GKScienceSpardha Times

ಪ್ರಮುಖ ಲವಣಗಳು ಮತ್ತು ಅವುಗಳ ಉಪಯೋಗ

Share With Friends

ತಟಸ್ಥಿಕರಣ ಕ್ರಿಯೆಯಲ್ಲಿ ನೀರಿನ ಜೊತೆಯಲ್ಲಿ ಉಂಟಾಗುವ ವಸ್ತುಗಳೇ “ಲವಣಗಳು”.  ಪ್ರಮುಖ ಲವಣಗಳು ಮತ್ತು ಅವುಗಳ ಉಪಯೋಗ ಈ ಕೆಳಕಂಡಂತಿದೆ

1. ಸೋಡಿಯಂ ಕಾರ್ಬೋನೇಟ್(ವಾಷಿಂಗ್ ಸೋಡಾ)
ಉಪಯೋಗಗಳು
*ಬಟ್ಟೆ ತೊಳೆಯಲು
*ನೀರನ್ನು ಮೆದುಗೊಳಿಸಲು
*ಗಾಜು ಮತ್ತು ಸಾಬೂನುಗಳ ತಯಾರಿಕೆಯಲ್ಲಿ

2. ಸೋಡಿಯಂ ಬೈ ಕಾರ್ಬೋನೇಟ್(ಅಡುಗೆ ಸೋಡಾ)
*ಬೇಕಿಂಗ್ ಪುಡಿ ತಯಾರಿಕೆಯಲ್ಲಿ
*ಆಂಟಾಸಿಡ್‍ಗಳ ತಯಾರಿಕೆಯಲ್ಲಿ
*ಅಡುಗೆ ಮಾಡಲು

3. ಸೋಡಿಯಂ ಕ್ಲೋರೈಡ್(ಅಡುಗೆ ಉಪ್ಪು)
*ಅಡುಗೆ ಮಾಡಲು
* ಮೀನು, ಮಾಂಸ ಮುಂತಾದ ಆಹಾರ ಪದಾರ್ಥಗಳ ಸಂರಕ್ಷಣೆಯಲ್ಲಿ

4. ತಾಮ್ರದ ಸಲ್ಪೇಟ್( ಮೈಲುತುತ್ತ)
*ಶೀಲಿಂದ್ರ ನಾಶಕಗಳಲ್ಲಿ
*ತಾಮ್ರದ ವೋಲ್ಟಾಮೀಟರ್‍ಗಳಲ್ಲಿ

5. ಕ್ಯಾಲ್ಸಿಯಂ ಕಾರ್ಬೋನೇಟ್( ಸುಣ್ಣದ ಕಲ್ಲು)
*ಸಿಮೆಂಟ್ ತಯಾರಿಕೆಯಲ್ಲಿ
*ಗಾಜಿನ ತಯಾರಿಕೆಯಲ್ಲಿ
* ಕಬ್ಬಿಣದ ಉದ್ದರಣದಲ್ಲಿ

6. ಪೊಟ್ಯಾಶೀಯಂ ನೈಟ್ರೇಟ್
* ಮದ್ದಿನ ಪುಡಿ ತಯಾರಿಕೆಯಲ್ಲಿ
* ಗಾಜಿನ ತಯಾರಿಕೆಯಲ್ಲಿ
* ಕೃತಕ ಗೊಬ್ಬರಗಳ ತಯಾರಿಕೆಯಲ್ಲಿ

7. ಪೊಟ್ಯಾಷಿಯಂ ಕಾರ್ಬೋನೇಟ್
* ಸಾಬೂನ್ ತಯಾರಿಕೆಯಲ್ಲಿ
* ಗಾಜಿನ ತಯಾಕೆಯಲ್ಲಿ

8. ಅಮೋನಿಯಂ ಕ್ಲೋರೈಡ್
* ಶುಷ್ಕ ಕೋಶಗಳಲ್ಲಿ

9. ಪೊಟ್ಯಾಷ್ ಪಟಿಕ
* ಕಾಗದದ ಕಾರ್ಖಾನೆಗಳಲ್ಲಿ
* ಚರ್ಮ ಕೈಗಾರಿಕೆಗಳಲ್ಲಿ
* ಬಣ್ಣಗಳ ಕೈಗಾರಿಕೆಗಳಲ್ಲಿ
* ಕುಡಿಯುವ ನೀರನ್ನು ಶುದ್ದೀಕರಿಸಲು

 #  ದ್ರವರಾಜ
ಪ್ರಬಲ ನೈಟ್ರಿಕ್ ಆಮ್ಲ ಮತ್ತು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲಗಳ 1:3 ಪ್ರಮಾಣದ ಮಿಶ್ರಣವನ್ನು “ ದ್ರವರಾಜ” ಎಂದು ಕರೆಯುತ್ತಾರೆ. ಇದನ್ನು ಚಿನ್ನ ಮತ್ತು ಪ್ಲಾಟಿನಂಗಳನ್ನು ಕರಗಿಸಲು ಬಳಸುತ್ತಾರೆ. ಚಿನ್ನ ಮತ್ತು ಪ್ಲಾಟಿನಂ ದ್ರವರಾಜವನ್ನು ಹೊರತುಪಡಿಸಿ ಬೇರ್ಯಾವ ದ್ರವಗಳಲ್ಲಿ ಕರಗುವುದಿಲ್ಲ.

 #  ತಟಸ್ಥೀಕರಣ
ನಿರ್ದಿಷ್ಟ ಪ್ರಮಾಣದ ಆಮ್ಲವನ್ನು ಪ್ರತ್ಯಾಮ್ಲಕ್ಕೆ ಸೇರಿಸಿದಾಗ ಅಥವಾ ಪ್ರತ್ಯಾಮ್ಲವನ್ನು ಆಮ್ಲಕ್ಕೆ ಸೇರಿಸಿದಾಗ ತಟಸ್ಥ ದ್ರಾವಣ ಉಂಟಾಗುವ ಕ್ರಿಯೆಗೆ “ ತಟಸ್ಥಿಕರಣ” ಎಂದು ಹೆಸರು.
ಉದಾ- ಅಮೋನಿಯಂ ಹೈಡ್ರಾಕ್ಸೈಡ್ ದ್ರಾವಣಕ್ಕೆ ಗಂಧಕಾಮ್ಲವನ್ನು ಸೇರಿಸಿ ಅಮೋನಿಯಂ ಸಲ್ಪೇಟ್‍ನ್ನು ತಯಾರಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content Copyright protected !!