ITBP Recruitment 2025 : ಐಟಿಬಿಪಿಯಲ್ಲಿ 133 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ
ITBP Recruitment 2025 for 133 Constable Posts ಕೇಂದ್ರ ಸಶಸ್ತ್ರ ಪಡೆಗಳ ಸಾಲಿನ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಪಡೆಯು ಜೆನೆರಲ್ ಡ್ಯೂಟಿ ಕಾನ್ಸ್‌ಟೇಬಲ್ ಪೋಸ್ಟ್‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 02-04-2025 ರ ರಾತ್ರಿ 11-59 ಗಂಟೆವರೆಗೆ.
ಹುದ್ದೆಗಳ ವಿವಿರ : ಕಾನ್ಸ್‌ಟೇಬಲ್ (ಜೆನೆರಲ್ ಡ್ಯೂಟಿ) (ಗ್ರೂಪ್ ಸಿ) (ನಾನ್ ಗೆಜೆಟೆಡ್, ನಾನ್ ಮಿನಿಸ್ಟೇರಿಯಲ್) (ಕ್ರೀಡಾ ಕೋಟಾದಡಿ ಹುದ್ದೆಗಳು) ಸೇರಿದಂತೆ ಒಟ್ಟು 133 ಹುದ್ದೆಗಳು.
ವೇತನ ಶ್ರೇಣಿ : ಲೆವೆಲ್ 3, Rs.21,700- 69,100.
ವಯೋಮಿತಿ :ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 23 ವರ್ಷ ವಯಸ್ಸು ಮೀರಿರಬಾರದು. ಜಾತಿವಾರು ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದ್ದು, ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಅರ್ಜಿ ಸಲ್ಲಿಸಲು ಇರಲಿದೆ.
ವಿದ್ಯಾರ್ಹತೆ : ಎಸ್ಎಸ್‌ಎಲ್‌ಸಿ ಪಾಸಾಗಿರಬೇಕು.
ಇತರೆ ಅರ್ಹತೆ : ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ, ಅಂತರ ವಿವಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ, ಮೆಡಲ್ ಪಡೆದು ಸಾಧನೆ ಮಾಡಿದವರಾಗಿರಬೇಕು. ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ಶೂಟಿಂಗ್, ಬಾಕ್ಸಿಂಗ್, ತೂಕ ಎತ್ತುವುದು, ಟ್ಯಾಕ್‌ವಾಂಡೊ, ಆರ್ಚರಿ, ಜಿಮ್ನಾಸ್ಟಿಕ್ಸ್, ಕಬ್ಬಡ್ಡಿ, ಹಾಕಿ, ಫೂಟ್‌ಬಾಲ್, ವಾಲಿಬಾಲ್, ಜುಡೊ, ಕುಸ್ತಿ, ಕೋಕೋ, ಯೋಗಾಸನ, ಬಾಸ್ಕೆಟ್ ಬಾಲ್, ಇತರೆ ಕೆಲವು ಕ್ರೀಡೆಗಳಲ್ಲಿ ಈ ಸಾಧನೆ ಮಾಡಿರಬೇಕು. ಈ ಕ್ರೀಡಾ ಸಾಧನೆಗಳನ್ನು 03-04-2023 ರಿಂದ 02-04-2025 ರ ನಡುವೆ ಮಾಡಿರಬೇಕು.
ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.100. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.100.ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.100.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ, ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬಹುದು.
ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ, ದೈಹಿಕ ಸಹಿಷ್ಣುತಾ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ, ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೇಲಿನ ಅರ್ಹತೆಗಳನ್ನು ಹೊಂದಿರುವ ಹಾಗೂ ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ https://recruitment.itbpolice.nic.in ಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಧಿಸೂಚನೆ : Click here
Read More : Current Recruitments : ಪ್ರಸ್ತುತ ನೇಮಕಾತಿಗಳು