Job NewsLatest Updates

NABARD Recruitment : 162 ಸಹಾಯಕ ಹಾಗೂ ಅಭಿವೃದ್ಧಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Share With Friends

NABARD Recruitment : ಸರ್ಕಾರಿ ಬ್ಯಾಂಕ್‌ಗಳಲ್ಲಿ ಉದ್ಯೋಗ (Jobs) ಪಡೆಯುವ ಕನಸು ಕಾಣುತ್ತಿರುವ ಯುವಕರಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ಭರ್ಜರಿ ಅವಕಾಶ ನೀಡಿದೆ. 2026ನೇ ಸಾಲಿನ ಗ್ರೂಪ್ ‘ಬಿ’ ಅಭಿವೃದ್ಧಿ ಸಹಾಯಕ ಹಾಗೂ ಅಭಿವೃದ್ಧಿ ಸಹಾಯಕ (ಹಿಂದಿ) ಹುದ್ದೆಗಳ ಭರ್ತಿಗೆ ನಬಾರ್ಡ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಅಧಿಸೂಚನೆ ಪ್ರಕಾರ, ಆನ್‌ಲೈನ್ ಅರ್ಜಿ ಪ್ರಕ್ರಿಯೆ ಜನವರಿ 17, 2026 ರಿಂದ ಪ್ರಾರಂಭವಾಗಿದ್ದು, ಫೆಬ್ರವರಿ 03, 2026 ಕೊನೆಯ ದಿನಾಂಕವಾಗಿದೆ. ಈ ನೇಮಕಾತಿಯ ಮೂಲಕ ಒಟ್ಟು 162 ಹುದ್ದೆಗಳು ಭರ್ತಿಯಾಗಲಿವೆ.

ಹುದ್ದೆಗಳ ವಿವರ :

ಗ್ರೂಪ್ ‘ಬಿ’ ಅಭಿವೃದ್ಧಿ ಸಹಾಯಕ – 159 ಹುದ್ದೆಗಳು
ಗ್ರೂಪ್ ‘ಬಿ’ ಅಭಿವೃದ್ಧಿ ಸಹಾಯಕ (ಹಿಂದಿ) – 03 ಹುದ್ದೆಗಳು

ಶೈಕ್ಷಣಿಕ ಅರ್ಹತೆ :

ಅಭಿವೃದ್ಧಿ ಸಹಾಯಕ ಹುದ್ದೆ:
ಯಾವುದೇ ವಿಭಾಗದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.

ಅಭಿವೃದ್ಧಿ ಸಹಾಯಕ (ಹಿಂದಿ) ಹುದ್ದೆ:
ಹಿಂದಿ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಪದವಿ
ಪದವಿ ಹಂತದಲ್ಲಿ ಹಿಂದಿ ಅಥವಾ ಇಂಗ್ಲಿಷ್ ಐಚ್ಛಿಕ ವಿಷಯವಾಗಿ ಅಧ್ಯಯನ
ಇಂಗ್ಲಿಷ್ ↔ ಹಿಂದಿ ಭಾಷಾಂತರಿಸುವ ಸಾಮರ್ಥ್ಯ ಕಡ್ಡಾಯ
(ವಿವರವಾದ ಅರ್ಹತೆಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಶೀಘ್ರ ಪ್ರಕಟಿಸಲಾಗುವುದು.)

ವಯೋಮಿತಿ :

ಕನಿಷ್ಠ: 21 ವರ್ಷ, ಗರಿಷ್ಠ: 35 ವರ್ಷ
ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯ.

ಆಯ್ಕೆ ಪ್ರಕ್ರಿಯೆ :

ನಬಾರ್ಡ್ ಅಭಿವೃದ್ಧಿ ಸಹಾಯಕ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ:
ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ
ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT)
ಈ ಪರೀಕ್ಷೆಗಳು ಅಭ್ಯರ್ಥಿಗಳ ಸಾಮರ್ಥ್ಯ, ಭಾಷಾ ಜ್ಞಾನ ಹಾಗೂ ಬ್ಯಾಂಕಿಂಗ್ ಅರಿವನ್ನು ಅಳೆಯಲಿವೆ.

ಅರ್ಜಿ ಸಲ್ಲಿಸುವ ವಿಧಾನ :

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು:
ನಬಾರ್ಡ್ ಅಧಿಕೃತ ವೆಬ್‌ಸೈಟ್ www.nabard.org ಗೆ ಭೇಟಿ ನೀಡಿ
ಮುಖಪುಟದಲ್ಲಿರುವ Career / Recruitment ವಿಭಾಗ ಕ್ಲಿಕ್ ಮಾಡಿ
ಹೊಸ ಅಭ್ಯರ್ಥಿಗಳು ಮೊದಲು ನೋಂದಣಿ ಮಾಡಿಕೊಳ್ಳಿ
ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ
ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ
ಅಗತ್ಯ ಅರ್ಜಿ ಶುಲ್ಕ ಪಾವತಿಸಿ
ಅರ್ಜಿಯ ಪ್ರಿಂಟ್‌ಔಟ್‌ನ್ನು ಸಂರಕ್ಷಿಸಿ

ಪ್ರಮುಖ ದಿನಾಂಕಗಳು :

ಆನ್‌ಲೈನ್ ಅರ್ಜಿ ನೋಂದಣಿ ಪ್ರಾರಂಭ: 17/01/2026
ಆನ್‌ಲೈನ್ ಅರ್ಜಿ ನೋಂದಣಿ ಕೊನೆ: 03/02/2026
ಆನ್‌ಲೈನ್ ಶುಲ್ಕ/ಇಂಟಿಮೇಶನ್ ಚಾರ್ಜ್ ಪಾವತಿ: 17/01/2026 ರಿಂದ 03/02/2026
ಹಂತ–I (ಪ್ರಾಥಮಿಕ) ಆನ್‌ಲೈನ್ ಪರೀಕ್ಷೆ: 21/02/2026
ಹಂತ–II (ಮುಖ್ಯ) ಆನ್‌ಲೈನ್ ಪರೀಕ್ಷೆ: 12/04/2026
ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT): ಮುಖ್ಯ ಪರೀಕ್ಷೆಯ ನಂತರ
(ದಿನಾಂಕವನ್ನು ನಂತರ ಪ್ರಕಟಿಸಲಾಗುವುದು)

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಬಾರ್ಡ್‌ನ ಅಧಿಕೃತ ವೆಬ್‌ಸೈಟ್ www.nabard.org
ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವಂತೆ ನಬಾರ್ಡ್ ತಿಳಿಸಿದೆ.


✶ Read this also : Current Recruitments : ಪ್ರಸ್ತುತ ನೇಮಕಾತಿಗಳು



author avatar
spardhatimes
error: Content Copyright protected !!