Current AffairsLatest Updates

Obesity : ಸ್ಥೂಲಕಾಯತೆ ವಿರುದ್ಧ ಹೋರಾಡುವ ಸಮಿತಿಗೆ ವಿವಿಧ ಕ್ಷೇತ್ರಗಳ 10 ಗಣ್ಯರ ನೇಮಕ

Share With Friends

Obesity : ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಸಹಾಯ ಮಾಡುವ ಸಮಿತಿಗೆ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮ‌ರ್ ಅಬ್ದುಲ್ಲಾ, ಉದ್ಯಮಿ ಆನಂದ್ ಮಹೀಂದ್ರಾ ಮತ್ತು ನಟ ಮೋಹನ್ ಲಾಲ್, ಮಾಧವನ್ ಸೇರಿದಂತೆ ವಿವಿಧ ಕ್ಷೇತ್ರಗಳ 10 ಜನರನ್ನು ಪ್ರಧಾನಿ ನರೇಂದ್ರ ಮೋದಿ ನಾಮನಿರ್ದೇಶನ ಮಾಡಿದ್ದಾರೆ.

ಬೋಜ್‌ಪುರಿ ಗಾಯಕ-ನಟಿ ನಿರಾಹುವಾ, ಶೂಟಿಂಗ್ ಚಾಂಪಿಯನ್ ಮನು ಭಾಕರ್, ವೇಟ್ ಲಿಪ್ಟರ್ ಮೀರಾಬಾಯಿ ಚಾನು, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ನಟ ಆರ್ ಮಾಧವನ್, ಗಾಯಕಿ ಶ್ರೇಯಾ ಘೋಷಾಲ್ ಮತ್ತು ರಾಜ್ಯ ಸಭಾ ಸದಸ್ಯೆ ಸುಧಾ ಮೂರ್ತಿ ಅವರು ನಾಮನಿರ್ದೇಶನಗೊಂಡ ಇತರ ವ್ಯಕ್ತಿಗಳು.

ಸ್ಕೂಲಕಾಯತೆಯ ವಿರುದ್ಧದ ಹೋರಾಟವನ್ನು ಬಲಪಡಿಸಲು ಮತ್ತು ಆಹಾರದಲ್ಲಿ ಖಾದ್ಯ ತೈಲ ಸೇವನೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಲು ಈ ಸಮಿತಿ ರಚನೆ ಮಾಡಲಾಗಿದೆ.

ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಬಲವಾದ ಧ್ವನಿಯನ್ನು ನೀಡಿದ ಪಿಎಂ ಮೋದಿ ತಮ್ಮ ಮನ್ ಕಿ ಬಾತ್‌ಪ್ರಸಾರದಲ್ಲಿ ಆಹಾರದಲ್ಲಿ ಕಡಿಮೆ ಎಣ್ಣೆಯನ್ನು ಬಳಸುವಂತೆ ಮತ್ತು ಕಡಿಮೆ ಮಾಡುವ ಸವಾಲನ್ನು ರವಾನಿಸುವಂತೆ ಜನರನ್ನು ಒತ್ತಾಯಿಸಿದರು.

author avatar
spardhatimes

Leave a Reply

Your email address will not be published. Required fields are marked *

error: Content Copyright protected !!