BMRCL Recruitment : ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ
BMRCL Recruitment : Graduate Engineer (Civil) posts
ನಮ್ಮ ಮೆಟ್ರೋ (Namma Metroದಲ್ಲಿ ಖಾಲಿ ಇದುವ ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್Bangalore Metro Rail Corporation Limited) ಅರ್ಜಿ ಆಹ್ವಾನಿಸಿದೆ. ಒಟ್ಟು 35 ಗ್ರ್ಯಾಜುವೇಟ್ ಎಂಜಿನಿಯರ್ (ಸಿವಿಲ್) ಇದೆ. ಆಸಕ್ತರು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಮೇ 3ರೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : 35 ಗ್ರಾಜ್ಯುವೇಟ್ ಎಂಜಿನಿಯರ್ (ಸಿವಿಲ್) ಹುದ್ದೆಗಳು
ವಿದ್ಯಾರ್ಹತೆ : ದೇಶದ ಯಾವುದೇ ಅಧಿಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವ ವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಕನ್ನಡ ಓದಲು, ಮಾತನಾಡಲು, ಬರೆಯಲು ಮತ್ತು ಅರ್ಥ ಮಾಡಿಕೊಳ್ಳಲು ಬರಬೇಕು.
ವಯೋಮಿತಿ :
ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ ಎಂದು ಅಧಿಸೂಚನೆ ತಿಳಿಸಿದೆ.
ಆಯ್ಕೆ ವಿಧಾನ :
ಗೇಟ್ (GATE) ಸ್ಕೋರ್, ಲಿಖಿತ ಪರೀಕ್ಷೆ/ಸ್ಕಿಲ್ ಟೆಸ್ಟ್/ಮೆಡಿಕಲ್ ಟೆಸ್ಟ್/ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರನ್ನು 3 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಆಯ್ಕೆಯಾದವರಿಗೆ 44,000 ರೂ. ಮಾಸಿಕ ವೇತನ ದೊರೆಯಲಿದೆ.
ಭರ್ತಿ ಮಾಡಿದ ಅಪ್ಲಿಕೇಷನ್ ಹಾರ್ಡ್ ಕಾಪಿಯನ್ನು ವಿವಿಧ ದಾಖಲಾತಿ, ಫೋಟೊದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಮೇ 7ರೊಳಗೆ ತಲುಪುವಂತೆ ಸ್ಪೀಡ್ ಪೋಸ್ಟ್ ಮಾಡಿ:
General Manager (HR), Bangalore Metro Rail Corporation Limited, III Floor, BMTC Complex, K.H. Road, Shanthinagar, Bengaluru – 560027.
ಹೆಚ್ಚಿನ ಮಾಹಿತಿಗೆ ಅಧಿಕೃತ ವಿಳಾಸ: recruitv.bmrc.co.in ಗೆ ಭೇಟಿ ನೀಡಿ.
* Current Recruitments : ಪ್ರಸ್ತುತ ನೇಮಕಾತಿಗಳು : ಪ್ರಸ್ತುತ ನೇಮಕಾತಿಗಳು
- PM Modi : ಮೋದಿಗೆ ಘಾನಾ ದೇಶದ ಅತ್ಯುನ್ನತ ರಾಷ್ಟೀಯ ಪ್ರಶಸ್ತಿ ಪ್ರದಾನ
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (03-07-2025)
- ಇಂದಿನ ಪ್ರಚಲಿತ ವಿದ್ಯಮಾನಗಳು / 02-07-2025 (Today’s Current Affairs)
- Meet Anil Menon : 2026ರಲ್ಲಿ ಬಾಹ್ಯಾಕಾಶಕ್ಕೆ ಮತ್ತೊಬ್ಬ ಭಾರತೀಯ ಮೂಲದ ಗಗನಯಾತ್ರಿ ಅನಿಲ್ ಮೆನನ್
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (02-07-2025)