರು. ಉಳಿದ 26 ಆರೋಪಿಗಳು ಹಾಜರಾಗಿದ್ದರು. ವಿನಯಜ್ ಕಟಿಯಾರ್, ಧರ್ಮದಾಸ್, ವೇದಾಂತಿ, ಲಲ್ಲೂ ಸಿಂಗ್, ಸಾಕ್ಷಿ ಮಹಾರಾಜ್, ಸ್ವಾ ರೀತಾಂಬರ್, ಚಂಪತ್ ರಾಯ್, ಪವನ್ ಪಾಂಡೆ ಸೇರಿದಂತೆ 26 ಆರೋಪಿಗಳು ನ್ಯಾಯಾಲಯದಲ್ಲಿ ತೀರ್ಪಿನ ವೇಳೆ ಸಭಾಂಗಣದ ಮೊದಲ ಸಾಲುಗಳಲ್ಲಿ ಉಪಸಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content Copyright protected !!
ಉದ್ಯೋಗಾವಕಾಶಗಳು Current Affairs Today Current Affairs