GKLatest Updates

Customs Duty On Gold :ವಿದೇಶಗಳಿಂದ ಚಿನ್ನ ಸಾಗಾಣಿಕೆಗೆ ಭಾರತದಲ್ಲಿರುವ ಕಸ್ಟಮ್ಸ್ ನಿಯಮಗಳೇನು.. ?

Share With Friends

Customs Duty On Gold : What is the customs duty on gold in India?

ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಇಂತಿಷ್ಟು ಮೌಲ್ಯದ ಹಣ, ಚಿನ್ನ ಕೊಂಡೊಯ್ಯಬೇಕು ಎನ್ನುವ ನಿಯಮವಿರುತ್ತದೆ ವಿಮಾನದಲ್ಲಿ ಪ್ರಯಾಣಿಸುವಾಗ ಎಷ್ಟು ಚಿನ್ನ, ನಗದು ಕೊಂಡೊಯ್ಯಬಹುದು ಹಾಗೂ ಭಾರತದ ಕಸ್ಟಮ್ಸ್ ನಿಯಮಗಳೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತೀಯ ಕಸ್ಟಮ್ಸ್‌ ಎಂದರೇನು?
ದೇಶದಿಂದ ವಿದೇಶಕ್ಕೆ ಹಾಗೂ ವಿದೇಶದಿಂದ ದೇಶಕ್ಕೆ ಸರಕುಗಳ ಆಮದು ಮತ್ತು ರಫ್ತಿಗೆ ವಿಧಿಸುವ ತೆರಿಗೆ ಇದು. ಸರ್ಕಾರವು ಈ ಕಸ್ಟಮ್ಸ್ ಸುಂಕವನ್ನು ತನ್ನ ಆದಾಯವನ್ನು ಹೆಚ್ಚಿಸಲು, ದೇಶೀಯ ಕೈಗಾರಿಕೆಗಳನ್ನು ರಕ್ಷಿಸಲು ಮತ್ತು ಸರಕುಗಳ ಚಲನೆಯನ್ನು ನಿಯಂತ್ರಿಸಲು ಬಳಸುತ್ತದೆ.ದೇಶದಿಂದ ವಿದೇಶಕ್ಕೆ ಹಾಗೂ ವಿದೇಶದಿಂದ ದೇಶಕ್ಕೆ ಸರಕುಗಳ ಚಲನೆಯನ್ನು ನಿಯಂತ್ರಿಸುವ ನಿರ್ಣಾಯಕ ಕಾನೂನಾಗಿ ಕಾರ್ಯನಿರ್ವಹಿಸುವ ಕಸ್ಟಮ್ಸ್ ಕಾಯ್ದೆ 1962ರಲ್ಲಿ ಭಾರತದಲ್ಲಿ ಜಾರಿಯಾಯಿತು. 17 ಅಧ್ಯಾಯಗಳಾಗಿ ವಿಂಗಡಿಸಲಾದ ಈ ಶಾಸನವು ಆಮದು ಸುಂಕ, ರಫ್ತು ನಿರ್ಬಂಧ ಮತ್ತು ನಿಯಮ ಉಲ್ಲಂಘನೆಗಳಿಗೆ ದಂಡ ಸೇರಿದಂತೆ ವಿವಿಧ ಕಸ್ಟಮ್ಸ್ ನಿಯಮಗಳನ್ನು ಒಳಗೊಂಡಿದೆ.ಕಾನೂನುಬದ್ಧ ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಮತ್ತು ಕಳ್ಳಸಾಗಣೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಭಾರತೀಯ ಕಸ್ಟಮ್ಸ್‌ ನಿಯಮಗಳ ಪ್ರಕಾರ, 1967ರ ಪಾಸ್‌ಪೋರ್ಟ್ ಕಾಯ್ದೆಯಡಿಯಲ್ಲಿ, ಭಾರತೀಯ ಪ್ರಯಾಣಿಕರು 1 ಕೆಜಿ ಚಿನ್ನವನ್ನು ಕೊಂಡೊಯ್ಯಲು ಅನುಮತಿಸಲಾಗಿದೆ, ನಿರ್ದಿಷ್ಟ ತೆರಿಗೆಯೊಂದಿಗೆ ಪುರುಷರಿಗೆ 20 ಗ್ರಾಂ ಮತ್ತು ಮಹಿಳೆಯರಿಗೆ 40 ಗ್ರಾಂ ಅನುಮತಿಸಲಾಗಿದೆ. ಜೊತೆಗೆ ಮಕ್ಕಳು 20/40 ಗ್ರಾಂ ಚಿನ್ನವನ್ನು ತರಲು ಅವಕಾಶವಿದ್ದು, ಲಿಂಗದ ಆಧಾರದ ಮೇಲೆ ಮೌಲ್ಯದ ಮಿತಿ ರೂ. 50,000ರೂ ದಿಂದ 1,00,000ಕ್ಕೆ ಅನುಮತಿಸಿದೆ.

ಭಾರತೀಯ ಪ್ರಯಾಣಿಕರು ಅಥವಾ ಕನಿಷ್ಠ ಆರು ತಿಂಗಳ ಕಾಲ ವಿದೇಶದಲ್ಲಿ ಉಳಿದು ಭಾರತಕ್ಕೆ ಮರಳುವ ಪಾಸ್‌ಪೋರ್ಟ್ ಹೊಂದಿರುವವರು ತಮ್ಮ ಸಾಮಾನುಗಳ ಪೈಕಿ ಚಿನ್ನವನ್ನು ಆಮದು ಮಾಡಿಕೊಳ್ಳಲು ಅನುಮತಿ ಇದೆ.ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಬರಲು ಬರಲು ಕಸ್ಟಮ್ಸ್‌ ಅಧಿಕಾರಿಯಿಂದ ಕ್ಲಿಯರೆನ್ಸ್ ಪಡೆದುಕೊಳ್ಳಲೇಬೇಕು. ಕನ್ವೇಯರ್ ಬೆಲ್ಟ್‌ಗಳಿಂದ ತಮ್ಮ ವಸ್ತುಗಳನ್ನು ಮರಳಿ ಪಡೆದ ನಂತರ ಕಸ್ಟಮ್ಸ್ ತಪಾಸಣೆಗೆ ಒಳಗಾಗಬೇಕಾಗುತ್ತದೆ.

ಇಲ್ಲಿ ಎರಡು ರೀತಿಯ ಕ್ಲಿಯರೆನ್ಸ್ ಚಾನೆಲ್‌ಗಳಿದ್ದು, ಗ್ರೀನ್ ಚಾನೆಲ್ ಮತ್ತು ರೆಡ್ ಚಾನೆಲ್ ಎಂದು ವಿಂಗಡಿಸಲಾಗಿದೆ. ತೆರಿಗೆ ಹಾಗೂ ನಿಷೇಧಿತ ವಸ್ತುಗಳನ್ನು ಹೊಂದಿರದವರಿಗೆ ಗ್ರೀನ್ ಚಾನೆಲ್ ಹಾಗೂ ತೆರಿಗೆ ಹಾಗೂ ನಿಷೇಧಿತ ವಸ್ತುಗಳನ್ನು ಹೊಂದಿರುವವರಿಗೆ ರೆಡ್ ಚಾನೆಲ್‌ನಲ್ಲಿ ಕ್ಲಿಯರೆನ್ಸ್ ನೀಡಲಾಗುತ್ತದೆ.

ಪ್ರಯಾಣಿಕರು ಕ್ಲಿಯರೆನ್ಸ್ ಚಾನೆಲ್‌ಗೆ ಹೋಗುವ ಮುಂಚೆ ತಾವು ಯಾವ ಚಾನೆಲ್‌ಗೆ ಹೋಗಬೇಕು ಎಂದು ನಿರ್ಧರಿಸಬೇಕು. ಈ ಮೂಲಕ ತಾವು ಕೊಂಡೊಯ್ಯುತ್ತಿರುವ ಚಿನ್ನ ಅಥವಾ ನಗದು ಮೊತ್ತದ ಪ್ರಮಾಣವನ್ನು ತಿಳಿಸಬೇಕು. ಜೊತೆಗೆ ಚಿನ್ನದ ಖರೀದಿ ಬಿಲ್‌, ಇನ್ನಿತರ ದಾಖಲೆಗಳನ್ನು ಒದಗಿಸಬೇಕು. ಇಲ್ಲದೇ ಹೋದಲ್ಲಿ ಕಸ್ಟಮ್ಸ್ ಕಾಯ್ದೆ 1962ರ ಸೆಕ್ಷನ್ 111ರ ಅಡಿಯಲ್ಲಿ ಚಿನ್ನ ಅಥವಾ ನಗದನ್ನು ವಶಕ್ಕೆ ಪಡೆಯಬಹುದು.

ವಿಮಾನದಲ್ಲಿ ಪ್ರಯಾಣಿಸುವ ಮೊದಲು ತೆರಿಗೆ ವಿಧಿಸಬಹುದಾದ ವಸ್ತುಗಳು ಮತ್ತು ಕರೆನ್ಸಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ವಿದೇಶಿ ಕರೆನ್ಸಿ ನೋಟುಗಳ ಮೌಲ್ಯವು US $5,000 ಮೀರಿದರೆ ಅಥವಾ ಕರೆನ್ಸಿ ಸೇರಿದಂತೆ ಒಟ್ಟು ವಿದೇಶಿ ವಿನಿಮಯವು US $10,000 ಮೀರಿದರೆ ಸಂಬಂಧಪಟ್ಟ ದಾಖಲಾತಿಗಳು ಅವಶ್ಯಕ.ನಿಷೇಧಿತ ಅಥವಾ ತೆರಿಗೆ ವಿಧಿಸಬಹುದಾದ ವಸ್ತುಗಳನ್ನು ಹೊಂದಿದ್ದರೂ ಕೂಡ ಗ್ರೀನ್ ಚಾನೆಲ್ ಬಳಸುವ ಪ್ರಯಾಣಿಕರಿಗೆ ಕಾನೂನು ಕ್ರಮ, ದಂಡ ಅಥವಾ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಬಹುದು.

ಯಾವುದೇ ವ್ಯಕ್ತಿಗೆ ನಿರ್ದಿಷ್ಟ ಮಿತಿಯಿಲ್ಲದೆ ವಿದೇಶದಿಂದ ಭಾರತಕ್ಕೆ ಚಿನ್ನ ಅಥವಾ ನಗದನ್ನು ತರಲು ಅವಕಾಶವಿದೆ. ಆದರೆ ಈ ಕುರಿತು ಮೊದಲೇ ಮಾಹಿತಿ ನೀಡಬೇಕು. ಕಸ್ಟಮ್ಸ್ ಕಾಯ್ದೆಯ ಪ್ರಕಾರ, ಮಾಹಿತಿ ನೀಡದಿರುವುದು, ತಪ್ಪಾದ ಮಾಹಿತಿ ನೀಡುವುದು ಅಥವಾ ಕಳ್ಳ ಸಾಗಾಟ ಮಾಡುವುದರಿಂದ ವಸ್ತುಗಳನ್ನು ವಶಪಡಿಸಿಕೊಳ್ಳಲು ಅವಕಾಶವಿರುತ್ತದೆ.ಗ್ರೀನ್ ಚಾನೆಲ್ ಮೂಲಕ ನಿಷೇಧಿತ ಅಥವಾ ತೆರಿಗೆ ವಿಧಿಸಬಹುದಾದ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದರೇ ಅಥವಾ ರೆಡ್ ಚಾನೆಲ್‌ನಲ್ಲಿ ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಸ್ಟಮ್ಸ್‌ ಕಾನೂನು ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಹಾಗಾದರೆ ವಿದೇಶದಿಂದ ಎಷ್ಟು ಚಿನ್ನವನ್ನು ತರಬಹುದು?
ಭಾರತಕ್ಕೆ ಬರುವ ಪುರುಷ ಪ್ರಯಾಣಿಕರು ಕಸ್ಟಮ್ಸ್‌ ಶುಲ್ಕವಿಲ್ಲದೆ ಕೇವಲ 20 ಗ್ರಾಂ ಚಿನ್ನಾಭರಣ (ಗರಿಷ್ಠ ಬೆಲೆ 50 ಸಾವಿರ ರೂ.) ತರಲು ಮಾತ್ರ ಅವಕಾಶವಿದೆ. ಮಹಿಳಾ ಪ್ರಯಾಣಿಕರು ಗರಿಷ್ಠ ಬೆಲೆ 1 ಲಕ್ಷ ರೂ. ಮೀರದಂತೆ 40 ಗ್ರಾಂ ಚಿನ್ನ ತರಲು ಅವಕಾಶವಿದೆ.

20, 40 ಗ್ರಾಂಗಿಂತ ಹೆಚ್ಚಿದ್ದರೆ ಏನು ಮಾಡಬೇಕು?
ಒಂದು ವೇಳೆ ಪುರುಷ ಪ್ರಯಾಣಿಕರು 20 ಗ್ರಾಂಗಿಂತ ಹೆಚ್ಚು ಹಾಗೂ 50 ಗ್ರಾಂನೊಳಗೆ ಚಿನ್ನ ತಂದರೆ ಶೇ. 3ರಷ್ಟು ಕಸ್ಟಮ್ಸ್‌ ಶುಲ್ಕ ಪಾವತಿಸಬೇಕು. 50 ಗ್ರಾಂಗಿಂತ ಹೆಚ್ಚಿನ ಚಿನ್ನಕ್ಕೆ ಶೇ. 6, 100 ಗ್ರಾಂಗಿಂತ ಹೆಚ್ಚಿನ ಚಿನ್ನ ತಂದರೆ ಶೇ. 10ರಷ್ಟು ಕಸ್ಟಮ್ಸ್‌ ಶುಲ್ಕ ಭರಿಸಬೇಕು.

ಅದೇ ಮಹಿಳಾ ಪ್ರಯಾಣಿಕರು 100 ಗ್ರಾಂ ಚಿನ್ನಕ್ಕೆ ಶೇ. 3ರಷ್ಟು, 100 ಗ್ರಾಂಗಿಂತ ಹೆಚ್ಚು ತಂದರೆ ಶೇ. 6ಷ್ಟು ಶುಲ್ಕ ಭರಿಸಬೇಕು. 200 ಗ್ರಾಂಗಿಂತ ಹೆಚ್ಚು ಚಿನ್ನ ತಂದರೆ ಶೇ. 10ರಷ್ಟು ಶುಲ್ಕ ಪಾವತಿಸಬೇಕು. ಅಷ್ಟೇ ಅಲ್ಲದೆ, ಚಿನ್ನಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳು, ಖರೀದಿ ಹಾಗೂ ಪರಿಶುದ್ಧತೆ ದಾಖಲೆಗಳನ್ನು ಕೂಡ ಕಸ್ಟಮ್ಸ್‌ಗೆ ನೀಡಬೇಕು. ಹೀಗೆ 1 ಕೆಜಿವರೆಗೆ ಚಿನ್ನವನ್ನು ಭಾರತಕ್ಕೆ ಬರುವಾಗ ತರಬಹುದು. ಆದರೆ ಮೇಲೆ ಹೇಳಿದಂತೆ ಅವುಗಳಿಗೆ ಶುಲ್ಕವನ್ನು ಭರಿಸಬೇಕಾಗುತ್ತದೆ.

10 ಕೆಜಿವರೆಗೆ ಆಮದಿಗೆ ಇದೆ ಅವಕಾಶ. ಆದರೆ.
ಅನಿವಾಸಿ ಭಾರತೀಯರಿಗೆ ಕನಿಷ್ಠ ಆರು ತಿಂಗಳ ಕಾಲ ವಿದೇಶದಲ್ಲಿ ವಾಸಿಸಿದ್ದರೆ ಪ್ರತಿ ಆರು ತಿಂಗಳಿಗೊಮ್ಮೆ ಭಾರತಕ್ಕೆ 10 ಕೆಜಿ ಚಿನ್ನವನ್ನು ಆಮದು ಮಾಡಿಕೊಳ್ಳಲು ಅನುಮತಿ ಇದೆ. ಆದರೆ, ಇದರ ಸ್ವಲ್ಪ ಭಾಗಕ್ಕೆ ಮಾತ್ರ ಆಮದು ಸುಂಕದಿಂದ ವಿನಾಯಿತಿ ಇದೆ. ಉಳಿದುದಕ್ಕೆ ಶುಲ್ಕ ತೆರಲೇಬೇಕು. ಚಿನ್ನದ ಮೇಲಿನ ಆಮದಿಗೆ ಸದ್ಯ ಶೇ. 6ರಷ್ಟು ಆಮದು ಸುಂಕ ಇದೆ. ಇದು ಈ ಹಿಂದೆ ಶೇ. 15ರಷ್ಟು ಇತ್ತು. 2024ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬದಲಾವಣೆ ತಂದಿದ್ದರು.

ಇದಾದ ಬಳಿಕ ಚಿನ್ನ ಕಳ್ಳ ಸಾಗಣೆ ದೊಡ್ಡ ಮಟ್ಟಕ್ಕೆ ಇಳಿಕೆಯಾಗಿತ್ತು. ಕಾರಣ ವಿದೇಶಗಳಿಂದ ಚಿನ್ನ ತರುವುದು ತೀರಾ ಲಾಭದಾಯಕವಲ್ಲ ಎಂಬ ಕಾರಣಕ್ಕೆ; ಆದರೆ, ಇದರ ನಡುವೆಯೂ ರನ್ಯಾ ರಾವ್‌ ದೊಡ್ಡ ಮಟ್ಟದದಲ್ಲಿ ಚಿನ್ನವನ್ನು ತಂದು ಸಿಕ್ಕಿಬಿದ್ದಿದ್ದಾರೆ. ಇದರ ಹಿಂದಿನ ಉದ್ದೇಶ ಏನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content Copyright protected !!
ಉದ್ಯೋಗಾವಕಾಶಗಳು Current Affairs Today Current Affairs