Pilot License : ಪೈಲಟ್ಗಳಿಗೆ ಇ-ಪರ್ಸನಲ್ ಲೈಸೆನ್ಸ್ ವ್ಯವಸ್ಥೆ ಅಳವಡಿಸಿದ 2ನೇ ರಾಷ್ಟ್ರವಾದ ಭಾರತ
Electronic Pilot License
eಭಾರತದ ನಾಗರಿಕ ವಿಮಾನಯಾನ ಕ್ಷೇತ್ರ ಮತ್ತೊಂದು ತಂತ್ರಜ್ಞಾನ ಆಧಾರಿತ ಹೆಜ್ಜೆ ಇಟ್ಟಿದೆ! ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಪೈಲಟ್ಗಳಿಗೆ ಇಲೆಕ್ಟ್ರಾನಿಕ್ ಪರ್ಸನಲ್ ಲೈಸೆನ್ಸ್ (EPL) Electronic Pilot License India ಅನ್ನು ಲೋಕಾರ್ಪಣೆ ಮಾಡಿದ್ದು, ಇದು ಭಾರತವನ್ನು ಚೀನಾದ ನಂತರ ಈ ವ್ಯವಸ್ಥೆ ಅಳವಡಿಸಿದ ಎರಡನೇ ರಾಷ್ಟ್ರವನ್ನಾಗಿಸುತ್ತದೆ. ಈ ಹೊಸ ವ್ಯವಸ್ಥೆಯು ಪೈಲಟ್ಗಳ ಲೈಸೆನ್ಸ್ ನಿರ್ವಹಣೆಯ ಪಾರದರ್ಶಕತೆ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ. ನವೀನ ತಂತ್ರಜ್ಞಾನಗಳಿಂದ ಪ್ರೇರಿತ ಈ ಯೋಜನೆಯು ಭಾರತೀಯ ವಿಮಾನಯಾನ ಕ್ಷೇತ್ರವನ್ನು ಡಿಜಿಟಲೀಕರಣದ ಹೊಸ ಮಟ್ಟಕ್ಕೆ ಕೊಂಡೊಯ್ಯಲಿದೆ.
NOTES :
*EPLನ (Electronic Pilot License India) ಮಹತ್ವ ಮತ್ತು ಪ್ರಯೋಜನಗಳು
EPL ಪರಿಚಯಿಸುವ ಮೂಲಕ ಡಿಜಿಟಲ್ ವಲಯದಲ್ಲಿ ಭಾರತದ ದೊಡ್ಡ ಹೆಜ್ಜೆ ಇಡಲಾಗಿದೆ. ನಾಗರಿಕ ವಿಮಾನಯಾನ ಸಚಿವರು EPL ಅನ್ನು “ಏವಿಯೇಷನ್ ಕ್ಷೇತ್ರದಲ್ಲಿ ಮಾತ್ರವಲ್ಲ, ಇತರೆ ವಿಭಾಗಗಳಲ್ಲಿಯೂ ಡಿಜಿಟಲೀಕರಣಕ್ಕೆ ಉತ್ತೇಜನ ನೀಡುವ ಮಹತ್ವದ ನಿರ್ಧಾರ” ಇದಾಗಿದೆ.
*ಈಗ ಲೈಸೆನ್ಸ್ ನವೀಕರಣ, ಪರಿಶೀಲನೆ, ಮತ್ತು ಅನುಮೋದನೆಗಳು ಡಿಜಿಟಲ್ ಆಗಿ ಸುಲಭವಾಗಿ ನಡೆಯಲಿವೆ.
*ಇನ್ನು ಮುಂದೆ ಶಾರೀರಿಕ ದಾಖಲೆಗಳ ಅವಶ್ಯಕತೆ ಕಡಿಮೆಯಾಗಲಿದೆ, ಇದು ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲಿದೆ.
*ಪೈಲಟ್ಗಳು ಕಾಗದದ ದಾಖಲಾತಿಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಿಟ್ಟು ಖಾಸಗಿ ಮತ್ತು ವೃತ್ತಿ ಜೀವನದ ಮೇಲೆ ಹೆಚ್ಚು ಗಮನ ಹರಿಸಬಹುದು.
*ಭಾರತವು ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ನಿಯಮಗಳಿಗೆ ಅನುಗುಣವಾಗಿ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
*ಭಾರತದ ನಾಗರಿಕ ವಿಮಾನಯಾನ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದು. ಕೇಂದ್ರ ಸರ್ಕಾರದ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ 50 ಹೊಸ ವಿಮಾನ ನಿಲ್ದಾಣಗಳು, ಮತ್ತು ಮುಂದಿನ ದಶಕದಲ್ಲಿ 120 ಹೊಸ ವಿಮಾನ ನಿಲ್ದಾಣದ ಸ್ಥಳಗಳು (ಡೆಸ್ಟಿನೇಷನ್) ಅಭಿವೃದ್ಧಿಯಾಗಲಿವೆ.
*ಈ ಬೆಳವಣಿಗೆಯು ದೇಶದ ಆರ್ಥಿಕ ಪ್ರಗತಿಗೆ ಮಹತ್ತರ ಸಹಾಯ ಮಾಡಲಿದ್ದು, ದೇಶೀಯ ಹಾಗೂ ಅಂತರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸಲಿದೆ. ಅಂದಾಜು 20,000 ಹೊಸ ಪೈಲಟ್ಗಳ ಅವಶ್ಯಕತೆ ಇರಲಿದ್ದು, ಹೊಸ ಪೈಲಟ್ಗಳಿಗೆ EPL ಮಾದರಿಯ ಸುಲಭ ವ್ಯವಸ್ಥೆಗಳು ಅಗತ್ಯವಿದೆ.
*2025ರಲ್ಲಿ ಹೊಸ ಪೈಲಟ್ಗಳ ಆವಶ್ಯಕತೆ ಹೆಚ್ಚಿದಂತೆ, ಈ ವ್ಯವಸ್ಥೆ ಲಾಭದಾಯಕವಾಗಿ ಪರಿಣಮಿಸುವುದು ಖಚಿತ