CISF Recruitment : ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 1161 ವಿವಿಧ ಹುದ್ದೆಗಳ ನೇಮಕಾತಿ
CISF Recruitment : Constable Tradesmen Recruitment 2025
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 1161 ಕಾನ್ಸ್‌ಟೇಬಲ್ / ಟ್ರೇಡ್ಸ್‌ಮನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 03 2025
ಹುದ್ದೆಗಳ ವಿವರ :
ಒಟ್ಟು ಹುದ್ದೆಗಳು : 1161 (ಒಟ್ಟು ಹುದ್ದೆಗಳ ಪೈಕಿ ಪುರುಷ ಅಭ್ಯರ್ಥಿಗಳಿಗೆ -945, ಮಹಿಳೆಯರಿಗೆ – 103, ಮಾಜಿ ಸೈನಿಕರಿಗೆ 113 ಪೋಸ್ಟ್‌ಗಳು ಮೀಸಲಿವೆ.)
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಮತ್ತು ಹುದ್ದೆಗಳನ್ನು ಭರ್ತಿ ಮಾಡುವ ಟ್ರೇಡ್‌ನಲ್ಲಿನ ಸ್ಕಿಲ್‌ಗಳ ಶಿಕ್ಷಣವನ್ನು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ಪಡೆದಿರಬೇಕು.ಶೈಕ್ಷಣಿಕ ಅರ್ಹತೆಗಳನ್ನು 03-04-2025 ರೊಳಗೆ ಪಡೆದಿರಬೇಕು.
ವಯೋಮಿತಿ : ದಿನಾಂಕ 01-08-2025 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 23 ವರ್ಷ ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ಕೆಟಗರಿ – ನಾನ್ ಕ್ರಿಮಿಲೇಯರ್ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇದೆ.
ಅರ್ಜಿ ಶುಲ್ಕ : ರೂ.100. ( ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬಹುದು.)
ವೇತನಶ್ರೇಣಿ : ವೇತನ ಶ್ರೇಣಿ : ರೂ.21,700-69,100.
ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದವರಿಗೆ ದೈಹಿಕ ಸಹಿಷ್ಣುತೆ ಪರೀಕ್ಷೆ (ಪಿಇಟಿ), ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಎಸ್‌ಟಿ), ಟ್ರೇಡ್ ಟೆಸ್ಟ್, ಮೂಲ ದಾಖಲೆಗಳ ಪರಿಶೀಲನೆ, ಒಎಂಆರ್ ಆಧಾರಿತ ಕಂಪ್ಯೂಟರ್ ಪರೀಕ್ಷೆ, ಮೆಡಿಕಲ್ ಟೆಸ್ಟ್ ನಡೆಸುವ ಮೂಲಕ ಮೆರಿಟ್ ಆಧಾರದಲ್ಲಿ, ಮೀಸಲಾತಿಗೆ ಅನುಗುಣವಾಗಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯ ಭಾಷೆಗಳು – ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪರೀಕ್ಷೆ ಇರುತ್ತದೆ. 120 ನಿಮಿಷದ ಪರೀಕ್ಷೆ ಇದಾಗಿದ್ದು, ಓಎಂಆರ್ ಶೀಟ್ ಆಧಾರಿತ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿರುತ್ತದೆ.
ಅರ್ಜಿಸಲ್ಲಿಸಲು ಹಾಗೂ ನೇಮಕಾತಿ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅಧಿಕೃತ ವೆಬ್‌ಸೈಟ್ ವಿಳಾಸ – https://cisfrectt.cisf.gov.in/ ಗೆ ಭೇಟಿನೀಡಿ.
ಅಧಿಸೂಚನೆ : click here
Read More : Current Recruitments : ಪ್ರಸ್ತುತ ನೇಮಕಾತಿಗಳು