Current AffairsSpardha Times

ಪ್ರಚಲಿತ ಘಟನೆಗಳು : 02-10-2020

Share With Friends

# ಕಲ್ಪನಾ ಚಾವ್ಲಾ ಅವರ ಹೆಸರಿನ ಗಗನನೌಕೆ ಉಡಾವಣೆ
ಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರಿನ ಅಮೆರಿಕದ ನಾರ್ತ್ ರೋಪ್ ಗ್ರುಮನ್ ಕಾರ್ಪೊರೇಷನ್ ನ ಸೈನಸ್ ಗಗನನೌಕೆಯನ್ನು ನಾಸಾದ ವಾಲೋಪ್ಸ್ ಫ್ಲೈಟ್ ಫೆಸಿಲಿಟಿಯಿಂದ ಉಡಾವಣೆ ಮಾಡಲಾಗಿದೆ. ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕು ಮತ್ತು ಸರಕುಗಳನ್ನು ಹೊತ್ತೊಯ್ಯುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಸಾ (ನ್ಯಾಷನಲ್ ಏರೋನಾಟಿಕಲ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್) ಕೇಂದ್ರದಿಂದ ಹೊರಟ ಈ ರಾಕೆಟ್ 3628 ಕೆ.ಜಿ ತೂಕ ಹೊಂದಿದೆ. ಉತ್ತರರೋಪ್ ಗ್ರುಮನ್ ಆಂಟಾರೆಸ್ ರಾಕೆಟ್ ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಡಲಾಗಿದೆ. ಅಂದ ಹಾಗೇ ಇದು ಇದು ಮನುಕುಲದ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸರಕು ಗಳನ್ನು ತಲುಪಿಸಿದ ನಂತರ ಇದು ಮೈಕ್ರೋಗ್ರಾವಿಟಿಯಲ್ಲಿ ದೊಡ್ಡ ಪ್ರಮಾಣದ ಬೆಂಕಿಯನ್ನು ಅಧ್ಯಯನ ಮಾಡುತ್ತದೆ. ನಂತರ ಭೂಮಿಗೆ ಹಿಂದಿರುಗಿ ಪೆಸಿಫಿಕ್ ಮಹಾಸಾಗರದಲ್ಲಿ ಇಳಿಯಬೇಕಾಗಿದೆ.

# ಜಗತ್ತಿನ ಅತಿದೊಡ್ಡ ಅಟಲ್ ಸುರಂಗ ಮಾರ್ಗ ಲೋಕಾರ್ಪಣೆ :
ಪಂಚದಲ್ಲೇ ಅತಿದೊಡ್ಡ ಹೆದ್ದಾರಿ ಸುರಂಗ ಮಾರ್ಗ ಎಂಬ ಖ್ಯಾತಿ ಪಡೆದಿರುವ ಅಟಲ್ ಸುರಂಗ ಮಾರ್ಗದಲ್ಲಿನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಅಕ್ಟೋಬರ್ 03, 2020) ವಿಧ್ಯುಕ್ತವಾಗಿ ಚಾಲನೆ ನೀಡಿದರು. ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್ ನ ಅಡಿಯಲ್ಲಿ ನಿರ್ಮಾಣವಾಗಿರುವ 9.02 ಕಿಲೋ ಮೀಟರ್ ಉದ್ದದ ಅಟಲ್ ಸುರಂಗ ಮಾರ್ಗ ಭಾರತದ ಪಾಲಿಗೆ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವಪೂರ್ಣವಾಗಿದೆ. ಚಳಿಗಾಲದ ಸಮಯದಲ್ಲಿ ಭಾರತದ ಇತರೆ ಪ್ರದೇಶದೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದ ಪ್ರದೇಶಗಳಿಗೆ ಈ ಸುರಂಗ ಮಾರ್ಗ ಸರ್ವ ಋತುವಲ್ಲೂ ಸಂಚಾರ ಸೇವೆ ಕಲ್ಪಿಸಲಿದೆ. ಲಡಾಖ್ ನಲ್ಲಿ ಸೈನಿಕರಿಗೆ ತ್ವರಿತವಾಗಿ ಶಸ್ತ್ರಾಸ್ತ್ರ ಮತ್ತು ಆಹಾರ ಸಾಮಗ್ರಿಯನ್ನು ತಲುಪಿಸಲು ಈ ಸುರಂಗಮಾರ್ಗ ಬಳಕೆಯಾಗಲಿದೆ.

ಸುಮಾರು ಹತ್ತು ಸಾವಿರ ಅಡಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಈ ಮೊದಲಿನ ಅಂದಾಜಿನ ಪ್ರಕಾರ ಆರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಇದೀಗ ಬರೋಬ್ಬರಿ ಹತ್ತು ವರ್ಷಗಳ ನಂತರ ಸುರಂಗ ಮಾರ್ಗ ಪೂರ್ಣಗೊಂಡಿದ್ದು, ಇದು 9.2 ಕಿಲೋ ಮೀಟರ್ ದೂರ ಹೊಂದಿದೆ ಅಟಲ್ ಸುರಂಗ ಇದು ಮನಾಲಿ ಮತ್ತು ಲೇಹ್ ಅನ್ನು ಸಂಪರ್ಕಿಸಲಿದ್ದು, ವಿಶ್ವದ ಅತೀ ಉದ್ದದ ಹೆದ್ದಾರಿ ಸುರಂಗ ಮಾರ್ಗವಾಗಿದೆ. ಪ್ರತಿ 60 ಮೀಟರ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ, ಸುರಂಗದ ಒಳಮಾರ್ಗದ ಪ್ರತಿ 500 ಮೀಟರ್ ಅಂತರದಲ್ಲಿ ತುರ್ತು ಸುರಂಗ ಮಾರ್ಗ ಕೊರೆಯಲಾಗಿದೆ. ಈ ಸುರಂಗ ಮಾರ್ಗದಿಂದಾಗಿ ಮನಾಲಿ ಮತ್ತು ಲೇಹ್ ನಡುವೆ 46 ಕಿಲೋ ಮೀಟರ್ ಗಳಷ್ಟು ದೂರವನ್ನು ಕಡಿಮೆಗೊಳಿಸಿದೆ. ಅಲ್ಲದೇ ನಾಲ್ಕು ಗಂಟೆಗಳ ಅವಧಿ ಪ್ರಯಾಣಿಕರಿಗೆ ಉಳಿತಾಯವಾಗಲಿದೆ.

# 1,328ನೇ ಚಿಟ್ಟೆಯ ಪ್ರಭೇದ ಪತ್ತೆ
ಹೀಗೊಂದು ಚಿಟ್ಟೆ ಮಾಸವನ್ನು ಸೆ. 5ರಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲೇ ಭಾರತದ 1,328ನೇ ಚಿಟ್ಟೆಯ ಪ್ರಭೇದ ಪತ್ತೆಯಾಗಿದೆ. ಇದರ ವೈಜ್ಞಾನಿಕ ಹೆಸರು ಸ್ಪಿಯಾಲಿಯಾ ಜೀಬ್ರಾ. ಬರೀ ಎರಡೂವರೆ ಸೆಂಟಿಮೀಟರ್ ಅಗಲ ಇರುವ ಈ ಚಿಟ್ಟೆ ಭಾರೀ ವೇಗದಲ್ಲಿ ಹಾರಬಲ್ಲದು ಎನ್ನಲಾಗಿದೆ. ಚಿಟ್ಟೆತಜ್ಞ ಮುಖೇಶ್ ಪನ್ವರ್ ಇದನ್ನು ಪತ್ತೆ ಹಚ್ಚಿದ್ದಾರೆ. ರಾಜಸ್ಥಾನದ ಡುಂಗರ್​ಪುರ್ ಜಿಲ್ಲೆಯ ಸಾಗ್ವರ ನಿವಾಸಿ ಆಗಿರುವ ಇವರು, 15 ವರ್ಷಗಳಿಂದ ಚಿಟ್ಟೆಗಳ ಕುರಿತು ಅಧ್ಯಯನ ನಡೆಸುತ್ತಿರುವ ವಗಡ್​ ನೇಚರ್ ಕ್ಲಬ್​ನ ಸದಸ್ಯ.

ಇವರು 2014ರ ನ. 8ರಂದು ಸಾಗ್ವರದ ಧನ್​ರಾಜ್​ ಫಾರ್ಮ್​ ಹೌಸ್​ನಲ್ಲಿ ಈ ಚಿಟ್ಟೆಯನ್ನು ಕಂಡಿದ್ದರು. ಇದರ ಫೋಟೋ ತೆಗೆದುಕೊಂಡಿದ್ದ ಮುಖೇಶ್​ ಉತ್ತರಾಖಂಡದ ಭಿಮ್ಟಲ್​ನ ಬಟರ್​ ಫ್ಲೈ ರಿಸರ್ಚ್​ ಇನ್​​ಸ್ಟಿಟ್ಯೂಟ್​ಗೆ ಕಳುಹಿಸಿದ್ದರು. ಆರು ವರ್ಷಗಳ ಅಧ್ಯಯನದ ಬಳಿಕ ಈ ಸಂಸ್ಥೆಯ ನಿರ್ದೇಶಕ, ಈ ಚಿಟ್ಟೆಯನ್ನು ಭಾರತದ 1,328ನೇ ಪ್ರಭೇದ ಎಂಬುದಾಗಿ ಘೋಷಿಸಿದ್ದಾರೆ.

# 62.43 ಕೋಟಿ ರೂ. ಮೌಲ್ಯದ ಬಿಡಿಭಾಗಗಳ ಖರೀದಿಗೆ ಅಮೆರಿಕ ಒಪ್ಪಿಗೆ : 
ಸಿ -130 ಜೆ ಸೂಪರ್ ಹರ್ಕ್ಯುಲಸ್ ಸರಕು ವಿಮಾನಗಳಿಗೆ ಅಗತ್ಯವಾದ ರೂ. 62.43 ಕೋಟಿ ಮೌಲ್ಯದ ಉಪಕರಣಗಳು, ಬಿಡಿಭಾಗಗಳು ಮತ್ತು ಇತರೆ ಸರಕುಗಳ ಖರೀದಿಸುವ ಭಾರತದ ಮನವಿಗೆ ಅಮೆರಿಕ ಒಪ್ಪಿಗೆ ನೀಡಿದೆ.

‘ಉದ್ದೇಶಿತ ಈ ವ್ಯಾಪಾರ ಅಮೆರಿಕ -ಭಾರತದ ಕಾರ್ಯತಂತ್ರ ಸಂಬಂಧವನ್ನು ಬಲಪಡಿಸಲು ಮತ್ತು ಪ್ರಮುಖ ರಕ್ಷಣಾ ಪಾಲುದಾರರ ಸುರಕ್ಷತೆಯನ್ನು ಸುಧಾರಿಸಲು ನೆರವಾಗುವ ಮೂಲಕ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸುತ್ತದೆ’ ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆಯು ಅಮೆರಿಕ ಸಂಸತ್ತಿಗೆ ನೀಡಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಭಾರತ ಬೇಡಿಕೆ ಸಲ್ಲಿಸಿರುವ ವಸ್ತುಗಳಲ್ಲಿ ಬಹುತೇಕ ವಿಮಾನಕ್ಕೆ ಬಳಕೆಯಾಗುವ ಬಿಡಿಭಾಗಗಳು ಇವೆ. ಅಮೆರಿಕವು ಸಿ -130 ಜೆ ಸೂಪರ್ ಹರ್ಕ್ಯುಲಸ್ ಸರಕು ವಿಮಾನ ಮಾರಾಟ ಮಾಡಿದ 17 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ.

Leave a Reply

Your email address will not be published. Required fields are marked *

error: Content Copyright protected !!