GKLatest UpdatesTechnology

ಕಂಪ್ಯೂಟರ್ ಜ್ಞಾನ : ವರ್ಡ್‌ನ್ನು ಅಳವಡಿಸುವುದು ಮತ್ತು ತೆಗೆದು ಹಾಕುವುದು (ಭಾಗ-2)

Share With Friends

✦Word Installing and Removing Word : 
ವರ್ಡನ್ನು ಅಳವಡಿಸುವುದು ಎಂದರೆ ಮೈಕ್ರೋಸಾಫ್ಟ್ ವರ್ಡ್‌ ತಂತ್ರಾಂಶ ಪ್ರೋಗ್ರಾಂ ನಮ್ಮ ಕಂಪ್ಯೂಟರ್‌ನಲ್ಲಿ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡುವುದು ಎಂದರ್ಥ. ಅದೇರೀತಿ ತೆಗೆಯುವುದು ಎಂದರೆ ಅದನ್ನು ಉಪಯೋಗಕ್ಕೆ ಅಲಭ್ಯವಾಗಿಸುವುದು ಅಥವಾ ನಿಷ್ಕ್ರಿಯಗೊಳಿಸುವುದು. ಮೊದಲೇ ತಿಳಿಸಿರುವಂತೆ, ವರ್ಡ್ ಪ್ರೋಗ್ರಾಂ ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶ ಗೊಂಚಲಿನ ಭಾಗವಾಗಿ ಮಾತ್ರ ಲಭ್ಯ.

ಅಂದರೆ ವರ್ಡನ್ನು ಅಳವಡಿಸಬೇಕಾದರೆ ಇಡೀ ಆಫೀಸ್ ತಂತ್ರಾಂಶವನ್ನೇ ಅದರ ಸಕಲ ಪ್ರೋಗ್ರಾಂಗಳ ಸಮೇತ ಅಳವಡಿಸಬೇಕು. ಕೇವಲ ವರ್ಡ್ ಪ್ರೋಗ್ರಾಂ ಅಷ್ಟೇ ಪ್ರತ್ಯೇಕವಾಗಿ ಲಭಿಸುವುದಿಲ್ಲವಾದ ಕಾರಣ ಅದನ್ನಷ್ಟೇ ಅಳವಡಿಸಲು ಸಾಧ್ಯವಿಲ್ಲ. ಎಂಎಸ್ ಆಫೀಸ್ ತಂತ್ರಾಂಶದ ಭಾಗವಾಗಿ ವರ್ಡನ್ನು ಅಳವಡಿಸಲು ಈ ವಿಧಾನವನ್ನು ಅನುಸರಿಸಬೇಕು ಎಲ್ಲಾ ಪ್ರೋಗ್ರಾಂ ತಂತ್ರಾಂಶಗಳು ಸಂಗ್ರಹಿತವಾಗಿರುವ ಎಂಎಸ್ ಆಫೀಸ್ ಸಿ.ಡಿ.ಯನ್ನು ಕಂಪ್ಯೂಟರ್‌ನ ಸಿ.ಡಿ.
ಚಾಲಶದೊಳಗೆ ಸೇರಿಸಬೇಕು.

ಮೈ ಕಂಪ್ಯೂಟರ್ ಕಿಟಿಕಿಯನ್ನು ತೆರೆದು, ಸಿಡಿ ಚಾಲಕ (CD Drive) ಪ್ರತಿಮೆಯನ್ನು ಇಮ್ಮಡಿ ಕ್ಲಿಕ್ ಮಾಡಬೇಕು. ಸಿಡಿಯಲ್ಲಿ ಸಂಗ್ರಹಿತವಾಗಿರುವ ಪ್ರೋಗ್ರಾಂ ಫೈಲುಗಳ ಪಟ್ಟಿ ಪರದೆಯ ಮೇಲಿನ ಕಿಟಕಿಯಲ್ಲಿ ಕಾಣಿಸುತ್ತದೆ. Setup ಕಾರ್ಯಸೂಚನೆಯನ್ನು ಇಮ್ಮಡಿಲ್ಲಿಕ್ ಮಾಡಬೇಕು.

ಆಗ ವಿಂಡೋಸ್ ವ್ಯವಸ್ಥೆಯು ಆಫೀಸ್ ತಂತ್ರಾಂಶವನ್ನು ಕಂಪ್ಯೂಟರ್‌ಗೆ ಅಳವಡಿಸುವ ಕಾರ್ಯ ಪ್ರಾರಂಭಿಸುತ್ತಿದೆ. ಈ ಸಂದರ್ಭದಲ್ಲಿ ಕೆಲವು ವ್ಯವಹಾರಿಕ ಷರತ್ತುಗಳನ್ನು ಸೂಚಿಸುವ ಕಿಟಿಕಿಗಳು ಪರದೆಯ ಮೇಲೆ ಕಾಣಿಸಬಹುದು. | Agree ಗುಂಡಿಯನ್ನು ಕ್ಲಿಕ್ ಮಾಡುವ ಮೂಲಕ ಅವುಗಳಿಗೆ ಒಪ್ಪಿಗೆ ಸೂಚಿಸಬೇಕು ಮತ್ತು next ಗುಂಡಿಯನ್ನು ಕ್ಲಿಕ್‌ ಮಾಡಿ ಮುಂದುವರಿಯಬೇಕು.

ಅಳವಡಿಕೆ ಕಾರ್ಯ ಯಶಸ್ವಿಯಾಗಿ ಮುಗಿದಾಗ Finish ಗುಂಡಿ ಒತ್ತಬೇಕು. ಆಗ ವರ್ಡ್ ಸಮೇತ ಆಫೀಸ್ ತಂತ್ರಾಂಶ ಕಂಪ್ಯೂಟರ್‌ನಲ್ಲಿ ಅಳವಡಿಕೆಯಾಗಿರುತ್ತದೆ. ವರ್ಡ್ನ್ನು ಕಂಪ್ಯೂಟರ್‌ನಿಂದ ತೆಗೆಯಬೇಕಾದರೆ ಇಡೀ ಆಫೀಸ್ ತಂತ್ರಾಂಶವನ್ನೇ ತೆಗೆಯಬೇಕು. ಅದನ್ನು ಈ ರೀತಿಯಾಗಿ ಮಾಡಬಹುದು.

ಕಂಪ್ಯೂಟರಿನ ನಿಯಂತ್ರಣ ಅಂಕಣ (Control Panel) ಕಿಟಕಿ ತೆರೆಯಬೇಕು. ಅಲ್ಲಿ Add and Remove Softwares ಪ್ರತಿಮೆಯ ಮೇಲೆ ಕ್ಲಿಕ್ ಮಾಡಬೇಕು. Add and Remove ಕಿಟಕಿ ಮೂಡುತ್ತದೆ. ಇಲ್ಲಿ ಎಂಎಸ್ ಆಫೀಸ್ ಆಯ್ಕೆ ಮಾಡಿಕೊಂಡು remove ಗುಂಡಿ ಕ್ಲಿಕ್ ಮಾಡಬೇಕು. ಆಗ ವಿಂಡೋಸ್ ಇಡೀ ಆಫೀಸ್ ತಂತ್ರಾಂಶವನ್ನೇ ತೆಗೆಯುತ್ತದೆ ಅಥವಾ ಅಲಭ್ಯವಾಗಿಸುತ್ತದೆ.

author avatar
spardhatimes

Leave a Reply

Your email address will not be published. Required fields are marked *

error: Content Copyright protected !!