Current AffairsLatest Updates

BCCI ಹಂಗಾಮಿ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ (Rajeev Shukla) ನೇಮಕ

Share With Friends

Rajeev Shukla to take over as BCCI president in interim role

ರೋಜರ್ ಬಿನ್ನಿ ಅವರಿಗೆ ಮುಂದಿನ ತಿಂಗಳು 70 ವರ್ಷ ತುಂಬಿ ಬಿಸಿಸಿಐ ಅಧ್ಯಕ್ಷ ಸ್ಧಾನದಿಂದ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಸಂಸ್ಥೆಯ ಹಿರಿಯ ಆಡಳಿತಾಧಿಕಾರಿ ರಾಜೀವ್ ಶುಕ್ಲಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕನ್ನಡಿಗ, 1983ರ ವಿಶ್ವಕಪ್ ಗೆಲುವಿನ ಹೀರೋ ರೋಜರ್ ಬಿನ್ನಿ ಅವರಿಂದ ತೆರವಾಗಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ರಾಜ್ಯಸಭೆ ಸದಸ್ಯ, ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ. ಬಿಸಿಸಿಐ ನಿಯಮದ ಪ್ರಕಾರ, 70 ವರ್ಷದ ಬಳಿಕ ಬಿಸಿಸಿಐನ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹೀಗಾಗಿ ಪ್ರಸುತ ಅಧ್ಯಕ್ಷರಾಗಿರುವ ಕನ್ನಡಿಗ ರೋಜರ್ ಬಿನ್ನಿ ಜುಲೈ 19 ರಂದು 70ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರಿಂದ ತೆರವಾಗುವ ಸ್ಥಾನಕ್ಕೆ ರಾಜೀವ್‌ ಶುಕ್ಲಾ ಆಯ್ಕೆ ಆಗಲಿದ್ದಾರೆ.

ಲೋಧಾ ಸಮಿತಿ ನಿಯಮಗಳ ಪ್ರಕಾರ 70 ವರ್ಷ ತುಂಬುತ್ತಿದ್ದಂತೆ ರೋಜರ್ ಬಿನ್ನಿ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. 2022ರ ಅಕ್ಟೋಬರ್‌ನಲ್ಲಿ ಬಿಸಿಸಿಐನ 36ನೇ ಅಧ್ಯಕ್ಷರಾಗಿ ಬಿನ್ನಿ ಆಯ್ಕೆಯಾಗಿದ್ದರು. ಸೌರವ್ ಗಂಗೂಲಿ ಅವರ ಮೂರು ವರ್ಷಗಳ ಅಧಿಕಾರಾವಧಿ ಮುಗಿದ ನಂತರ ಬಿನ್ನಿ ಅಧ್ಯಕ್ಷರಾದರು. ಸೆಪ್ಟೆಂಬರ್‌ನಲ್ಲಿ ನಡೆಯುವ ವಾರ್ಷಿಕ ಸಭೆಗೂ ಮುನ್ನ ರಾಜೀವ್ ಶುಕ್ಲಾ ಮೂರು ತಿಂಗಳ ಕಾಲ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ನಂತರ ಅವರು ಪೂರ್ಣ ಪ್ರಮಾಣದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ.

2022 ರಲ್ಲಿ ಸೌರವ್ ಗಂಗೂಲಿ ಅವರ ಸ್ಥಾನಕ್ಕೆ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿದ್ದ ರೋಜರ್ ಬಿನ್ನಿ ಅವರು ಜುಲೈ 19 ರಂದು 70 ವರ್ಷಗಳನ್ನು ಪೂರೈಸುತ್ತಿದ್ದು, ಬಿಸಿಸಿಐ ಪದಾಧಿಕಾರಿ ಹುದ್ದೆಯ ವಯಸ್ಸಿನ ಮಿತಿಯನ್ನು ಮೀರಿದೆ.

65 ವರ್ಷದ ರಾಜೀವ್ ಶುಕ್ಲಾ ಅವರು 2020ರಿಂದ ಬಿಸಿಸಿಐ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು, ಮುಂದಿನ ಸೆಪ್ಟೆಂಬರ್‌ನಲ್ಲಿ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಹೊಸ ಚುನಾವಣೆ ನಡೆಯುವವರೆಗೆ ಬಿಸಿಸಿಐ ಹಂಗಾಮಿ ಮುಖ್ಯಸ್ಥರಾಗಿರುತ್ತಾರೆ.

error: Content Copyright protected !!