Renewable Energy : ರಿನಿವಬಲ್ ಎನರ್ಜಿ ಉತ್ಪಾದನೆಯಲ್ಲಿ ಜಾಗತಿಕವಾಗಿ 3ನೇ ಸ್ಥಾನಕ್ಕೇರಿದ ಭಾರತ
India registers 3-fold growth in renewable energy capacity to 232 GW in last decade
ಕಳೆದ ದಶಕದಲ್ಲಿ ಭಾರತವು ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯದಲ್ಲಿ ಮೂರು ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ, ಭಾರತದಲ್ಲಿ ಸ್ಥಾಪಿತವಾದ ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯ (Installed renewable energy capacity) 232 ಗಿಗಾ ವ್ಯಾಟ್ ತಲುಪಿದೆ. ಏಪ್ರಿಲ್ ಆರಂಭದಲ್ಲಿ, ಭಾರತವು 2024 ರಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಪವನ ಮತ್ತು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ವಿಶ್ವದ ಮೂರನೇ ಅತಿದೊಡ್ಡ ದೇಶವಾಯಿತು.
ಕಳೆದ ಒಂದು ದಶಕದಲ್ಲಿ ಇದು ಮೂರು ಪಟ್ಟು ಹೆಚ್ಚಾಗಿದೆ. 2014ರ ಮಾರ್ಚ್ ತಿಂಗಳಲ್ಲಿ ಭಾರತದ ಈ ಮರುಬಳಕೆ ಶಕ್ತಿ ಸಾಮರ್ಥ್ಯ 75.52 ಗಿಗಾ ವ್ಯಾಟ್ ಇತ್ತು. ಭಾರತದಲ್ಲಿ 10 ವರ್ಷದಲ್ಲಿ ರಿನಿವಬಲ್ ಎನರ್ಜಿ ಯೋಜನೆಗಳು ಸಾಕಷ್ಟು ಚಾಲ್ತಿಗೆ ಬಂದಿದ್ದು, ಸೌರಶಕ್ತಿ ವಿದ್ಯುತ್ ದರಗಳೂ ಕೂಡ ಶೇ. 80ರಷ್ಟು ಇಳಿಕೆ ಆಗಿವೆ. ಈಗ ಒಂದು ಯುನೆಟ್ಗೆ 10.95 ರೂ ಮಾತ್ರವೇ ಇದೆ.
ರಿನಿವಬಲ್ ಎನರ್ಜಿಗಳಲ್ಲಿ ಸೌರಶಕ್ತಿ, ವಾಯುಶಕ್ತಿ ಅಷ್ಟೇ ಅಲ್ಲದೆ ಜಲವಿದ್ಯುತ್ ಕೂಡ ಸೇರಿದೆ. ಜಲವಿದ್ಯುತ್ ಘಟಕಗಳು ಭಾರತದಲ್ಲಿ ಮೊದಲಿಂದಲೂ ಇವೆ. ಕಳೆದ ಹತ್ತು ವರ್ಷದಲ್ಲಿ ಸೌರಶಕ್ತಿ, ವಾಯುಶಕ್ತಿಯಂತಹ ಪರ್ಯಾಯ ವಿದ್ಯುತ್ ಉತ್ಪಾದನಾ ಘಟಕಗಳು ಸಾಕಷ್ಟು ಹೆಚ್ಚಾಗಿವೆ. 2014ರ ಮಾರ್ಚ್ನಲ್ಲಿ ಭಾರತದಲ್ಲಿ ಸೌರಶಕ್ತಿ ಕೆಪಾಸಿಟಿ 2.82 ಗಿಗಾ ವ್ಯಾಟ್ನಷ್ಟು ಇತ್ತು. ಇವತ್ತು ಅದು 108 ಗಿಗಾ ವ್ಯಾಟ್ಗೆ ಏರಿದೆ. ವಿಂಡ್ ಎನರ್ಜಿ ಅಥವಾ ವಾಯುಶಕ್ತಿ ವಿದ್ಯುತ್ ಸಾಮರ್ಥ್ಯ 21 ಗಿಗಾವ್ಯಾಟ್ನಷ್ಟು ಇದ್ದದ್ದು 51 ಗಿಗಾ ವ್ಯಾಟ್ ಮುಟ್ಟಿದೆ.
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೋಲಾರ್ ಮಾಡ್ಯೂಲ್ ಮ್ಯಾನುಫ್ಯಾಕ್ಚರಿಂಗ್ ಸಖತ್ ಹೆಚ್ಚಾಗಿದೆ. ಹತ್ತು ವರ್ಷಗಳ ಹಿಂದೆ ಸೋಲಾರ್ ಸೆಲ್ ಮತ್ತು ವೇಫರ್ಗಳು ಭಾರತದಲ್ಲಿ ತಯಾರಾಗುತ್ತಿದ್ದುದು ತೀರಾ ಕಡಿಮೆ. ಇವತ್ತು 25 ಗಿಗಾವ್ಯಾಟ್ನಷ್ಟು ಸೋಲಾರ್ ಸೆಲ್ ತಯಾರಿಕೆ ಆಗಿದೆ.
ಇನ್ನೈದು ವರ್ಷದಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆಯಾ ಭಾರತ?
2030ರಷ್ಟರಲ್ಲಿ ಭಾರತದಲ್ಲಿ ಸ್ಥಾಪಿತವಾದ ರಿನಿವಬಲ್ ಎನರ್ಜಿ ಸಾಮರ್ಥ್ಯವನ್ನು 500 ಗಿಗಾ ವ್ಯಾಟ್ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಇನ್ನೈದು ವರ್ಷದಲ್ಲಿ ಪ್ರತೀ ವರ್ಷ ಕನಿಷ್ಠ 50 ಗಿಗಾ ವ್ಯಾಟ್ನಷ್ಟು ರಿನಿವಬಲ್ ಎನರ್ಜಿ ಕೆಪಾಸಿಟಿ ಹೆಚ್ಚಾಗುವ ಅವಶ್ಯಕತೆ ಇದೆ. ಈ ಗುರಿ ನೆರವೇರಿದರೆ ಅಮೆರಿಕಕ್ಕಿಂತ ಹೆಚ್ಚು ರಿನಿವಬಲ್ ಎನರ್ಜಿ ಸಾಮರ್ಥ್ಯ ಭಾರತದ್ದಾಗಬಹುದು.
ರಿನಿವಬಲ್ ಎನರ್ಜಿ ಸಾಮರ್ಥ್ಯದ ಟಾಪ್ 10 ದೇಶಗಳು :
ಚೀನಾ: 1,827 ಗಿಗಾ ವ್ಯಾಟ್
ಅಮೆರಿಕ: 428 ಗಿಗಾ ವ್ಯಾಟ್
ಭಾರತ: 232 ಗಿಗಾ ವ್ಯಾಟ್
ಬ್ರೆಜಿಲ್: 213 ಗಿಗಾ ವ್ಯಾಟ್
ಜರ್ಮನಿ: 179 ಗಿಗಾ ವ್ಯಾಟ್
ಜಪಾನ್: 132 ಗಿಗಾ ವ್ಯಾಟ್
ಕೆನಡಾ: 110 ಗಿಗಾ ವ್ಯಾಟ್
ಸ್ಪೇನ್: 88.5 ಗಿಗಾ ವ್ಯಾಟ್
ಫ್ರಾನ್ಸ್: 74 ಗಿಗಾ ವ್ಯಾಟ್
ಇಟಲಿ: 72 ಗಿಗಾ ವ್ಯಾಟ್