AwardsCurrent AffairsLatest Updates

Padma Awards 2026 : 131 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಣೆ, ಇಲ್ಲಿದೆ ಪುರಸ್ಕೃತರ ಪಟ್ಟಿ

Share With Friends

Padma Awards 2026 : ಗಣರಾಜ್ಯೋತ್ಸವದ ಈ ಸುಸಂದರ್ಭದಲ್ಲಿ ಕರ್ನಾಟಕದ 8 ಮಂದಿ ಸೇರಿದಂತೆ ದೇಶಾದ್ಯಂತ 131 ಮಂದಿ ಸಾಧಕರನ್ನು ಕೇಂದ್ರ ಸರ್ಕಾರ ಭಾನುವಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಐವರಿಗೆ ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ಈ ವರ್ಷದ ಪುರಸ್ಕೃತರ ಪಟ್ಟಿಯಲ್ಲಿ 19 ಮಹಿಳಾ ಪುರಸ್ಕೃತರು, ವಿದೇಶಿಯರು, NRI, PIO, OCI ವರ್ಗದಿಂದ 6 ಮಂದಿ ಹಾಗೂ 16 ಮರಣೋತ್ತರ ಪ್ರಶಸ್ತಿಗಳು ಸೇರಿವೆ.

ಒಟ್ಟು 131 ಪದ್ಮಗಳಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಸೇರಿವೆ. ಇದರಲ್ಲಿ ಇಬ್ಬರು ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ಒಂದಾಗಿ ಪರಿಗಣಿಸಲಾದ 2 ಪ್ರಸಂಗಳಿವೆ.

ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾಹಿತ್ಯ–ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಈ ಗೌರವ ನೀಡಲಾಗಿದೆ.

ರಾಜೀವ್‌ ಗಾಂಧಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಕೆ.ಟಿ. ಥಾಮಸ್, ಕಲೆಯಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಮತ್ತು ಪಿಟೀಲು ವಾದಕ ಎನ್. ರಾಜಮ್, ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಖ್ಯಾತ ಮಲಯಾಳಂ ಪತ್ರಕರ್ತ ಪಿ. ನಾರಾಯಣನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಭಗತ್ ಸಿಂಗ್ ಕೋಶ್ಯಾರಿ, ನಟ ಮಮ್ಮುಟ್ಟಿ ಮತ್ತು ಬ್ಯಾಂಕರ್ ಉದಯ್ ಕೋಟಕ್ ಅವರು ಪದ್ಮಭೂಷಣ ಪ್ರಶಸ್ತಿ ವಿಜೇತರಲ್ಲಿ ಸೇರಿದ್ದಾರೆ.ಜಾಹೀರಾತು ಗುರು ಪೀಯೂಷ್ ಪಾಂಡೆ, ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್ ಮತ್ತು ಬಿಜೆಪಿ ನಾಯಕ ವಿ.ಕೆ. ಮಲ್ಹೋತ್ರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದ್ದು, ಹಾಸ್ಯನಟ ಸತೀಶ್ ಶಾ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಕ್ರೀಡಾ ಕೆಟಗರಿ:
ಕ್ರೀಡಾ ಕೆಟಗರಿಯಲ್ಲಿ ಟೆನಿಸ್ ದಂತಕಥೆ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ. ಕ್ರಿಕೆಟಿಗ ರೋಹಿತ್ ಶರ್ಮಾ, ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಹಾಕಿ ಆಟಗಾರ್ತಿ ಸವಿತಾ ಪುನಿಯಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

131 ಪುರಸ್ಕೃತರಲ್ಲಿ 90 ಮಹಿಳೆಯರು!
ಪ್ರಶಸ್ತಿ ಪುರಸ್ಕೃತರಲ್ಲಿ ಮಹಿಳೆಯರಿಗೆ ಸಿಂಹಪಾಲು ಹೋಗಿದೆ. ಒಟ್ಟು 90 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 16 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ವಿದೇಶಿಗರ ವರ್ಗದಲ್ಲಿ 6 ಅನಿವಾಸಿ ಭಾರತೀಯರಿದ್ದಾರೆ.

2026 ಪದ್ಮ ಪ್ರಶಸ್ತಿ ಪಡೆದ 8 ಕನ್ನಡಿಗರು :

ಅಂಕೇಗೌಡ – ಮಂಡ್ಯ
ವೈದ್ಯ ಡಾ ಸುರೇಶ್‌ ಹನಗವಾಡಿ – ದಾವಣಗೆರೆ
ಎಸ್‌ಜಿ ಸುಶೀಲಮ್ಮ – ಬೆಂಗಳೂರು
ಡಾ.ಪ್ರಭಾಕರ್ ಕೋರೆ – ಬೆಳಗಾವಿ
ಶಶಿಶೇಖರ ವೆಂಪತಿ – ಬೆಂಗಳೂರು
ಶುಭಾ ವೆಂಕಟೇಶ್ ಅಯ್ಯಂಗಾರ್ – ಬೆಂಗಳೂರು
ಟಿಟಿ ಜಗನ್ನಾಥ್ – ಬೆಂಗಳೂರು
ಶತಾವಧಾನಿ ಆರ್‌ ಗಣೇಶ್ – ಬೆಂಗಳೂರು

ಪದ್ಮ ಪ್ರಶಸ್ತಿಗಳ ಬಗ್ಗೆ :

ಪದ್ಮ ಪ್ರಶಸ್ತಿಗಳು ರಾಷ್ಟ್ರದ ಉನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದ್ದು, ಕಲೆ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ವೈದ್ಯಕೀಯ, ಸಮಾಜ ಸೇವೆ, ಕ್ರೀಡೆ, ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ.

1954ರಲ್ಲಿ ಆರಂಭಗೊಂಡ ಪದ್ಮ ಪ್ರಶಸ್ತಿಗಳಿಗೆ ಯಾವುದೇ ಜಾತಿ, ಧರ್ಮ, ಲಿಂಗ ಅಥವಾ ವೃತ್ತಿ ಬೇಧವಿಲ್ಲದೆ ಅರ್ಹತೆ ನೀಡಲಾಗುತ್ತದೆ. ಪ್ರಶಸ್ತಿಯೊಂದಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಹಣಕಾಸು ಬಹುಮಾನ ನೀಡಲಾಗುವುದಿಲ್ಲ.

ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರದಾನ ಮಾಡುತ್ತಾರೆ. ಪದ್ಮ ಪ್ರಶಸ್ತಿಗಳು ದೇಶದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಮಹತ್ವದ ವೇದಿಕೆಯಾಗಿ ಗುರುತಿಸಿಕೊಂಡಿವೆ.

(Read this also : ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳೇ ಏಕೆ ಧ್ವಜಾರೋಹಣ (unfurls) ನೆರವೇರಿಸುತ್ತಾರೆ..? )

ಪದ್ಮ ಪ್ರಶಸ್ತಿಗಳ ವಿಭಾಗಗಳು
ಪದ್ಮ ವಿಭೂಷಣ :👉 ಅತೀ ವಿಶಿಷ್ಟ ಮತ್ತು ಅಪರೂಪದ ಸೇವೆಗೆ
ಪದ್ಮ ಭೂಷಣ : 👉 ಉನ್ನತ ಮಟ್ಟದ ವಿಶಿಷ್ಟ ಸೇವೆಗೆ
ಪದ್ಮ ಶ್ರೀ : 👉 ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆಗೆ

✶ ಯಾವ ಕ್ಷೇತ್ರಗಳಿಗೆ.. ?
ಕಲೆ ಮತ್ತು ಸಾಹಿತ್ಯ
ಶಿಕ್ಷಣ
ವಿಜ್ಞಾನ ಮತ್ತು ತಂತ್ರಜ್ಞಾನ
ವೈದ್ಯಕೀಯ
ಸಮಾಜ ಸೇವೆ
ಕ್ರೀಡೆ
ಸಾರ್ವಜನಿಕ ಸೇವೆ
ವಾಣಿಜ್ಯ ಮತ್ತು ಕೈಗಾರಿಕೆ

✶ ಆಯ್ಕೆ ಪ್ರಕ್ರಿಯೆ :
ಯಾರಾದರೂ ಯಾರನ್ನಾದರೂ ಶಿಫಾರಸು ಮಾಡಬಹುದು (Self-nomination ಕೂಡ ಸಾಧ್ಯ)
ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ ಸಮಿತಿ ಶಿಫಾರಸುಗಳನ್ನು ಪರಿಶೀಲಿಸುತ್ತದೆ
ಅಂತಿಮ ಅನುಮೋದನೆ ರಾಷ್ಟ್ರಪತಿಗಳಿಂದ

ಪ್ರದ್ಮ ಪ್ರಶಸ್ತಿಗಳ ಕುರಿತ ಮುಖ ಅಂಶಗಳು :

*ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಸೇರಿವೆ, ಇದನ್ನು ವಾರ್ಷಿಕವಾಗಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.
*1954 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ.
*ಕಲೆ, ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ಕ್ರೀಡೆ ಮತ್ತು ನಾಗರಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
*ಪ್ರಕಟಣೆ ದಿನ: ಪ್ರತಿವರ್ಷ ಗಣರಾಜ್ಯೋತ್ಸವ (ಜನವರಿ 26) ಸಂದರ್ಭದಲ್ಲಿ
*ಪ್ರಶಸ್ತಿ ಪ್ರದಾನ: ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡುತ್ತಾರೆ
*ಪದ್ಮ ಪ್ರಶಸ್ತಿಗಳು ಭಾರತದಲ್ಲಿ ಭಾರತ ರತ್ನದ ನಂತರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು.
*ಪದ್ಮ ಪ್ರಶಸ್ತಿಗಳು ಜಾತಿ, ಧರ್ಮ, ವೃತ್ತಿ ಯಾವುದೇ ಬೇಧವಿಲ್ಲದೆ ನೀಡಲಾಗುತ್ತವೆ
*ಪ್ರಶಸ್ತಿಯೊಂದಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ
*ಇದಕ್ಕೆ ಯಾವುದೇ ಹಣಕಾಸು ಬಹುಮಾನ ಇರುವುದಿಲ್ಲ
*ಸರ್ಕಾರಿ ನೌಕರರು (PSU ಉದ್ಯೋಗಿಗಳು ಸೇರಿದಂತೆ) ಸಾಮಾನ್ಯವಾಗಿ * ಅರ್ಹರಾಗಿರುವುದಿಲ್ಲ, ಆದರೆ ವೈದ್ಯರು ಮತ್ತು ವಿಜ್ಞಾನಿಗಳು ಹೊರತಾಗಿದ್ದಾರೆ.
*ಪದ್ಮ ಪ್ರಶಸ್ತಿಯನ್ನು ಹೆಸರಿನ ಮುಂದಾಗಲಿ, ಹಿಂದೆ ಆಗಲಿ ಬಳಸಲು ಅನುಮತಿ ಇಲ್ಲ. ಪ್ರಶಸ್ತಿ * ಪಡೆದವರನ್ನು “ಪದ್ಮಶ್ರೀ”, “ಪದ್ಮಭೂಷಣ” ಎಂದು ಅಧಿಕೃತವಾಗಿ ಕರೆಯಲು * ಅವಕಾಶವಿಲ್ಲಆದರೆ ಸಾಮಾಜಿಕವಾಗಿ ಬಳಸುವುದು ಸಾಮಾನ್ಯ
*1978–1980 ಅವಧಿಯಲ್ಲಿ ಪದ್ಮ ಪ್ರಶಸ್ತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು, ನಂತರ ಪುನರಾರಂಭಗೊಂಡವು
*ವಿದೇಶಿ ನಾಗರಿಕರು, NRIಗಳು, OCIಗಳು ಕೂಡ ಪದ್ಮ ಪ್ರಶಸ್ತಿಗೆ ಅರ್ಹರು.

2026ನೇ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಪದ್ಮವಿಭೂಷಣ ಪ್ರಶಸ್ತಿ ಪಡೆದವರ ಪಟ್ಟಿ
ಹೆಸರುಕ್ಷೇತ್ರರಾಜ್ಯ / ದೇಶ
ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ)ಕಲೆಮಹಾರಾಷ್ಟ್ರ
ಕೆ. ಟಿ. ಥಾಮಸ್ಸಾರ್ವಜನಿಕ ವ್ಯವಹಾರಗಳುಕೇರಳ
ಎನ್. ರಾಜಮ್ಕಲೆಉತ್ತರ ಪ್ರದೇಶ
ಪಿ. ನಾರಾಯಣನ್ಸಾಹಿತ್ಯ ಮತ್ತು ಶಿಕ್ಷಣಕೇರಳ
ವಿ. ಎಸ್. ಅಚ್ಯುತಾನಂದನ್ (ಮರಣೋತ್ತರ)ಸಾರ್ವಜನಿಕ ವ್ಯವಹಾರಗಳುಕೇರಳ

ಪದ್ಮಭೂಷಣ ಪಡೆದವರ ಪಟ್ಟಿ
ಹೆಸರುಕ್ಷೇತ್ರರಾಜ್ಯ / ದೇಶ
ಅಲ್ಕಾ ಯಾಗ್ನಿಕ್ಕಲೆಮಹಾರಾಷ್ಟ್ರ
ಭಗತ್ ಸಿಂಗ್ ಕೋಶಿಯಾರಿಸಾರ್ವಜನಿಕ ವ್ಯವಹಾರಗಳುಉತ್ತರಾಖಂಡ
ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿವೈದ್ಯಕೀಯತಮಿಳುನಾಡು
ಮಮ್ಮುಟ್ಟಿಕಲೆಕೇರಳ
ಡಾ. ನೋರಿ ದತ್ತಾತ್ರೇಯಡುವೈದ್ಯಕೀಯಅಮೇರಿಕಾ (USA)
ಪಿಯೂಷ್ ಪಾಂಡೆ (ಮರಣೋತ್ತರ)ಕಲೆಮಹಾರಾಷ್ಟ್ರ
ಎಸ್. ಕೆ. ಎಂ. ಮೈಲಾನಂದನ್ಸಮಾಜ ಸೇವೆತಮಿಳುನಾಡು
ಶತಾವಧಾನಿ ಆರ್. ಗಣೇಶ್ಕಲೆಕರ್ನಾಟಕ
ಶಿಬು ಸೊರೆನ್ (ಮರಣೋತ್ತರ)ಸಾರ್ವಜನಿಕ ವ್ಯವಹಾರಗಳುಜಾರ್ಖಂಡ್
ಉದಯ್ ಕೋಟಕ್ವಾಣಿಜ್ಯ ಮತ್ತು ಕೈಗಾರಿಕೆಮಹಾರಾಷ್ಟ್ರ
ವಿ. ಕೆ. ಮಲ್ಹೋತ್ರಾ (ಮರಣೋತ್ತರ)ಸಾರ್ವಜನಿಕ ವ್ಯವಹಾರಗಳುದೆಹಲಿ
ವೆಲ್ಲಪ್ಪಳ್ಳಿ ನಟೇಸನ್ಸಾರ್ವಜನಿಕ ವ್ಯವಹಾರಗಳುಕೇರಳ
ವಿಜಯ ಅಮೃತ್‌ರಾಜ್ಕ್ರೀಡೆಅಮೇರಿಕಾ (USA)

ಪದ್ಮಶ್ರೀ ಪ್ರಶಸ್ತಿ ಪಡೆದ ಸಾಧಕರು
ಹೆಸರುಕ್ಷೇತ್ರರಾಜ್ಯ / ದೇಶ
ಎ. ಇ. ಮುತ್ತುನಾಯಗಮ್ವಿಜ್ಞಾನ ಮತ್ತು ಇಂಜಿನಿಯರಿಂಗ್ಕೇರಳ
ಅನಿಲ್ ಕುಮಾರ್ ರಸ್ತೋಗಿಕಲೆಉತ್ತರ ಪ್ರದೇಶ
ಅಂಕೇಗೌಡ ಎಂ.ಸಮಾಜ ಸೇವೆಕರ್ನಾಟಕ
ಆರ್ಮಿಡಾ ಫರ್ನಾಂಡಿಸ್ವೈದ್ಯಕೀಯಮಹಾರಾಷ್ಟ್ರ
ಅರವಿಂದ್ ವೈದ್ಯಕಲೆಗುಜರಾತ್
ಅಶೋಕ್ ಖಾಡೆವಾಣಿಜ್ಯ ಮತ್ತು ಕೈಗಾರಿಕೆಮಹಾರಾಷ್ಟ್ರ
ಅಶೋಕ್ ಕುಮಾರ್ ಸಿಂಗ್ವಿಜ್ಞಾನ ಮತ್ತು ಇಂಜಿನಿಯರಿಂಗ್ಉತ್ತರ ಪ್ರದೇಶ
ಅಶೋಕ್ ಕುಮಾರ್ ಹಲ್ದಾರ್ಸಾಹಿತ್ಯ ಮತ್ತು ಶಿಕ್ಷಣಪಶ್ಚಿಮ ಬಂಗಾಳ
ಬಲದೇವ್ ಸಿಂಗ್ಕ್ರೀಡೆಪಂಜಾಬ್
ಭಗವಾನ್‌ದಾಸ್ ರೈಕ್ವಾರ್ಕ್ರೀಡೆಮಧ್ಯಪ್ರದೇಶ
ಭರತ್ ಸಿಂಗ್ ಭಾರತಿಕಲೆಬಿಹಾರ
ಭಿಕ್ಯಾ ಲಡಕ್ಯಾ ದಿಂಡಾಕಲೆಮಹಾರಾಷ್ಟ್ರ
ವಿಶ್ವ ಬಂಧು (ಮರಣೋತ್ತರ)ಕಲೆಬಿಹಾರ
ಬ್ರಿಜ್ ಲಾಲ್ ಭಟ್ಸಮಾಜ ಸೇವೆಜಮ್ಮು ಮತ್ತು ಕಾಶ್ಮೀರ
ಬುದ್ಧ ರಶ್ಮಿ ಮಣಿಇತರೆ – ಪುರಾತತ್ವಉತ್ತರ ಪ್ರದೇಶ
ಡಾ. ಬುಧ್ರಿ ಟಾಟಿಸಮಾಜ ಸೇವೆಛತ್ತೀಸ್‌ಗಢ
ಚಂದ್ರಮೌಳಿ ಗಡ್ಡಮನುಗುವಿಜ್ಞಾನ ಮತ್ತು ಇಂಜಿನಿಯರಿಂಗ್ತೆಲಂಗಾಣ
ಚರಣ್ ಹೆಂಬ್ರಮ್ಸಾಹಿತ್ಯ ಮತ್ತು ಶಿಕ್ಷಣಒಡಿಶಾ
ಚಿರಂಜಿ ಲಾಲ್ ಯಾದವ್ಕಲೆಉತ್ತರ ಪ್ರದೇಶ
ದೀಪಿಕಾ ರೆಡ್ಡಿಕಲೆತೆಲಂಗಾಣ
ಧಾರ್ಮಿಕ್‌ಲಾಲ್ ಚುನಿಲಾಲ್ ಪಾಂಡ್ಯಕಲೆಗುಜರಾತ್
ಗಡ್ಡೆ ಬಾಬು ರಾಜೇಂದ್ರ ಪ್ರಸಾದ್ಕಲೆಆಂಧ್ರಪ್ರದೇಶ
ಗಫ್ರುದ್ದೀನ್ ಮೇವಾಟಿ ಜೋಗಿಕಲೆರಾಜಸ್ಥಾನ
ಗಂಭೀರ್ ಸಿಂಗ್ ಯೋನ್ಜೋನ್ಸಾಹಿತ್ಯ ಮತ್ತು ಶಿಕ್ಷಣಪಶ್ಚಿಮ ಬಂಗಾಳ
ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ)ಕಲೆಆಂಧ್ರಪ್ರದೇಶ
ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ರಂಜನಿ ಬಾಲಸುಬ್ರಮಣಿಯನ್ (ಜೋಡಿ)ಕಲೆತಮಿಳುನಾಡು
ಗೋಪಾಲ್ ಜಿ ತ್ರಿವೇದಿವಿಜ್ಞಾನ ಮತ್ತು ಇಂಜಿನಿಯರಿಂಗ್ಬಿಹಾರ
ಗುಡೂರು ವೆಂಕಟ್ ರಾವ್ವೈದ್ಯಕೀಯತೆಲಂಗಾಣ
ಹೆಚ್. ವಿ. ಹಂಡೆವೈದ್ಯಕೀಯತಮಿಳುನಾಡು
ಹ್ಯಾಲಿ ವಾರ್ಸಮಾಜ ಸೇವೆಮೇಘಾಲಯ
ಹರಿ ಮಾಧಬ್ ಮುಖೋಪಾಧ್ಯಾಯ (ಮರಣೋತ್ತರ)ಕಲೆಪಶ್ಚಿಮ ಬಂಗಾಳ
ಹರಿಚರಣ್ ಸೈಕಿಯಾಕಲೆಅಸ್ಸಾಂ
ಹರ್ಮನ್‌ಪ್ರೀತ್ ಕೌರ್ ಭುಲ್ಲರ್ಕ್ರೀಡೆಪಂಜಾಬ್
ಇಂದರ್‌ಜಿತ್ ಸಿಂಗ್ ಸಿಧುಸಮಾಜ ಸೇವೆಚಂಡೀಗಢ
ಜನಾರ್ದನ್ ಬಾಪುರಾವ್ ಬೋಥೆಸಮಾಜ ಸೇವೆಮಹಾರಾಷ್ಟ್ರ
ಜೋಗೇಶ್ ದೌರಿಇತರೆ – ಕೃಷಿಅಸ್ಸಾಂ
ಜುಜರ್ ವಾಸಿವಿಜ್ಞಾನ ಮತ್ತು ಇಂಜಿನಿಯರಿಂಗ್ಮಹಾರಾಷ್ಟ್ರ
ಜ್ಯೋತಿಷ್ ದೇಬ್ನಾಥ್ಕಲೆಪಶ್ಚಿಮ ಬಂಗಾಳ
ಕೆ. ಪಜನಿವೇಲ್ಕ್ರೀಡೆಪುದುಚೇರಿ
ಕೆ. ರಾಮಸಾಮಿವಿಜ್ಞಾನ ಮತ್ತು ಇಂಜಿನಿಯರಿಂಗ್ತಮಿಳುನಾಡು
ಕೆ. ವಿಜಯ್ ಕುಮಾರ್ನಾಗರಿಕ ಸೇವೆತಮಿಳುನಾಡು
ಕಬೀಂದ್ರ ಪುರಕಾಯಸ್ಥ (ಮರಣೋತ್ತರ)ಸಾರ್ವಜನಿಕ ವ್ಯವಹಾರಗಳುಅಸ್ಸಾಂ
ಕೈಲಾಶ್ ಚಂದ್ರ ಪಂತ್ಸಾಹಿತ್ಯ ಮತ್ತು ಶಿಕ್ಷಣಮಧ್ಯಪ್ರದೇಶ
ಕಲಾಮಂಡಲಂ ವಿಮಲಾ ಮೆನನ್ಕಲೆಕೇರಳ
ಕೇವಲ್ ಕಿಶನ್ ಥಕ್ರಾಲ್ವೈದ್ಯಕೀಯಉತ್ತರ ಪ್ರದೇಶ
ಖೇಮ್ ರಾಜ್ ಸುಂದ್ರಿಯಾಲ್ಕಲೆಹರಿಯಾಣ
ಕೊಲ್ಲಕಲ್ ದೇವಕಿ ಅಮ್ಮ ಜಿ.ಸಮಾಜ ಸೇವೆಕೇರಳ
ಕೃಷ್ಣಮೂರ್ತಿ ಬಾಲಸುಬ್ರಮಣಿಯನ್ವಿಜ್ಞಾನ ಮತ್ತು ಇಂಜಿನಿಯರಿಂಗ್ತೆಲಂಗಾಣ
ಕುಮಾರ್ ಬೋಸ್ಕಲೆಪಶ್ಚಿಮ ಬಂಗಾಳ
ಕುಮಾರಸಾಮಿ ತಂಗರಾಜ್ವಿಜ್ಞಾನ ಮತ್ತು ಇಂಜಿನಿಯರಿಂಗ್ತೆಲಂಗಾಣ
ಪ್ರೊ. (ಡಾ.) ಲಾರ್ಸ್-ಕ್ರಿಶ್ಚಿಯನ್ ಕೋಚ್ಕಲೆಜರ್ಮನಿ
ಲಿಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾಸಾಹಿತ್ಯ ಮತ್ತು ಶಿಕ್ಷಣರಷ್ಯಾ
ಮಾಧವನ್ ರಂಗನಾಥನ್ಕಲೆಮಹಾರಾಷ್ಟ್ರ
ಮಾಗಂಟಿ ಮುರಳಿ ಮೋಹನ್ಕಲೆಆಂಧ್ರಪ್ರದೇಶ
ಮಹೇಂದ್ರ ಕುಮಾರ್ ಮಿಶ್ರಾಸಾಹಿತ್ಯ ಮತ್ತು ಶಿಕ್ಷಣಒಡಿಶಾ
ಮಹೇಂದ್ರ ನಾಥ್ ರಾಯ್ಸಾಹಿತ್ಯ ಮತ್ತು ಶಿಕ್ಷಣಪಶ್ಚಿಮ ಬಂಗಾಳ
ಮಾಮಿಡಾಲ ಜಗದೀಶ್ ಕುಮಾರ್ಸಾಹಿತ್ಯ ಮತ್ತು ಶಿಕ್ಷಣದೆಹಲಿ
ಮಂಗಳಾ ಕಪೂರ್ಸಾಹಿತ್ಯ ಮತ್ತು ಶಿಕ್ಷಣಉತ್ತರ ಪ್ರದೇಶ
ಮೀರ್ ಹಾಜಿಭಾಯ್ ಕಸಂಭಾಯ್ಕಲೆಗುಜರಾತ್
ಮೋಹನ್ ನಾಗರ್ಸಮಾಜ ಸೇವೆಮಧ್ಯಪ್ರದೇಶ
ನಾರಾಯಣ ವ್ಯಾಸ್ಇತರೆ – ಪುರಾತತ್ವಮಧ್ಯಪ್ರದೇಶ
ನರೇಶ್ ಚಂದ್ರ ದೇವ್ ವರ್ಮಾಸಾಹಿತ್ಯ ಮತ್ತು ಶಿಕ್ಷಣತ್ರಿಪುರಾ
ನೀಲೇಶ್ ವಿನೋದ್‌ಚಂದ್ರ ಮಾಂಡ್ಲೆವಾಲಾಸಮಾಜ ಸೇವೆಗುಜರಾತ್
ನೂರುದ್ದೀನ್ ಅಹ್ಮದ್ಕಲೆಅಸ್ಸಾಂ
ಒಥವಾಲ್ ತಿರುತಣಿ ಸ್ವಾಮಿನಾಥನ್ಕಲೆತಮಿಳುನಾಡು
ಡಾ. ಪದ್ಮ ಗುರ್ಮೆಟ್ವೈದ್ಯಕೀಯಲಡಾಖ್
ಪಾಲ್ಕೊಂಡ ವಿಜಯ್ ಆನಂದ್ ರೆಡ್ಡಿವೈದ್ಯಕೀಯತೆಲಂಗಾಣ
ಪೋಖಿಲಾ ಲೆಕ್ತೆಪಿಕಲೆಅಸ್ಸಾಂ
ಡಾ. ಪ್ರಭಾಕರ್ ಬಸವಪ್ರಭು ಕೋರೆಸಾಹಿತ್ಯ ಮತ್ತು ಶಿಕ್ಷಣಕರ್ನಾಟಕ
ಪ್ರತೀಕ್ ಶರ್ಮಾವೈದ್ಯಕೀಯಅಮೇರಿಕಾ (USA)
ಪ್ರವೀಣ್ ಕುಮಾರ್ಕ್ರೀಡೆಉತ್ತರ ಪ್ರದೇಶ
ಪ್ರೇಮ್ ಲಾಲ್ ಗೌತಮ್ವಿಜ್ಞಾನ ಮತ್ತು ಇಂಜಿನಿಯರಿಂಗ್ಹಿಮಾಚಲ ಪ್ರದೇಶ
ಪ್ರಸೇನ್‌ಜಿತ್ ಚಟರ್ಜಿಕಲೆಪಶ್ಚಿಮ ಬಂಗಾಳ
ಡಾ. ಪುಣ್ಯಮೂರ್ತಿ ನಟೇಸನ್ವೈದ್ಯಕೀಯತಮಿಳುನಾಡು
ಆರ್. ಕೃಷ್ಣನ್ (ಮರಣೋತ್ತರ)ಕಲೆತಮಿಳುನಾಡು
ಆರ್. ವಿ. ಎಸ್. ಮಣಿನಾಗರಿಕ ಸೇವೆದೆಹಲಿ
ರಬಿಲಾಲ್ ಟುಡುಸಾಹಿತ್ಯ ಮತ್ತು ಶಿಕ್ಷಣಪಶ್ಚಿಮ ಬಂಗಾಳ
ರಘುಪತ್ ಸಿಂಗ್ (ಮರಣೋತ್ತರ)ಇತರೆ – ಕೃಷಿಉತ್ತರ ಪ್ರದೇಶ
ರಘುವೀರ್ ತುಕಾರಾಮ್ ಖೇಡ್ಕರ್ಕಲೆಮಹಾರಾಷ್ಟ್ರ
ರಾಜಸ್ತಪತಿ ಕಾಳಿಯಪ್ಪ ಗೌಂಡರ್ಕಲೆತಮಿಳುನಾಡು
ರಾಜೇಂದ್ರ ಪ್ರಸಾದ್ವೈದ್ಯಕೀಯಉತ್ತರ ಪ್ರದೇಶ
ರಾಮ ರೆಡ್ಡಿ ಮಾಮಿಡಿ (ಮರಣೋತ್ತರ)ಇತರೆ – ಪಶುಸಂಗೋಪನೆತೆಲಂಗಾಣ
ರಾಮಮೂರ್ತಿ ಶ್ರೀಧರ್ಇತರೆ – ರೇಡಿಯೋ ಪ್ರಸಾರದೆಹಲಿ
ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ (ಜೋಡಿ)ವೈದ್ಯಕೀಯಛತ್ತೀಸ್‌ಗಢ
ರತಿಲಾಲ್ ಬೋರಿಸಾಗರ್ಸಾಹಿತ್ಯ ಮತ್ತು ಶಿಕ್ಷಣಗುಜರಾತ್
ರೋಹಿತ್ ಶರ್ಮಾಕ್ರೀಡೆಮಹಾರಾಷ್ಟ್ರ
ಎಸ್. ಜಿ. ಸುಶೀಲಮ್ಮಸಮಾಜ ಸೇವೆಕರ್ನಾಟಕ
ಸಂಗ್ಯುಸಾಂಗ್ ಎಸ್. ಪೋಂಜೆನರ್ಕಲೆನಾಗಾಲ್ಯಾಂಡ್
ಸಂತ ನಿರಂಜನ್ ದಾಸ್ಇತರೆ – ಆಧ್ಯಾತ್ಮಿಕತೆಪಂಜಾಬ್
ಶರತ್ ಕುಮಾರ್ ಪಾತ್ರಕಲೆಒಡಿಶಾ
ಸರೋಜ ಮಂಡಲ್ವೈದ್ಯಕೀಯಪಶ್ಚಿಮ ಬಂಗಾಳ
ಸತೀಶ್ ಶಾ (ಮರಣೋತ್ತರ)ಕಲೆಮಹಾರಾಷ್ಟ್ರ
ಸತ್ಯನಾರಾಯಣ ನುವಾಲ್ವಾಣಿಜ್ಯ ಮತ್ತು ಕೈಗಾರಿಕೆಮಹಾರಾಷ್ಟ್ರ
ಸವಿತಾ ಪುನಿಯಾಕ್ರೀಡೆಹರಿಯಾಣ
ಪ್ರೊ. ಶಫಿ ಶೌಕ್ಸಾಹಿತ್ಯ ಮತ್ತು ಶಿಕ್ಷಣಜಮ್ಮು ಮತ್ತು ಕಾಶ್ಮೀರ
ಶಶಿ ಶೇಖರ್ ವೆಂಪತಿಸಾಹಿತ್ಯ ಮತ್ತು ಶಿಕ್ಷಣಕರ್ನಾಟಕ
ಶ್ರೀರಂಗ ದೇವಾಬಾ ಲಾಡ್ಇತರೆ – ಕೃಷಿಮಹಾರಾಷ್ಟ್ರ
ಶುಭಾ ವೆಂಕಟೇಶ ಅಯ್ಯಂಗಾರ್ವಿಜ್ಞಾನ ಮತ್ತು ಇಂಜಿನಿಯರಿಂಗ್ಕರ್ನಾಟಕ
ಶ್ಯಾಮ್ ಸುಂದರ್ವೈದ್ಯಕೀಯಉತ್ತರ ಪ್ರದೇಶ
ಸಿಮಾಂಚಲ್ ಪಾತ್ರೋಕಲೆಒಡಿಶಾ
ಶಿವಶಂಕರಿಸಾಹಿತ್ಯ ಮತ್ತು ಶಿಕ್ಷಣತಮಿಳುನಾಡು
ಡಾ. ಸುರೇಶ್ ಹನಗವಾಡಿವೈದ್ಯಕೀಯಕರ್ನಾಟಕ
ಸ್ವಾಮಿ ಬ್ರಹ್ಮದೇವ್ ಜಿ ಮಹಾರಾಜ್ಸಮಾಜ ಸೇವೆರಾಜಸ್ಥಾನ
ಟಿ. ಟಿ. ಜಗನ್ನಾಥನ್ (ಮರಣೋತ್ತರ)ವಾಣಿಜ್ಯ ಮತ್ತು ಕೈಗಾರಿಕೆಕರ್ನಾಟಕ
ತಗಾ ರಾಮ್ ಭೀಲ್ಕಲೆರಾಜಸ್ಥಾನ
ತರುಣ್ ಭಟ್ಟಾಚಾರ್ಯಕಲೆಪಶ್ಚಿಮ ಬಂಗಾಳ
ಟೆಚಿ ಗುಬಿನ್ಸಮಾಜ ಸೇವೆಅರುಣಾಚಲ ಪ್ರದೇಶ
ತಿರುವಾರೂರ್ ಭಕ್ತವತ್ಸಲಂಕಲೆತಮಿಳುನಾಡು
ತೃಪ್ತಿ ಮುಖರ್ಜಿಕಲೆಪಶ್ಚಿಮ ಬಂಗಾಳ
ವೀಳಿನಾಥನ್ ಕಾಮಕೋಟಿವಿಜ್ಞಾನ ಮತ್ತು ಇಂಜಿನಿಯರಿಂಗ್ತಮಿಳುನಾಡು
ವೆಂಪತಿ ಕುಟುಂಬ ಶಾಸ್ತ್ರಿಸಾಹಿತ್ಯ ಮತ್ತು ಶಿಕ್ಷಣಆಂಧ್ರಪ್ರದೇಶ
ವ್ಲಾಡಿಮಿರ್ ಮೆಸ್ಟ್‌ವಿರಿಶ್ವಿಲಿ (ಮರಣೋತ್ತರ)ಕ್ರೀಡೆಜಾರ್ಜಿಯಾ
ಯುವ್ನಾಮ್ ಜಾತ್ರಾ ಸಿಂಗ್ (ಮರಣೋತ್ತರ)ಕಲೆಮಣಿಪುರ

author avatar
spardhatimes
error: Content Copyright protected !!