ScienceGKLatest Updates

Biology Kingdoms : ಜೀವಿಗಳ ಪ್ರಮುಖ ಸಾಮ್ರಾಜ್ಯಗಳು

Share With Friends

Biology Kingdoms of Living Things Classification

1.ಮೊನಿರಾ ಸಾಮ್ರಾಜ್ಯ
ಇದು ಪ್ರೋಕ್ಯಾರಿಯೋಟ್ ಜೀವಿಗಳನ್ನು ಒಳಗೊಂಡಿದೆ.
ಉದಾ- ನೀಲಿ ಶೈವಲ ಮತ್ತು ಬ್ಯಾಕ್ಟಿರೀಯಾಗಳು

2.ಪ್ರೊಟಿಸ್ಟ ಸಾಮ್ರಾಜ್ಯ
ಉದಾ – ಏಕಕೋಶ ಶೈವಲಗಳು, ಪ್ರೋಟೋಜೋವಾ(ಏಕಕೋಶ ಜೀವಿಗಳು , ಆದಿಜೀವಿಗಳು)

3.ಮೈಕೋಟಾ ಸಾಮ್ರಾಜ್ಯ
ಇದು ಶೀಲಿಂಧ್ರಗಳ ಸಾಮ್ರಾಜ್ಯವಾಗಿದೆ. ಉದಾ- ಯೀಸ್ಟ್, ಅಣಬೆ, ನಾಯಿಕೊಡೆ

4.ಸಸ್ಯಸಾಮ್ರಾಜ್ಯ
ಇದು ಎಲ್ಲ ಹಸಿರು ಸಸ್ಯಗಳನ್ನು ಒಳಗೊಂಡಿದೆ. ಪತ್ರಹರಿತ್ತನ್ನು ಹೊಂದಿದ್ದು, ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಜೀವಿಗಳನ್ನು ಈ ಸಾಮ್ರಾಜ್ಯ ಒಳಗೊಂಡಿದೆ. ವಾಹಕ ಅಂಗಾಂಶ ಇರುವಿಕೆಯ ಆಧಾರದ ಮೇಲೆ ಇದನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ.

1.ವಾಹಕ ಅಂಗಾಂಶ ರಹಿತ ಸಸ್ಯಗಳು
✦ಬಹುಕೋಶೀಯ ಶೈವಲಗಳು( ಕೆಂಪು,ಕಂದು, ಹಸಿರು ಶೈವಲಗಳು)
✦ಹಾವಸೆ ಸಸ್ಯಗಳು
2.ವಾಹಕ ಅಂಗಾಂಶ ಸಹಿತ ಸಸ್ಯಗಳು
ಜರಿಗಿಡಗಳು
✦ಅನಾವೃತ ಬೀಜ ಸಸ್ಯಗಳು
✦ಆವೃತ ಬೀಜಸಸ್ಯಗಳು

5.ಪ್ರಾಣಿ ಸಾಮ್ರಾಜ್ಯ
ಇವು ಎರಡು ಪ್ರಮುಖ ಗುಂಪುಗಳನ್ನು ಒಳಗೊಂಡಿದೆ.
1.ಕಶೇರುಕಗಳು -ಮೀನುಗಳು, ಉಭಯವಾಸಿಗಳು, ಸರೀಸೃಪಗಳು, ಪಕ್ಷಿಗಳು, ಸ್ತನಿಗಳು
2.ಅಕಶೇರುಕಗಳು- ಸ್ಪಂಜು ಪ್ರಾಣಿಗಳು, ಕುಟುಕು ಕಣವಂತಗಳು, ಚಪ್ಪಟೆ ಹುಳುಗಳು, ವಲಯ ವಂತಗಳು, ಸಂಧಿಪದಿಗಳು, ಮೃದ್ವಂಗಿಗಳು, ಕಂಟಕ ಚರ್ಮಿಗಳು

✦‘ವೈರಸ್’ಗಳು ಜೀವಿಗಳ ಐದು ಸಾಮ್ರಾಜ್ಯಗಳಿಗೆ ಸೇರದ ಜೀವಿಗಳಾಗಿವೆ.
ಒಂದು ವಸ್ತುವನ್ನು ಸಜೀವಿ ಎಂದು ಕರೆಯಬೇಕಾದರೆ ಅದರ ಅತ್ಯಂತ ಪ್ರಮುಖ ಲಕ್ಷಣವೆಂದರೆ ಜೀವಕೋಶವನ್ನು ಹೊಂದಿರುವುದು. ಆದರೆ ವೈರಸ್‍ನಲ್ಲಿ ಜೀವಕೋಶವಿಲ್ಲ. ಇದು ಕೇವಲ ಆರ್‍ಎನ್‍ಎ ಎಂಬ ನ್ಯೂಕ್ಲಿಕ್ ಆಮ್ಲವನ್ನು ಹೊಂದಿದ್ದು, ಪ್ರೋಟಿನ್ ಕವಚದಿಂದ ಆವೃತ್ತವಾಗಿದೆ. ಇವುಗಳು ಜೀವಿಗಳ ಹೊರಗಡೆ ಸಂತಾನೋತ್ಪತ್ತಿ ಮಾಡಲಾರವು. ಆದರೆ ಪೋಷಕ ಜೀವಿಗಳ ಜೀವಕೋಶಗಳ ಒಳಗಡೆ ಜೈವಿಕ ಲಕ್ಷಣಗಳನ್ನು ತೋರ್ಪಡಿಸುವುವು. ಇವು ಅಂತರ ಕೋಶೀಯ ಅರಾವಂಬಿಗಳು ಅದಕ್ಕಾಗಿ ಇವುಗಳನ್ನು ಜೀವಿ ಮತ್ತು ನಿರ್ಜೀವಿಗಳ ನಡುವಿನ ಕೊಂಡಿ ಎಂದು ಕರೆಯಲಾಗುತ್ತದೆ.

Leave a Reply

Your email address will not be published. Required fields are marked *

error: Content Copyright protected !!
ಉದ್ಯೋಗಾವಕಾಶಗಳು Current Affairs Today Current Affairs