Impotent DaysLatest Updates

ಅ.24 : ವಿಶ್ವ ಪೋಲಿಯೊ ದಿನ (World Polio Day)

Share With Friends

World Polio Day : ಪೋಲಿಯೋ ದಿನವನ್ನು ಪ್ರತಿವರ್ಷ ಅಕ್ಟೋಬರ್ 24ರಂದು (October 24) ಆಚರಿಸಲಾಗುತ್ತದೆ. ಪೋಲಿಯೋ (Poliomyelitis) ಎಂಬ ಮಾರಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ವಿಶ್ವದಾದ್ಯಂತ ಪೋಲಿಯೋ ನಿರ್ಮೂಲನೆಯತ್ತ ಕೈಗೊಂಡ ಪ್ರಯತ್ನಗಳನ್ನು ನೆನಪಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಈ ದಿನವನ್ನು ರೋಟರಿ ಇಂಟರ್‌ನ್ಯಾಷನಲ್ (Rotary International) ಸಂಸ್ಥೆಯು 1988ರಲ್ಲಿ ವಿಶ್ವದಾದ್ಯಂತ ಪೋಲಿಯೋ ನಿರ್ಮೂಲನೆಗೆ ಕೈಗೊಂಡ ಕಾರ್ಯಗಳ ಗೌರವಾರ್ಥವಾಗಿ ಸ್ಥಾಪಿಸಿತು. ಈ ದಿನವನ್ನು ಆಯ್ಕೆಮಾಡಿದ್ದು, ಪೋಲಿಯೋ ಲಸಿಕೆ ಆವಿಷ್ಕರಿಸಿದ ಅಮೆರಿಕಾದ ವಿಜ್ಞಾನಿ ಡಾ. ಜೋನಾಸ್ ಸಾಲ್ಕ್ (Dr. Jonas Salk) ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ.

ಈ ಲಸಿಕೆಯಿಂದಾಗಿ ಲಕ್ಷಾಂತರ ಮಕ್ಕಳ ಪ್ರಾಣ ಉಳಿಯಿತು. ಮಾತ್ರವಲ್ಲ, ಅನೇಕ ಮಕ್ಕಳು ಅಂಗಾಂಗ ವೈಕಲ್ಯದಿಂದ ಬಳಲುವುದನ್ನು ತಪ್ಪಿಸಲಾಯಿತು. ಈ ಕಾರಣಕ್ಕಾಗಿ ಡಾ. ಜೋನಾಸ್ ಸಾಲ್ಡ್ ಅವರ ಜನ್ಮದಿನವನ್ನು ವಿಶ್ವ ಪೊಲಿಯೊ ದಿನವಾಗಿ ಘೋಷಣೆ ಮಾಡಲಾಗಿದೆ. ರೋಟರಿ ಸಂಸ್ಥೆಯು 20ನೇ ಶತಮಾನದಲ್ಲಿ ವಿಶ್ವದ ನಾನಾ ಭಾಗದಲ್ಲಿ ಲಸಿಕಾ ಅಭಿಯಾನವನ್ನು ಆರಂಭಿಸಿತು. ಇದು 1988ರಲ್ಲಿ ಪೊಲಿಯೊ ನಿರ್ಮೂಲನಾ ಉಪಕ್ರಮ (GPEI) ಸ್ಥಾಪನೆಗೆ ಅಡಿಪಾಯ ಹಾಕಿತು ಎಂದು ಇತಿಹಾಸ ಹೇಳುತ್ತದೆ.

ಈ ವರ್ಷ(2025)ದ ಥೀಮ್ ಏನು?
‘ಪೊಲಿಯೊವನ್ನು ಕೊನೆಗೊಳಿಸಿ: ಪ್ರತಿ ಮಗು. ಪ್ರತಿ ಲಸಿಕೆ, ಎಲ್ಲೆಡೆ’ (‘End Polio: Every Child. Every Vaccine, Everywhere’)

ಡಾ. ಜೋನಾಸ್ ಸಾಲ್ಕ್ ಮತ್ತು ಲಸಿಕೆ ಆವಿಷ್ಕಾರ:
1950ರ ದಶಕದಲ್ಲಿ ಪೋಲಿಯೋ ಎನ್ನುವ ಮಾರಕ ರೋಗವು ವಿಶ್ವದಾದ್ಯಂತ ಸಾವಿರಾರು ಮಕ್ಕಳ ಜೀವ ಕಸಿದುಕೊಂಡಿತ್ತು.
ಈ ಸಮಯದಲ್ಲಿ ಡಾ. ಜೋನಾಸ್ ಸಾಲ್ಕ್ ಅವರು ಪೋಲಿಯೋ ವೈರಸ್‌ನ ವಿರುದ್ಧದ ಮೊದಲ ಯಶಸ್ವಿ ಲಸಿಕೆಯನ್ನು 1955ರಲ್ಲಿ ಅಭಿವೃದ್ಧಿಪಡಿಸಿದರು.
ನಂತರ ಡಾ. ಆಲ್ಬರ್ಟ್ ಸಾಬಿನ್ (Dr. Albert Sabin) ಅವರು ಒರಲ್ ಪೋಲಿಯೋ ಲಸಿಕೆ (Oral Polio Vaccine) ಅನ್ನು ಅಭಿವೃದ್ಧಿಪಡಿಸಿದರು, ಇದು ಇನ್ನೂ ಸುಲಭವಾಗಿ ನೀಡಬಹುದಾದ ಮಾರ್ಗವಾಗಿತ್ತು.

ಜಾಗತಿಕ ಪ್ರಯತ್ನಗಳು:
1988ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO), ಯುನಿಸೆಫ್ (UNICEF), ರೋಟರಿ ಇಂಟರ್‌ನ್ಯಾಷನಲ್ ಮತ್ತು ಯು.ಎಸ್. CDC ಸೇರಿ “Global Polio Eradication Initiative (GPEI)” ಎಂಬ ಜಾಗತಿಕ ಯೋಜನೆ ಆರಂಭವಾಯಿತು.

ಇದರ ಉದ್ದೇಶ — ಪೋಲಿಯೋ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು.

1988ರಲ್ಲಿ ಸುಮಾರು 3.5 ಲಕ್ಷ ಪ್ರಕರಣಗಳು (350,000 cases) ವರದಿಯಾಗಿದ್ದರೆ, ಈಗ ಅವು ಕೆಲವೇ ದೇಶಗಳಿಗೆ ಸೀಮಿತವಾಗಿವೆ (ಹಾಗೂ ಬಹುತೆಕ ನಿರ್ಮೂಲಿತವಾಗಿದೆ).

ಭಾರತದಲ್ಲಿ ಪೋಲಿಯೋ ಇತಿಹಾಸ:
ಭಾರತದಲ್ಲಿ ಪೋಲಿಯೋ ವಿರುದ್ಧದ ಪಲ್ಸ್ ಪೋಲಿಯೋ ಅಭಿಯಾನ (Pulse Polio Campaign) 1995ರಲ್ಲಿ ಪ್ರಾರಂಭವಾಯಿತು. ಲಕ್ಷಾಂತರ ಮಕ್ಕಳಿಗೆ ಉಚಿತ ಲಸಿಕೆ ನೀಡುವ ಮೂಲಕ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ದೊಡ್ಡ ಮಟ್ಟದ ಯಶಸ್ಸು ಸಾಧಿಸಿದವು.2014ರಲ್ಲಿ ಭಾರತವನ್ನು “ಪೋಲಿಯೋ ಮುಕ್ತ ರಾಷ್ಟ್ರ” (Polio-Free Nation) ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಘೋಷಿಸಿತು.

2011ರ ಜನವರಿ 13ರಂದು ದಾಖಲಾದ ರುಕ್ಷಾ ಪ್ರಕರಣವೇ ಭಾರತದಲ್ಲಿ ದಾಖಲಾದ ಕಟ್ಟಕಡೆಯ ಪೊಲಿಯೊ ಪ್ರಕರಣವಾಗಿದೆ. ಇಂದಿಗೂ ಜಗತ್ತಿನ 41 ಬೇರೆ ಬೇರೆ ದೇಶಗಳಲ್ಲಿ ಪೊಲಿಯೊದ ಪಿಡುಗಿದೆ. ವಿಶ್ವದಾದ್ಯಂತ 40 ಕೋಟಿಗೂ ಅಧಿಕ ಮಕ್ಕಳಿಕೆ ಪ್ರತಿ ವರ್ಷ ಪೊಲಿಯೊ ಲಸಿಕೆ ಹಾಕಲಾಗುತ್ತದೆ.

ಪೋಲಿಯೋ ದಿನದ ಮಹತ್ವ:
ಪೋಲಿಯೋ ದಿನವು ಲಸಿಕೆಗಳ ಮಹತ್ವ, ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಮಾನವೀಯ ಸಹಕಾರದ ಶಕ್ತಿಯನ್ನು ನಮಗೆ ನೆನಪಿಸುತ್ತದೆ. ಈ ದಿನದ ಆಚರಣೆ ಜನರಲ್ಲಿ ಪೋಲಿಯೋ ವಿರುದ್ಧದ ಎಚ್ಚರಿಕೆಯನ್ನು ಹೆಚ್ಚಿಸುತ್ತದೆ ಮತ್ತು “ಎಲ್ಲರಿಗೂ ಲಸಿಕೆ – ಎಲ್ಲರಿಗೂ ಆರೋಗ್ಯ” ಎಂಬ ಸಂದೇಶವನ್ನು ನೀಡುತ್ತದೆ.


ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಚರಣೆಗಳು (ಪ್ರಮುಖ ದಿನಗಳು)
ಪ್ರಮುಖ ಅಂತರಾಷ್ಟ್ರೀಯ ದಿನಗಳು
ಏಪ್ರಿಲ್ ತಿಂಗಳ ಪ್ರಮುಖ ದಿನಗಳು / Important Days in April
ಮೇ ತಿಂಗಳ ಪ್ರಮುಖ ದಿನಗಳು / Important days in May
ಜೂನ್ ತಿಂಗಳ ಪ್ರಮುಖ ದಿನಗಳು / Important days in June
ಜುಲೈ ತಿಂಗಳ ಪ್ರಮುಖ ದಿನಗಳು / Important days in July
ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು / Important days in September

error: Content Copyright protected !!