ಜುಲೈ 24 : ಆದಾಯ ತೆರಿಗೆ ದಿನ (Income Tax Day)
Income Tax Day : ಆದಾಯ ತೆರಿಗೆ ಇಲಾಖೆಯು ಪ್ರತಿ ವರ್ಷ ಜುಲೈ 24 ಅನ್ನು ‘ಆದಾಯ ತೆರಿಗೆ ದಿನ’ (Income Tax Day) ಎಂದು ಆಚರಿಸುತ್ತದೆ. ಭಾರತದಲ್ಲಿ ಆದಾಯ ತೆರಿಗೆಯ ನಿಬಂಧನೆಗಳ ಅನುಷ್ಠಾನಗೊಂಡ ದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ 164ನೇ ಆದಾಯ ತೆರಿಗೆ ದಿನವನ್ನು ಆಚರಿಸಲಾಗುತ್ತಿದೆ.
ಆದಾಯ ತೆರಿಗೆ ದಿನದ ಇತಿಹಾಸವೇನು?
24 ಜುಲೈ 1860 ರಂದು, ಸರ್ ಜೇಮ್ಸ್ ವಿಲ್ಸನ್ ಭಾರತದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಯನ್ನು ಪರಿಚಯಿಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್ ಸರ್ಕಾರವು ಅನುಭವಿಸಿದ ನಷ್ಟವನ್ನು ಸರಿದೂಗಿಸಲು 1857 ರಲ್ಲಿ ಜೇಮ್ಸ್ ವಿಲ್ಸನ್ ಭಾರತದಲ್ಲಿ ಈ ತೆರಿಗೆಯನ್ನು ಜಾರಿಗೆ ತಂದರು. ಆದಾಯ ತೆರಿಗೆ ದಿನವನ್ನು ದೇಶದಲ್ಲಿ ಮೊದಲ ಬಾರಿಗೆ 24 ಜುಲೈ 2020 ರಂದು ಆಚರಿಸಲಾಯಿತು ಮತ್ತು ಇದನ್ನು ಭಾರತದಲ್ಲಿ ಆದಾಯ ತೆರಿಗೆ ದಿನ ಎಂದು ಕರೆಯಲಾಗುತ್ತದೆ.
ಭಾರತದ ಆದಾಯ ತೆರಿಗೆಯ ಪ್ರಮುಖ ಮೈಲಿಗಲ್ಲುಗಳ ಕಾಲಗಣನೆ ಇಲ್ಲಿದೆ:
1860 – ಬ್ರಿಟಿಷ್ ಸರ್ಕಾರದಿಂದ ಆದಾಯ ತೆರಿಗೆ ಪರಿಚಯಿಸಲಾಯಿತು
1922 – ಆದಾಯ ತೆರಿಗೆ ಕಾಯ್ದೆ ಜಾರಿಗೆ ಬಂದಿತು, 1922
1961 – ಪ್ರಸ್ತುತ ಆದಾಯ ತೆರಿಗೆ ಕಾಯ್ದೆ, 1961 ಜಾರಿಗೆ ಬಂದಿತು
2009 – ರಲ್ಲಿ ಮೊದಲ ಆದಾಯ ತೆರಿಗೆ ದಿನವನ್ನು ಆಚರಿಸಲಾಯಿತು
2010 – CBDT ಅಧಿಕೃತವಾಗಿ ಆದಾಯ ತೆರಿಗೆ ದಿನವನ್ನು ಸಾಂಸ್ಥಿಕಗೊಳಿಸಿತು
2020 – ಮುಖರಹಿತ ಮೌಲ್ಯಮಾಪನಗಳು ಮತ್ತು ಮೇಲ್ಮನವಿಗಳನ್ನು ಪರಿಚಯಿಸಲಾಯಿತು
2023 – ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಡೀಫಾಲ್ಟ್ ಮಾಡಲಾಗಿದೆ
2025 – ಸರಳೀಕರಣಕ್ಕಾಗಿ ಹೊಸ ಆದಾಯ ತೆರಿಗೆ ಮಸೂದೆ ಪರಿಶೀಲನೆಯಲ್ಲಿದೆ
ಆದಾಯ ತೆರಿಗೆ ಇಲಾಖೆಯ ಬಗ್ಗೆ :
ಆದಾಯ ತೆರಿಗೆ ಇಲಾಖೆಯ ಪ್ರಧಾನ ಕಛೇರಿಯು ನವದೆಹಲಿಯಲ್ಲಿದೆ ಮತ್ತು ಇದು ಕೇಂದ್ರ ಸರ್ಕಾರದ ನೇರ ತೆರಿಗೆ ಸಂಗ್ರಹದ ಜವಾಬ್ದಾರಿಯ ಇಲಾಖೆಯಾಗಿದೆ. ಇದು ಕಂದಾಯ ಇಲಾಖೆ, ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಹೆಸರಿನ ಉನ್ನದ ಸಂಸ್ಥೆಯ ಮೂಲಕ ನಿರ್ವಹಿಸಲ್ಪಡುತ್ತದೆ.
ಆದಾಯ ತೆರಿಗೆ ಬಗ್ಗೆ ಕುತೂಹಲಕಾರಿ ಸಂಗತಿಗಳು :
ಭಾರತದಲ್ಲಿ ಆದಾಯ ತೆರಿಗೆ (Income Tax) ವ್ಯವಸ್ಥೆ ಜಾರಿಗೆ ಬಂದಿದ್ದು ಬ್ರಿಟಿಷರ ಆಳ್ವಿಕೆ ವೇಳೆಯಲ್ಲೇ. 1860ರಲ್ಲಿ ಜುಲೈ 24ರಂದು ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ವ್ಯವಸ್ಥೆ ಜಾರಿಗೆ ಬಂದಿತು. 1922ರಲ್ಲಿ ಬ್ರಿಟಿಷ್ ಸರ್ಕಾರ ಇನ್ಕಮ್ ಟ್ಯಾಕ್ಸ್ ಕಾಯ್ದೆ ಜಾರಿಗೆ ತಂದಿತು. ನೂರು ವರ್ಷಗಳ ನಂತರ ಭಾರತದಲ್ಲಿ ಆದಾಯ ತೆರಿಗೆಯ ಒಂದಷ್ಟು ರೂಪುರೇಖೆ ಬದಲಾಗಿದೆ, ಸುಧಾರಣೆಗಳಾಗಿವೆ.
ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಆದಾಯ ತೆರಿಗೆ ಸೇರುತ್ತದೆ. ವ್ಯಕ್ತಿಗಳ ಮೂಲವೇತನ, ಭತ್ಯ, ಬೋನಸ್ ಇತ್ಯಾದಿ ಆದಾಯ; ಮನೆ ಮತ್ತು ಆಸ್ತಿಯಿಂದ ಬರುವ ಬಾಡಿಗೆ ಮತ್ತಿತರ ಆದಾಯ; ಆಸ್ತಿ ಮಾರಾಟದಿಂದ ಬರುವ ಆದಾಯ; ಬ್ಯುಸಿನೆಸ್ಗಳಿಂದ ಬರುವ ಆದಾಯ; ಬಡ್ಡಿ, ಡಿವಿಡೆಂಡ್, ಲಾಟರಿ ಇತ್ಯಾದಿಯಿಂದ ಬರುವ ಆದಾಯ ಇವೆಲ್ಲಕ್ಕೂ ಸರ್ಕಾರ ತೆರಿಗೆ ವಿಧಿಸುತ್ತದೆ.
ಆದಾಯ ತೆರಿಗೆಯನ್ನು ಡೈರೆಕ್ಟ್ ಟ್ಯಾಕ್ಸ್ ಅಥವಾ ನೇರ ತೆರಿಗೆ ಎಂದು ಪರಿಗಣಿಸಲಾಗುತ್ತದೆ. ಕಳೆದ ಐದು ವರ್ಷದಲ್ಲಿ ಒಟ್ಟಾರೆ ಇನ್ಕಮ್ ಟ್ಯಾಕ್ಸ್ ಸಂಗ್ರಹ ಎರಡು ಪಟ್ಟು ಹೆಚ್ಚಾಗಿದೆ. 2020-21ರಲ್ಲಿ ಒಟ್ಟಾರೆ ನೇರ ತೆರಿಗೆ ಸಂಗ್ರಹ 12.31 ಲಕ್ಷ ಕೋಟಿ ರೂ ಆಗಿತ್ತು. 2024-25ರಲ್ಲಿ ಸಂಗ್ರಹವಾದ ನೇರ ತೆರಿಗೆ ಮೊತ್ತ 27.02 ಲಕ್ಷ ಕೋಟಿ ರೂ.
ಸರ್ಕಾರಕ್ಕೆ ಇಷ್ಟು ಆದಾಯ ತೆರಿಗೆ ಸಂಗ್ರಹ ಹೆಚ್ಚಲು ಅದು ಜಾರಿಗೆ ತಂದ ವಿವಿಧ ಕ್ರಮಗಳೇ ಕಾರಣ. ಪ್ಯಾನ್ ಮತ್ತು ಆಧಾರ್ ಜೋಡಣೆ, ಸಿಪಿಸಿ ಸ್ಥಾಪನೆ, ಟಿಡಿಎಸ್ ರೀಕಾನ್ಸಿಲಿಯೇಶನ್ ಅನಾಲಿಸಿಸ್ ಸಿಸ್ಟಂ, ಟ್ಯಾಕ್ಸ್ ಇನ್ಫಾರ್ಮೇಶನ್ ನೆಟ್ವರ್ಕ್, ಡಿಮ್ಯಾಂಡ್ ಫೆಸಿಲಿಟೇಶನ್ ಸೆಂಟರ್ ಇತ್ಯಾದಿ ಹಲವು ಕ್ರಮಗಳು ಆದಾಯ ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಸರಳವಾಗಿಸಿವೆ.
ಐಟಿಆರ್ ಸಲ್ಲಿಸುವ ಕೆಲಸ ಸರಳಗೊಳಿಸಿದ್ದು, ಇನ್ಕಮ್ ಟ್ಯಾಕ್ಸ್ ಬಗ್ಗೆ ಸರ್ಕಾರ ಸತತವಾಗಿ ಜಾಗೃತಿ ಮೂಡಿಸುತ್ತಿರುವುದು ಇವೆಲ್ಲವೂ ಟ್ಯಾಕ್ಸ್ ಸಂಗ್ರಹ ಹೆಚ್ಚಲು ಪಾತ್ರ ವಹಿಸಿರಬಹುದು.