GKIndian ConstitutionMultiple Choice Questions SeriesQUESTION BANKQuizSpardha Times

ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 3

Share With Friends

1. ಭಾರತದಲ್ಲಿ ಪ್ರಜಾಸತ್ತೆಯು ಯಾವ ಅಂಶದ ಮೇಲೆ ನಿಂತಿದೆ..?
ಎ. ಬರಹ ರೂಪದಲ್ಲಿರುವ ಸಂವಿಧಾನ
ಬಿ. ಮೂಲಭೂತ ಹಕ್ಕುಗಳು
ಸಿ. ಜನರಿಗಿರುವ ಸರ್ಕಾರವನ್ನು ಆಯ್ಕೆ ಮಾಡುವ ಮತ್ತು ಬದಲಾಯಿಸುವ ಹಕ್ಕು
ಡಿ. ರಾಜ್ಯ ನೀತಿಯ ನಿರ್ದೇಶನತ್ಮಕ ಸೂತ್ರಗಳು

2. ಮೂಲಭೂತ ಹಕ್ಕುಗಳನ್ನು ಸಂವಿಧಾನದ ಯಾವ ವಿಧಿಗಳು ಒಳಗೊಂಡಿವೆ..
ಎ. 40 ರಿಂದ 50 ನೇ ವಿಧಿಗಳು
ಬಿ. 1 ರಿಂದ 10 ನೇ ವಿಧಿಗಳು
ಸಿ. 50 ರಿಂದ 60 ವಿಧಿಗಳು
ಡಿ. 12 ರಿಂದ 35 ರವರೆಗಿನ ವಿಧಿಗಳು

3. ಕಲ್ಯಾಣ ರಾಜ್ಯದ ಕಲ್ಪನೆಯನ್ನು ಸಂವಿಧಾನದ ಯಾವ ಭಾಗವು ಒಳಗೊಂಡಿದೆ..?
ಎ. ಸಂವಿಧಾನದ ಪೀಠಿಕೆ
ಬಿ. ಮೂಲಭೂತ ಹಕ್ಕುಗಳು
ಸಿ. ರಾಜ್ಯನೀತಿಯ ನಿರ್ದೇಶನಾತ್ಮಕ ಸೂತ್ರಗಳು
ಡಿ. ಸಂವಿಧಾನದ 4 ನೇ ಷೆಡ್ಯೂಲ್

4. ‘ ಶೂನ್ಯ ಅವಧಿ’ ಎಂದರೇನು..?
ಎ. ವಿರೋಧ ಪಕ್ಷದವರ ಸೂಚನೆಗಳನ್ನು ಪರಿಗಣಿಸುವ ಅವಧಿ
ಬಿ. ಅತೀ ಪ್ರಾಮುಖ್ಯ ವಿಷಯಗಳನ್ನು ಕಲಾಪದಲ್ಲಿ ಮಂಡಿಸುವ ಅವಧಿ
ಸಿ. ಬೆಳಗಿನ ಮತ್ತು ಮಧ್ಯಾಹ್ನದ ಕಲಾಪಗಳ ನಡುವಿನ ಅವಧಿ
ಡಿ. ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸುವ ಅವಧಿ

5. ಭಾರತದ ಸಂವಿಧಾನದ ರಚನಾ ಸಮಿತಿಯು ಮುಂದೆ ಪೀಠಿಕೆಯನ್ನು ಸಂವಿಧಾ ನದಲ್ಲಿ ಸೇರಿಸುವಂತೆ ಸೂಚನೆಯನ್ನು ಮಂಡಿಸಿದವರು ಯಾರು..?
ಎ. ಜವಾಹರಲಾಲ್ ನೆಹರು
ಬಿ. ಡಾ. ಬಿ. ಆರ್. ಅಂಬೇಡ್ಕರ್
ಸಿ. ಬಿ. ಎನ್. ರಾವ್
ಡಿ. ಮಹಾತ್ಮಾ ಗಾಂಧೀಜಿ

6. ಭಾರತದ ಸಂವಿಧಾನದ ರಚನೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಅತೀ ಹೆಚ್ಚಿನ ಪ್ರಭಾವ ಬೀರಿದೆ..?
ಎ. ಗವರ್ನ್‍ಮೆಂಟ್ ಆಫ್ ಇಂಡಿಯಾ ಆಕ್ಟ್, 1935
ಬಿ. ಅಮೇರಿಕಾದ ಸಂವಿಧಾನ
ಸಿ. ಬ್ರಿಟಿಷ್ ಸಂವಿಧಾನ
ಡಿ. ವಿಶ್ವಸಂಸ್ಥೆಯ ಶಾಸನ

7. ಭಾರತದ ಸಂವಿಧಾನವು ಬ್ರಿಟಿಷ್ ಸಂವಿಧಾನದಿಂದ ಯಾವ ಅಂಶವನ್ನು ಅಳವಡಿಸಿಕೊಂಡಿದೆ..?
ಎ. ಸಂಸದೀಯ ಪದ್ಧತಿಯ ಸರ್ಕಾರ
ಬಿ. ಮೂಲಭೂತ ಹಕ್ಕುಗಳು
ಸಿ. ಕಾನೂನು ರಚನೆಯ ವಿಧಾನ
ಡಿ. ಮೇಲಿನ ಎಲ್ಲವೂ

8. ಶಕ್ತಿಯುತ ಕೇಂದ್ರ ಸರ್ಕಾರವುಳ್ಳ ಒಕ್ಕೂಟ ವ್ಯವಸ್ಥೆಯನ್ನು ಭಾರತ ಸಂವಿಧಾನವು ಯಾವ ದೇಶದ ಸಂವಿಧನದಿಂದ ಎರವಲು ಪಡೆಯಿತು..?
ಎ. ಯುಎಸ್‍ಎ
ಬಿ. ಕೆನಡಾ
ಸಿ. ಆಸ್ಟ್ರೇಲಿಯಾ
ಡಿ. ನ್ಯೂಜಿಲೆಂಡ್

9. ಭಾರತವು ‘ ರಾಜ್ಯ ನೀತಿಯ ನಿರ್ದೇಶಾತ್ಮಕ ತತ್ವಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆಯಿತು..?
ಎ. ಕೆನಡಾ ಸಂವಿಧಾನ
ಬಿ. ಐರ್ಲೆಂಡಿನ ಸಂವಿಧಾನ
ಸಿ. ದಕ್ಷಿಣ ಆಫ್ರಿಕಾ ಸಂವಿಧಾನ
ಡಿ. ಜರ್ಮನಿಯ ಸಂವಿಧಾನ

10. ಭಾರತದ ಪ್ರಧಾನಮಂತ್ರಿಯನ್ನು ಯಾರು ನೇಮಿಸುತ್ತಾರೆ..?
ಎ. ಲೋಕಸಭೆಯ ಸದಸ್ಯರು
ಬಿ. ರಾಜ್ಯಸಭೆಯ ಸದಸ್ಯರು
ಸಿ. ರಾಷ್ಟ್ರಪತಿಗಳು
ಡಿ. ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು

11. ಭಾರತದ ಪ್ರಧಾನಮಂತ್ರಿಯಾಗಿ ನೇಮಕಗೊಳ್ಳುವ ವ್ಯಕ್ತಿಗೆ ಆಗಿರಬೇಕಾದ ಕನಿಷ್ಠ ವಯಸ್ಸೆಷ್ಟು..?
ಎ. 21 ವರ್ಷಗಳು
ಬಿ. 22 ವರ್ಷಗಳು
ಸಿ. 25 ವರ್ಷಗಳು
ಡಿ. 35 ವರ್ಷಗಳು

12. ಲೋಕಸಭೆಯ ಸಭಾಧ್ಯಕ್ಷರನ್ನು ಯಾರು ಚುನಾಯಿಸುತ್ತಾರೆ..?
ಎ. ಲೋಕಸಭಾ ಸದಸ್ಯರು
ಬಿ. ರಾಜ್ಯಸಭಾ ಸದಸ್ಯರು
ಸಿ. ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು
ಡಿ. ಮೇಲಿನ ಯಾರೂ ಅಲ್ಲ

13. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧೀವೇಶನವನ್ನು ಯಾರು ಕರೆಯುತ್ತಾರೆ..?
ಎ. ಲೋಕಸಭಾಧ್ಯಕ್ಷರು
ಬಿ. ರಾಷ್ಟ್ರಪತಿಗಳು
ಸಿ. ರಾಜ್ಯಸಭೆಯ ಅಧ್ಯಕ್ಷರು
ಡಿ. ಸಂಸದೀಯ ವ್ಯವಹಾರಗಳ ಮಂತ್ರಿ

14. ಭಾರತದಲ್ಲಿ ಕಾರ್ಯಾಂಗವು ನೇರವಾ ಗಿ   ಯಾರಿಗೆ ಜವಾಬ್ದಾರವಾಗಿದೆ..?
ಎ. ರಾಷ್ಟ್ರಪತಿಗಳು
ಬಿ. ನ್ಯಾಯಾಂಗ
ಸಿ. ಪ್ರಜೆಗಳು
ಡಿ. ಶಾಸಕಾಂಗ

15. ಭಾರತದಲ್ಲಿ ಯಾವ ಹಕ್ಕು ಸಂವಿಧಾನಿಕ ಹಕ್ಕು ಮಾತ್ರವಾಗಿದ್ದು, ಅದು ಮೂಲಭೂತ ಹಕ್ಕು ಆಗಿಲ್ಲ..?
ಎ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
ಬಿ. ಆಸ್ತಿಯ ಹಕ್ಕು
ಸಿ. ಸಾಂಸ್ಕøತಿಕ ಮತ್ತು ಶೈಕ್ಷಣಿಕ ಹಕ್ಕು
ಡಿ. ಶೋಷಣೆಯ ವಿರುದ್ದದ ಹಕ್ಕು

16. ಪಂಚಾಯತ್‍ರಾಜ್ ವ್ಯವಸ್ಥೆಯ ಮೊದಲ ಕಾರ್ಯನಿರ್ವಾಹಕ ಹಂತ ಯಾವುದು..?
ಎ. ಗ್ರಾಮಸಭಾ
ಬಿ. ಗ್ರಾಮ ಪಂಚಾಯತ್
ಸಿ. ಮಂಡಲ್ ಪರಿಷತ್
ಡಿ. ಪಂಚಾಯತ್ ಸಮಿತಿ

17. ಭಾರತದ ಸಂವಿಧಾನವು ಖಾರ್ಯಾಚರಣೆಗೆ ಬಂದ ನಂತರ, ಯಾವಾಗ ಸಂಸತ್ತು ಅಸ್ಪøಶ್ಯತಾ ಕಾನೂನನ್ನು ರೂಪಿಸಿತು..?
ಎ. 1954
ಬಿ. 1953
ಸಿ. 1956
ಡಿ. 1955

18. ಸಂವಿಧಾನದ ಯಾವ ವಿಧಿಯನ್ವಯ ರಾಷ್ಟ್ರಪತಿಗಳು ತುರ್ತುಪರಿಸ್ಥಿತಿಯನ್ನು ಘೋಷಿಸುವ ಅಧಿಕಾರ ಹೊಂದಿದ್ದಾರೆ..?
ಎ. 356 ನೇ ವಿಧಿ
ಬಿ. 360 ನೆ ವಿಧಿ
ಸಿ. 352 ನೆ ವಿಧಿ
ಡಿ. 355 ನೇ ವಿಧಿ

19. ಈ ಕೆಳಗಿನ ಯಾರನ್ನು ರಾಷ್ಟ್ರಪತಿಗಳು ತಮಗೆ ಇಷ್ಟವಾಗದೇ ಇದ್ದಾಗ ಹುದ್ದೆಯಿಂದ ತೆಗೆದು ಹಾಕಬಹುದು..?
ಎ. ಭಾರತದ ಮುಖ್ಯ ನ್ಯಾಯಾಧೀಶರು
ಬಿ. ರಾಜ್ಯವೊಂದರ ರಾಜ್ಯಪಾಲರು
ಸಿ. ಉಪರಾಷ್ಟ್ರಪತಿಗಳು
ಡಿ. ಕೇಂದ್ರಲೋಕಸೇವಾ ಆಯೋಗದ ಅಧ್ಯಕ್ಷರು

20. ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಯಾವ ಆಧಾರದ ಮೇಲೆ ಪ್ರಾತಿನಿಧ್ಯವನ್ನು ನೀಡಲಾಗಿದೆ..?
ಎ. ರಾಜ್ಯಗಳ ಸಾಮ್ಯತೆ
ಬಿ. ಜನಸಂಖ್ಯೆಯ ಆಧಾರದ ಮೇರೆಗೆ
ಸಿ. ರಾಜ್ಯಗಳ ಅಭಿವೃದ್ಧಿಯ ಹಂತದ ಮೇರೆಗೆ
ಡಿ. ರಾಜ್ಯಗಳ ಅಭಿವೃದ್ಧಿ ಮತ್ತು ಜನಸಂಖ್ಯೆಯ ಮೇರೆಗೆ

# ಉತ್ತರಗಳು :
1. ಸಿ. ಜನರಿಗಿರುವ ಸರ್ಕಾರವನ್ನು ಆಯ್ಕೆ ಮಾಡುವ ಮತ್ತು ಬದಲಾಯಿಸುವ ಹಕ್ಕು
2. ಡಿ. 12 ರಿಂದ 35 ರವರೆಗಿನ ವಿಧಿಗಳು
3. ಸಿ. ರಾಜ್ಯನೀತಿಯ ನಿರ್ದೇಶನಾತ್ಮಕ ಸೂತ್ರಗಳು
4. ಬಿ. ಅತೀ ಪ್ರಾಮುಖ್ಯ ವಿಷಯಗಳನ್ನು ಕಲಾಪದಲ್ಲಿ ಮಂಡಿಸುವ ಅವಧಿ
5. ಎ. ಜವಾಹರಲಾಲ್ ನೆಹರು
6. ಎ. ಗವರ್ನ್‍ಮೆಂಟ್ ಆಫ್ ಇಂಡಿಯಾ ಆಕ್ಟ್, 1935
7. ಎ. ಸಂಸದೀಯ ಪದ್ಧತಿಯ ಸರ್ಕಾರ
8. ಎ. ಯುಎಸ್‍ಎ
9. ಬಿ. ಐರ್ಲೆಂಡಿನ ಸಂವಿಧಾನ
10. ಸಿ. ರಾಷ್ಟ್ರಪತಿಗಳು

11. ಸಿ. 25 ವರ್ಷಗಳು
12. ಎ. ಲೋಕಸಭಾ ಸದಸ್ಯರು
13. ಬಿ. ರಾಷ್ಟ್ರಪತಿಗಳು
14. ಡಿ. ಶಾಸಕಾಂಗ
15. ಬಿ. ಆಸ್ತಿಯ ಹಕ್ಕು
16. ಬಿ. ಗ್ರಾಮ ಪಂಚಾಯತ್
17. ಡಿ. 1955
18. ಸಿ. 352 ನೆ ವಿಧಿ
19. ಬಿ. ರಾಜ್ಯವೊಂದರ ರಾಜ್ಯಪಾಲರು
20. ಬಿ. ಜನಸಂಖ್ಯೆಯ ಆಧಾರದ ಮೇರೆಗೆ

# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2 

 

 

error: Content Copyright protected !!