KEA ನೇಮಕಾತಿ 2026: 890 ಕೃಷಿ ಅಧಿಕಾರಿ & ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿ
Karnataka Examinations Authority (KEA) 2026ನೇ ಸಾಲಿನ ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟು 872 + 18 (ಹೈದರಾಬಾದ್-ಕರ್ನಾಟಕ) ಸೇರಿ 890 ಹುದ್ದೆಗಳು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 19ರಿಂದ ಮೇ 10ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು KEA ಅಧಿಕೃತ ಪೋರ್ಟಲ್ cetonline.karnataka.gov.in/kea ನಲ್ಲಿ ಸಲ್ಲಿಸಲು ಸೂಚಿಸಲಾಗಿದೆ.
ನೇಮಕಾತಿ ಪ್ರಮುಖ ವಿವರಗಳು :
ಸಂಸ್ಥೆ: Karnataka Examinations Authority
ಹುದ್ದೆಗಳು: ಕೃಷಿ ಅಧಿಕಾರಿ (AO), ಸಹಾಯಕ ಕೃಷಿ ಅಧಿಕಾರಿ (AAO)
ಒಟ್ಟು ಹುದ್ದೆಗಳು: 872 + 18 (ಹೈದರಾಬಾದ್-ಕರ್ನಾಟಕ)
ಅರ್ಜಿ ವಿಧಾನ: ಆನ್ಲೈನ್
ಅರ್ಜಿ ಆರಂಭ ದಿನಾಂಕ: 19 ಏಪ್ರಿಲ್ 2026
ಅರ್ಜಿ ಕೊನೆ ದಿನಾಂಕ: 10 ಮೇ 2026
ಹುದ್ದೆಗಳ ವಿವರ :
ಈ ನೇಮಕಾತಿಯಲ್ಲಿ 85% ಹುದ್ದೆಗಳು B.Sc (Agriculture) ಅಭ್ಯರ್ಥಿಗಳಿಗೆ ಮೀಸಲಾಗಿದ್ದು, ಉಳಿದ 15% ಹುದ್ದೆಗಳು B.Tech ಹಾಗೂ ಸಂಬಂಧಿತ ಪದವಿ ಹೊಂದಿದವರಿಗೆ ಲಭ್ಯವಿದೆ.
85% ಹುದ್ದೆಗಳು – B.Sc (Agriculture) ಅಭ್ಯರ್ಥಿಗಳಿಗೆ
15% ಹುದ್ದೆಗಳು – B.Tech / ಇತರ ಕೃಷಿ ಸಂಬಂಧಿತ ಪದವಿಗಳಿಗೆ
ಅರ್ಹತೆ :
B.Sc (Agriculture) / B.Sc (Hons) Agriculture
ಅಥವಾ B.Tech (Food Technology, Biotechnology, Agricultural Engineering) ಅಥವಾ ಸಂಬಂಧಿತ B.Sc ಕೋರ್ಸ್ಗಳು
ವಯೋಮಿತಿ :
ಸಾಮಾನ್ಯ ವರ್ಗ: 40 ವರ್ಷ
OBC (2A, 2B, 3A, 3B): 43 ವರ್ಷ
SC/ST/Category-1: 45 ವರ್ಷ
ಅರ್ಜಿ ಶುಲ್ಕ
ಸಾಮಾನ್ಯ/OBC: ₹750
SC/ST/Category-1: ₹500
PwD: ₹250
ಆಯ್ಕೆ ಪ್ರಕ್ರಿಯೆ :
ಕನ್ನಡ ಭಾಷಾ ಪರೀಕ್ಷೆ (ಅರ್ಹತಾ)
ಲಿಖಿತ ಪರೀಕ್ಷೆ (OMR ಆಧಾರಿತ – 2 ಪೇಪರ್ಗಳು, ಪ್ರತಿ 300 ಅಂಕ)
ತಪ್ಪು ಉತ್ತರಕ್ಕೆ 0.75 ಅಂಕ ಕಡಿತ
ಕನಿಷ್ಠ ಅರ್ಹತೆ: 35%
ಪ್ರಮುಖ ದಿನಾಂಕಗಳು :
ಅರ್ಜಿ ಪ್ರಾರಂಭ: 19 ಏಪ್ರಿಲ್ 2026
ಅರ್ಜಿ ಕೊನೆ: 10 ಮೇ 2026
ಶುಲ್ಕ ಪಾವತಿ ಕೊನೆ: 12 ಮೇ 2026
ಕನ್ನಡ ಭಾಷಾ ಪರೀಕ್ಷೆ: 06 ಜೂನ್ 2026
ಲಿಖಿತ ಪರೀಕ್ಷೆ (RPC): 07 ಜೂನ್ 2026
ಲಿಖಿತ ಪರೀಕ್ಷೆ (KK): 14 ಜೂನ್ 2026
ಅರ್ಜಿ ಸಲ್ಲಿಸುವ ವಿಧಾನ :
KEA ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
Direct Recruitment ವಿಭಾಗದಲ್ಲಿ ಸಂಬಂಧಿತ ನೋಟಿಫಿಕೇಶನ್ ಕ್ಲಿಕ್ ಮಾಡಿ
ಮೊಬೈಲ್ ಸಂಖ್ಯೆ & ಇಮೇಲ್ ಮೂಲಕ ನೋಂದಣಿ ಮಾಡಿ
ಅರ್ಜಿ ಫಾರ್ಮ್ ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಆನ್ಲೈನ್ ಮೂಲಕ ಶುಲ್ಕ ಪಾವತಿ ಮಾಡಿ
ಅರ್ಜಿಯನ್ನು ಪರಿಶೀಲಿಸಿ ಸಲ್ಲಿಸಿ
ಪ್ರಿಂಟ್ ತೆಗೆದು ಭವಿಷ್ಯಕ್ಕಾಗಿ ಉಳಿಸಿಕೊಳ್ಳಿ
ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ


