GKGK QuestionsMultiple Choice Questions SeriesSpardha Times

➤ ಬಹುಆಯ್ಕೆಯ ಪ್ರಶ್ನೆಗಳ ಸರಣಿ – 5

Share With Friends

( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)

1. ಬಂಗಾಳದ ಖಾಯಂ ಭೂ ಕಂದಾಯ ಪದ್ಧತಿಯಿಂದ ಯಾರಿಗೆ ಹೆಚ್ಚು ಪ್ರಯೋಜನವಾಯಿತು?
ಎ. ರೈತರು              ಬಿ. ಸರ್ಕಾರ
ಸಿ. ಮಧ್ಯವರ್ತಿಗಳು    ಡಿ. ಜಮಿನ್ದಾರರು

2. ಯಾವ ಗವರ್ನರ್ ಜನರಲ್ ಕಾಲದಲ್ಲಿ ಪತ್ರಿಕೆಗಳ ಸೆನ್ಸಾರ್ ಪ್ರಾರಂಭವಾಯಿತು?
ಎ. ಲಾರ್ಡ್ ಬೆಂಟಿಂಕ್        ಬಿ. ಲಾರ್ಡ್ ಡಾಲಹೌಸಿ
ಸಿ. ಲಾರ್ಡ್ ವೆಲ್ಲೆಸ್ಲಿ            ಡಿ. ಲಾರ್ಡ್ ಮಾಯೋ

3. ಈ ಕೆಳಗಿನ ಯಾರ ಕಾಲವನ್ನು ಬ್ರಾಹ್ಮಣರ ಪುನರುಸ್ಥಾನದ ಕಾಲ ಎನ್ನಲಾಗುತ್ತದೆ?
ಎ. ಗುಪ್ತರ ಕಾಲ             ಬಿ. ಮೌರ್ಯರ ಕಾಲ
ಸಿ. ನಂದರ ಕಾಲ          ಡಿ. ಗಂಗರ ಕಾಲ

4. ಹಲವಾರು ರೀತಿಯ ಕಂಬಗಳುಳ್ಳ ಪಂಚ ಮಹಲನ್ನು ಅಕ್ಬರನು ಎಲ್ಲಿ ಕಟ್ಟಿಸಿದನು?
ಎ. ಆಗ್ರಾ                ಬಿ. ಅಜ್ಮೀರ್
ಸಿ. ಫತೇಪುರ್ ಸಿಕ್ರಿ  ಡಿ. ದೆಹಲಿ

5. ‘ ಪೃಥ್ವಿರಾಜ್ ರಾಸೋ’ದ ಕರ್ತೃ ಯಾರು?
ಎ. ಚಾಂದ್ ಬರ್ದಾಯ್     ಬಿ. ಕಾಳಿದಾಸ
ಸಿ. ಅಶ್ವಘೋಷ              ಡಿ. ಅಕ್ಬರ್

6. ಕಾಂಚೀಪುರಂ ಯಾವ ರಾಜರ ರಾಜಧಾನಿಯಾಗಿತ್ತು?
ಎ. ಪಲ್ಲವರು            ಬಿ. ಚೋಳರು
ಸಿ. ಪಾಂಡ್ಯರು         ಡಿ. ಗಂಗರು

7. ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಯಾರು ರದ್ಧುಗೊಳಿಸಿದರು?
ಎ. ಲಾರ್ಡ್ ಮಾಯೋ          ಬಿ. ಲಾರ್ಡ್ ಡಾಲ್‍ಹೌಸಿ
ಸಿ. ಲಾರ್ಡ್ ಕರ್ಜನ್           ಡಿ. ವಾರೆನ್ ಹೇಸ್ಟಿಂಗ್ಸ್

8. ಚಿತ್ತೂರಿನ ಕೀರ್ತಿಸ್ಥಂಭವನ್ನು ಯಾರು ಕಟ್ಟಿಸಿದರು?
ಎ. ರಾಣಾಪ್ರತಾಪ       ಬಿ. ರಣಕುಂಭ
ಸಿ. ಕೃಷ್ಣದೇವರಾಯ    ಡಿ. ರಣಸಂಗ

9. ಅಮೀರ್ ಖುಸ್ರೋನು ಯಾವ ಭಾಷೆಯಲ್ಲಿ ತನ್ನ ಕೃತಿಗಳನ್ನು ರಚಿಸಿದನು?
ಎ. ಉರ್ದು            ಬಿ. ಹಿಂದಿ
ಸಿ. ಪರ್ಷಿಯನ್       ಡಿ. ಅರೇಬಿಕ್

10. ವೇದಗಳ ಕಾಲದಲ್ಲಿ ಕುಟುಂಬಗಳ ಗುಂಪನ್ನು ಏನೆಂದು ಕರೆಯುತ್ತಿದ್ದರು?
ಎ. ಜನ            ಬಿ. ಗ್ರಾಮ
ಸಿ. ಗೋತ್ರ       ಡಿ. ಇವು ಯಾವುದು ಅಲ್ಲ

11. ಸರ್ಕಾರದ ವೆಚ್ಚದಲ್ಲಿ ಹಜ್ ಯಾತ್ರೆಯನ್ನು ಏರ್ಪಡಿಸುತ್ತಿದ್ದ ಮೊದಲ ಭಾರತೀಯ ದೊರೆ ಯಾರು?
ಎ. ಅಕ್ಬರ್          ಬಿ. ಜಹಾಂಗೀರ್
ಸಿ. ಬಾಬರ್       ಡಿ. ಹುಮಾಯೂನ್

12. ‘ಅಷ್ಡದ್ಯಾಯಿ’ ಯ ಕರ್ತೃ ಯಾರು?
ಎ. ಪಾಣಿನಿ           ಬಿ. ವಿಷ್ಣು ಶರ್ಮ
ಸಿ. ಪತಾಂಜಲಿ      ಡಿ. ಕೃಷ್ಣದೇವರಾಯ

13. ಶಿವಾಜಿಯು ಯಾವ ಮೊಗಲ್ ದೊರೆಯ ಕಾಲದಲ್ಲಿ ಮರಾಠ ಸಂಸ್ಥಾನವನ್ನು ಸ್ಥಾಪಿಸಿದನು?
ಎ. ಬಾಬರ್            ಬಿ. ಅಕ್ಬರ್
ಸಿ. ಶಹಜಹಾನ್     ಡಿ. ಔರಂಗಜೇಬ್

14. ಔರಂಗಜೇಬ್‍ನ ಗೋರಿ ಎಲ್ಲಿದೆ?
ಎ. ಅಜ್ಮೀರ್            ಬಿ. ದೌಲತಾಬಾದ್
ಸಿ. ಆಗ್ರಾ             ಡಿ. ದೆಹಲಿ

15. ಭಾರತದಲ್ಲಿ ಮೊದಲ ಕ್ರಮಬದ್ದ ಜನಗಣತಿ ಯಾವಾಗ ನಡೆಯಿತು?
ಎ. 1871          ಬಿ. 1881
ಸಿ. 1901         ಡಿ. 1891

16. ಗೌತಮ ಬುದ್ದನು ಯಾವ ಸಂತಂತಿಗೆ ಸೇರಿದವನು?
ಎ. ಕುಶಾನರು              ಬಿ. ಶಾಕ್ಯರು
ಸಿ. ಅರ್ಜುನಯನರು     ಡಿ. ಮಂಡೇಯರು

17. ತಂಜಾವೂರಿನ ಶಿವ ದೇವಾಲಯವನ್ನು ನಿರ್ಮಿಸಿದವರು ಯಾರು?
ಎ. ರಾಷ್ಟ್ರಕೂಟರು        ಬಿ. ಪಲ್ಲವರು
ಸಿ. ಚೋಳರು            ಡಿ. ಪಾಂಡ್ಯರು

18. ಅಮೃತಸರವನ್ನು ನಿರ್ಮಿಸಿದ ಸಿಖ್‍ಗುರು ಯಾರು?
ಎ. ಗುರು ಹರಿಕೃಷ್ಣ
ಬಿ. ಗುರು ರಾಮದಾಸ್
ಸಿ. ಗುರು ತೇಗ ಬಹದೂರ್
ಡಿ. ಇವರು ಯಾರು ಅಲ್ಲ

19. ದುಂಡು ಮೇಜಿನ ಸಮ್ಮೇಳನಗಳು ಯಾವಾಗ ನಡೆದವು?
ಎ. 1930,1931, ಮತ್ತು 1932
ಬಿ. 1934,1935 ಮತ್ತು 1936
ಸಿ. 1932,1933, ಮತ್ತು 1934
ಡಿ. 1932, 1934, ಮತ್ತು 1936

20. ‘ ಅಭಿನವ ಭಾರತ’ ಎಂಬ ರಹಸ್ಯ ಕ್ರಾಂತಿಕಾರಿ ಸಂಘಟನೆಯನ್ನು ಯಾರು ಪ್ರಾರಂಭಿಸಿದ್ದರು?
ಎ. ಭಗತ್‍ಸಿಂಗ್
ಬಿ. ಲಾಲ ಲಜಪತ್‍ರಾಯ್
ಸಿ. ವಿ.ಡಿ. ಸಾವರ್ಕ್‍ರ್
ಡಿ. ಚಂದ್ರಶೇಖರ ಅಜಾದ್

21. ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಭಾರತ ರಾಷ್ಟ್ರೀಯ ಕಾಂಗೆಸ್ಸನ್ನು ವಿಸರ್ಜಿಸುವಂತೆ ಯಾರು ಸಲಹೆ ನೀಡಿದರು?
ಎ. ಮಹಾತ್ಮಾಗಾಂಧಿ
ಬಿ. ಡಾ. ಬಿ. ಆರ್. ಅಂಬೇಡ್ಕರ್
ಸಿ. ಜವಾಹರ್‍ಲಾಲ ನೆಹರು
ಡಿ. ಡಾ. ರಾಜೇಂದ್ರ ಪ್ರಸಾದ್

22. ‘ ಸಾರೆ ಜಹಾಂಸೆ ಅಚ್ಚಾ’ ಈ ಖ್ಯಾತ ಗೀತೆಯ ರಚನೆಕಾರರು ಯಾರು?
ಎ. ರವಿಂದ್ರನಾಥ ಟಾಗೋರ್
ಬಿ. ಮಹಮ್ಮದ್ ಇಕ್ಬಾಲ್
ಸಿ. ಬಂಕಿಂಚಂದ್ರ ಚಟರ್ಜಿ
ಡಿ. ಸರೋಜಿನಿ ನಾಯ್ಡು

23. ಈ ಕೆಳಗಿನ ಯಾರು ಉಗ್ರವಾದಿಯಾಗಿದ್ದು ನಂತರ ಆಧ್ಯಾತ್ಮಿಕ ನಾಯಕರಾಗಿ ಬದಲಾದರು?
ಎ. ಸ್ವಾಮಿ ವಿವೇಕಾನಂದ
ಬಿ. ವಿನೋಭಾ ಬಾವೆ
ಸಿ. ಅರಬಿಂದೋ ಘೋಷ್
ಡಿ. ಬಾಲಗಂಗಾಧರ ತಿಲಕ

24. ‘ ಯಂಗ್ ಇಂಡಿಯಾ’ ಪತ್ರಿಕೆಯು ಯಾರ ಸಂಪಾದಕತ್ವದಲ್ಲಿ ಹೊರ ಬರುತ್ತಿತ್ತು?
ಎ. ಮಹಾತ್ಮಾಗಾಂಧಿ
ಬಿ. ಮೋತಿಲಾಲ ನೆಹರು
ಸಿ. ಸರೋಜಿನಿ ನಾಯ್ಡು
ಡಿ. ಸುಭಾಶಚಂದ್ರ ಬೋಸ್

25. ಸ್ವದೇಶಿ ಚಳುವಳಿಯು ಯಾವಾಗ ನಡೆಯಿತು?
ಎ. 1904        ಬಿ. 1906
ಸಿ. 1908        ಡಿ. 1910

# ಉತ್ತರಗಳು:-
1.  ಡಿ. ಜಮಿನ್ದಾರರು
2.  ಸಿ. ಲಾರ್ಡ್ ವೆಲ್ಲೆಸ್ಲಿ
3. ಎ. ಗುಪ್ತರ ಕಾಲ
4.ಸಿ. ಫತೇಪುರ್ ಸಿಕ್ರಿ
5.ಎ. ಚಾಂದ್ ಬರ್ದಾಯ್
6.ಎ. ಪಲ್ಲವರು
7.ಡಿ. ವಾರೆನ್ ಹೇಸ್ಟಿಂಗ್ಸ್
8.ಎ. ರಾಣಾಪ್ರತಾಪ
9.ಸಿ. ಪರ್ಷಿಯನ್
10.ಬಿ. ಗ್ರಾಮ
11.ಎ. ಅಕ್ಬರ್
12.ಎ. ಪಾಣಿನಿ
13.ಡಿ. ಔರಂಗಜೇಬ್
14.ಬಿ. ದೌಲತಾಬಾದ್
15.ಬಿ. 1881
16.ಬಿ. ಶಾಕ್ಯರು
17.ಸಿ. ಚೋಳರು
18.ಬಿ. ಗುರು ರಾಮದಾಸ್
19.ಎ. 1930,1931, ಮತ್ತು 1932
20.ಸಿ. ವಿ.ಡಿ. ಸಾವರ್ಕ್‍ರ್
21.ಎ. ಮಹಾತ್ಮಾಗಾಂಧಿ
22.ಬಿ. ಮಹಮ್ಮದ್ ಇಕ್ಬಾಲ್
23.ಸಿ. ಅರಬಿಂದೋ ಘೋಷ್
24.ಎ. ಮಹಾತ್ಮಾಗಾಂಧಿ
25.ಬಿ. 1906

Leave a Reply

Your email address will not be published. Required fields are marked *

error: Content Copyright protected !!